ತುರುವೇಕೆರೆ
ಕಳೆದ ಹತ್ತಾರು ವರ್ಷಗಳಿಂದ ಡಾಂಬರುಕಾಣದೆಗುಂಡಿ ಬಿದ್ದು ಹಾಳಾಗಿದ್ದ ಗಡಿ ಭಾಗದ ಪ್ರಮುಖ ರಸ್ತೆಗಳ ಅಭಿವೃದ್ದಿಗೆಕ್ರಮ ಕೈಗೊಳ್ಳವುದಾಗಿ ಶಾಸಕ ಮಸಾಲೆ ಜಯರಾಮ್ ತಿಳಿಸಿದರು.
ತಾಲ್ಲೂಕಿನದಬ್ಬೇಘಟ್ಟ ಹೋಬಳಿಯ ನಾಗಮಂಗಲ ಗಡಿ ಭಾಗದಲ್ಲಿರುವ ಬೀಚನಹಳ್ಳಿ ಪುರಗ್ರಾಮದಲ್ಲಿ ನಿರ್ಮಾಣ ಮಾಡುತ್ತಿರುವ ಪಿ.ಎಂ.ಜಿ.ಎಸ್.ವೈ ನಿಂದ 1.5 ಕೋಟಿರೂ ವೆಚ್ಚದಲ್ಲಿ ನಿರ್ಮಿಸುತ್ತಿರುವ ನಮ್ಮಗ್ರಾಮ ನಮ್ಮರಸ್ತೆಯಡಾಂಬರೀಕರಣಕ್ಕೆ ಪೂಜೆ ಸಲ್ಲಿಸಿ ಮಾತನಾಡುತ್ತಾತಾಲ್ಲೂಕಿನಗಡಿಭಾಗದ ಹಾಗೂ ಹಳ್ಳಿಗಳಿಗೆ ಸಂಪರ್ಕಕಲ್ಪಿಸುವ ರಸ್ತೆಗಳು ಹಾಳಾಗಿದ್ದು ಇದುವರೆಗೂ ರಸ್ತೆಗಳು ಡಾಂಬರೀಕರಣವನ್ನೆಕಂಡಿಲ್ಲಗ್ರಾಮಸ್ಥರು ರಾಜಕಾರಣಿಗಳಿಗೆ ಮತ್ತು ಸಂಬಂಧಪಟ್ಟ ಅಧಿಕಾರಿಗಳ ಬಗ್ಗೆ ಬೇಸರ ವ್ಯಕ್ತ ಪಡಿಸುತ್ತಿದ್ದಾರೆ.
ಇದನ್ನು ಮನಗೊಂಡು ಸರ್ಕಾರದಿಂದರಸ್ತೆಅಭಿವೃದ್ದಿಗಾಗಿ ವಿಶೇಷ ಅನುದಾನವನ್ನುತಂದುರಸ್ತೆಅಭಿವೃದ್ದಿ ಪಡಿಸಲಾಗುತ್ತಿದೆ.ದಬ್ಬೇಘಟ್ಟ ಹೋಬಳಿಯಲ್ಲಿ ಕುಡಿಯುವ ನೀರಿನಅಭಾವವಿದ್ದು, ಈಗಾಗಲೇ ಸಂಬಂಧ ಪಟ್ಟ ಅಧಿಕಾರಿಗಳ ಜೊತೆ ಚರ್ಚಿಸಿದ್ದು ಮುಂದಿನ ದಿನಗಳಲ್ಲಿ ಹಂತ ಹಂತವಾಗಿಕುಡಿಯುವ ನೀರು ಕೆರೆಗಳಿಗೆ ಹೇಮಾವತಿ ನಾಲೆಯಿಂದಏತ ನೀರಾವರಿ ಮೂಲಕ ನೀರು ಹರಿಸಿ ಅಂತಃಜಲ ವೃದ್ದಿಗೆ ಅಗತ್ಯಕ್ರಮ ಕೈಗೊಳ್ಳಲಾಗುವುದು
ಇದೇ ಸಂದರ್ಭದಲ್ಲಿಕಾರ್ಯಪಾಲಕಅಭಿಯಂತರಆನಂದ್‍ಕುಮಾರ್ ಮಾತನಾಡಿಗುಣಮಟ್ಟರಸ್ತೆ ನಿರ್ಮಾಣಕ್ಕೆಅಗತ್ಯಕ್ರಮ ಕೈಗೊಳ್ಳುತ್ತೇವೆ. ಕಳಪೆ ಕಾಮಗಾರಿ ನಿರ್ಮಿಸಿದರೆ ಗುತ್ತಿಗೆದಾರರ ಬಗ್ಗೆ ಅಗತ್ಯಕ್ರಮ ಕೈಗೊಳ್ಳಲಾಗುವುದು ಇದರಲ್ಲಿಯಾವುದೇರಾಜೀಇಲ್ಲ. ಸರ್ಕಾರದಿಂದರಸ್ತೆಅಭಿವೃದ್ದಿಗಾಗಿ ಹೆಚ್ಚಿನಅನುದಾನ ನೀಡಿದೆ. ಈಗಾಗಲೇ ತಾಲ್ಲೂಕಿನಲ್ಲಿ ಹಾಳಾಗಿರುವ ರಸ್ತೆಗಳನ್ನು ಗುರುತಿಸಿದ್ದು ಹಂತ ಹಂತವಾಗಿಟೆಂಡರ್‍ಕರೆದುಗುಣಮಟ್ಟದರಸ್ತೆ ನಿರ್ಮಾಣ ಮಾಡಲಾಗುವುದೆಂದರು. ಈ ಸಂದರ್ಭದಲ್ಲಿ ಸಹಾಯಕ ಕಾರ್ಯಪಾಲಕ ಅಭಿಯಂತರ ತೇಜುಮೂರ್ತಿ, ಸಹಾಯಕಇಂಜಿನಿಯರ್ ಮುನಿಸ್ವಾಮಪ್ಪ, ಗುತ್ತಿಗೆದಾರ ಸತೀಶ್, ಮುಖಂಡರುಗಳಾದ ವಿ.ಬಿ. ಸುರೇಶ್, ಮತ್ತುಬೀಚನಹಳ್ಳಿ ಗ್ರಾಮಸ್ಥರು ಉಪಸ್ಥಿತರಿದ್ದರು.