ಚಿತ್ರದುರ್ಗ:
ಮೆದೇಹಳ್ಳಿ ರಸ್ತೆಯನ್ನು ತ್ವರಿತವಾಗಿ ಅಗಲೀಕರಣಗೊಳಿಸಿ ಮುಂದೆ ಆಗಬಹುದಾದ ಅನಾಹುತಗಳನ್ನು ತಪ್ಪಿಸುವಂತೆ ಜೈಹಿಂದ್ ರಕ್ಷಣಾ ವೇದಿಕೆ ಕಾರ್ಯಕರ್ತರು ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.
ಮೆದೇಹಳ್ಳಿಯಲ್ಲಿ ದಿನನಿತ್ಯವೂ ನೂರಾರು ಬಸ್, ಆಟೋ, ಲಘು ವಾಹನಗಳು ಚಲಿಸುತ್ತಿರುತ್ತವೆ. ಇದರ ನಡುವೆ ಫುಟ್‍ಪಾತ್ ವ್ಯಾಪಾರಿಗಳು ರಸ್ತೆಯ ಎರಡು ಬದಿಯಲ್ಲಿಯೂ ಆಕ್ರಮಿಸಿಕೊಂಡಿರುವುದರಿಂದ ವಿಧಿ ಇಲ್ಲದೆ ಪಾದಚಾರಿಗಳು ಇಲ್ಲಿಯೇ ಸಂಚರಿಸಬೇಕು. ಪದೆ ಪದೇ ಸಣ್ಣಪುಟ್ಟ ಅಪಘಾತಗಳು ಸಂಭವಿಸುತ್ತಲೆ ಇರುತ್ತವೆ ಎಂದು ಪ್ರತಿಭಟನಾಕಾರರು ಹೇಳಿದರು
ಅಲ್ಪಸಂಖ್ಯಾತರು ಶವ ಸಂಸ್ಕಾರಕ್ಕಾಗಿ ಖಬರಸ್ತಾನ್‍ಗೆ ಹೋಗುವಾಗ ಬಸ್ ಚಾಲಕ ಜಾಗಕ್ಕಾಗಿ ಹಾರನ್ ಮಾಡಿದ್ದರಿಂದ ಶವ ಸಂಸ್ಕಾರಕ್ಕಾಗಿ ಹೋಗುತ್ತಿದ್ದವರಲ್ಲಿ ಕೆಲವರು ಚಾಲಕನನ್ನು ಥಳಿಸಿದ್ದರಿಂದ ಗುರುವಾರ ಸಂಜೆ ನಗರದಲ್ಲಿ ಪ್ರಕ್ಷುಬ್ದ ವಾತಾವರಣ ತಲೆದೋರಿತ್ತು. ಇಂತಹ ಅವಘಡಗಳು ಆಗಿಂದಾಗ್ಗೆ ನಡೆಯುತ್ತಲೆ ಇರುತ್ತವೆ.
ಪರಿಸ್ಥಿತಿ ಕೈಮೀರಿ ಹೋಗುವ ಮುನ್ನಾ ಮೆದೇಹಳ್ಳಿ ರಸ್ತೆಯನ್ನು ಅಗಲೀಕರಣಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡುವಂತೆ ಪ್ರತಿಭಟನಾನಿರತರು ಜಿಲ್ಲಾಡಳಿತವನ್ನು ಕೋರಿದರು.ಜೈಹಿಂದ್ ರಕ್ಷಣಾ ವೇದಿಕೆ ಸಂಸ್ಥಾಪಕ ಅಧ್ಯಕ್ಷ ಸೈಯದ್ ಅಖ್ತಾರ್, ಸುನೀಲ್, ತಿಪ್ಪೇಸ್ವಾಮಿ, ಅಬ್ದುಲ್ಲಾ, ಅಹ್ಮದ್ ಷರೀಫ್, ಸೈಯದ್, ಪಾಲಣ್ಣ, ಹೇಮಂತ್ ಇನ್ನು ಮುಂತಾದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.