ರಸ್ತೆ ಆಕ್ರಮಿಸಿ ಕಾಂಪೌಂಡ್ ನಿರ್ಮಾಣ : ಆರೋಪ

ಗುಬ್ಬಿ

           ಪಟ್ಟಣದ ಮಗ್ಗದವರ ಬೀದಿಯಲ್ಲಿರುವ ಸಾರ್ವಜನಿಕ ರಸ್ತೆಯು ಸ್ಮಶಾನ, ಕೆ.ಎಚ್.ಬಿ ಕಾಲನಿ ಸೇರಿದಂತೆ ಗದ್ದೆ ಬಯಲಿಗೆ ಕಳೆದ ಹಲವಾರು ವರ್ಷಗಳಿಂದ ಸಂಪರ್ಕಿಸುತ್ತಿದ್ದ 30 ಅಡಿ ಅಗಲದ ರಸ್ತೆಯು 187 ಅಡಿಗಳ ಉದ್ದವಿದೆ. ಈ ರಸ್ತೆ ಪೈಕಿ 15 ಅಡಿಗಳ ಅಗಲದ ರಸ್ತೆಗೆ ಖಾಸಗಿ ವ್ಯಕ್ತಿಯೊಬ್ಬರಿಗೆ ಖಾತೆ ಮಾಡಿದ್ದು ಇದರಿಂದ ಸುಮಾರು 30 ಲಕ್ಷಗಳ ಬೆಲೆಯ ಈ ಸ್ಥಳವನ್ನು ಆಕ್ರಮಿಸಿ ಕಾಂಪೌಂಡ್ ನಿರ್ಮಾಣಕ್ಕೆ ಖಾಸಗಿ ವ್ಯಕ್ತಿಯು ಮುಂದಾಗಿದ್ದಾರೆ. ಇದರಿಂದ ಪಟ್ಟಣ ಪಂಚಾಯ್ತಿಗೆ ನಷ್ಟವಾಗುತ್ತಿದೆ ಎಂದು ಪಟ್ಟಣ ಪಂಚಾಯ್ತಿ ಸದಸ್ಯ ಮಹಮದ್ ಸಾಧಿಕ್ ಆರೋಪಿಸಿದರು.

         ಪಟ್ಟಣದ ಎಸ್.ಎಲ್.ಎನ್ ಕಂಫಟ್ರ್ಸ್‍ನಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಸಾರ್ವಜನಿಕರ ಉಪಯೋಗಕ್ಕೆ ನಿಗದಿಯಾಗಿದ್ದ ರಸ್ತೆಯನ್ನು ಪಟ್ಟಣ ಪಂಚಾಯ್ತಿ ಅಧಿಕಾರಿಗಳು ಸದರಿ ಜಾಗವನ್ನು ಖಾಸಗಿ ವ್ಯಕ್ತಿಗೆ ಖಾತೆ ಮಾಡಿರುವುದು ಬೆಳಕಿಗೆ ಬಂದಿದ್ದು ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

          ದಾರಿಯ ಪಕ್ಕದಲ್ಲಿ 5 ಗುಂಟೆ ಜಮೀನು ಕ್ರಯಕ್ಕೆ ಪಡೆದ ವ್ಯಕ್ತಿ 10 ವರ್ಷಗಳ ಬಳಿಕ ಸಾರ್ವಜನಿಕ ರಸ್ತೆಯಲ್ಲಿ 15 ಅಡಿಗಳ ಅಗಲ 187 ಅಡಿಗಳ ಉದ್ದದ ಸ್ಥಳವನ್ನು ಒತ್ತುವರಿ ಮಾಡಲು ಮುಂದಾಗಿದ್ದರು. ಈ ಸಂದರ್ಭದಲ್ಲಿ ಪಪಂ ಸದಸ್ಯರಾದ ನಾನು ಮತ್ತು ನೇತ್ರಾವತಿ ಅವರು ರಸ್ತೆಯನ್ನು ಉಳಿಸಿಕೊಳ್ಳಲು ನ್ಯಾಯಾಲಯದ ಮೆಟ್ಟಿಲೇರಿ 2016 ರಲ್ಲಿ ಪಟ್ಟಣ ಪಂಚಾಯ್ತಿ ಸ್ವತ್ತನ್ನು ಹಾಗೆಯೇ ಉಳಿಸಿಕೊಳ್ಳಲಾಗಿತ್ತು.

          ನಂತರದಲ್ಲಿ ಮೇಲ್ಮನವಿ ಸಲ್ಲಿಸಿದ ವ್ಯಕ್ತಿಯು ಈ ಪ್ರಕರಣವನ್ನು ಮುಂದುವರೆಸಿದ್ದರು. ಈ ಮಧ್ಯೆ 2018 ರ ಆಗಸ್ಟ್ ತಿಂಗಳಲ್ಲಿ ಪಟ್ಟಣ ಪಂಚಾಯ್ತಿ ಚುನಾವಣೆ ಸಂದರ್ಭದಲ್ಲಿ ಮುಖ್ಯಾಧಿಕಾರಿ, ಕಂದಾಯ ಅಧಿಕಾರಿ, ಎಂಜಿನಿಯರ್ ಇತರೆ ಸಿಬ್ಬಂದಿಗಳು ಕಾಂಪ್ರಮೈಸ್ ಪಿಟೀಷನ್ ಮೂಲಕ ನ್ಯಾಯಾಲಯದಲ್ಲಿ ಹೂಡಿದ್ದ ಮೊಕದ್ದಮೆಯನ್ನು ನಮ್ಮ ಗಮನಕ್ಕೆ ತರದೆ ರಾಜಿ ಮಾಡಿಕೊಂಡಿದ್ದಾರೆ. ಅಧ್ಯಕ್ಷರ ಚುನಾವಣೆ ಇನ್ನೂ ನಡೆಯದ ಕಾರಣ ಈ ಸಂದರ್ಭವನ್ನು ಬಳಸಿಕೊಂಡು ಸಾರ್ವಜನಿಕ ಸ್ವತ್ತನ್ನು ಖಾಸಗಿ ವ್ಯಕ್ತಿಗೆ ಖಾತೆ ಮಾಡಿಕೊಟ್ಟಿದ್ದಾರೆ ಎಂದು ತಿಳಿಸಿದರು.

          ಈ ಬಗ್ಗೆ ಜಿಲ್ಲಾಡಳಿತ ಸೂಕ್ತವಾದ ಕ್ರಮಕೈಗೊಂಡು ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು. ಸುದ್ದಿಗೋಷ್ಠಿಯಲ್ಲಿ ಮುಖಂಡರಾದ ಸಲಿಂಪಾಷಾ, ಜಿ.ಎಸ್.ಮಂಜುನಾಥ್, ಮಹಮದ್ ರಫಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap