ಕುಣಿಗಲ್
ಅನೀತಿ, ಭ್ರಷ್ಟಾಚಾರ ಸ್ವಜನಪಕ್ಷಪಾತ ಹಾಗೂ ಕುಟುಂಬ ರಾಜಕಾರಣವನ್ನು ಧಿಕ್ಕರಿಸಿ ಸಮಾಜದಲ್ಲಿ ತುಳಿತಕ್ಕೊಳಗಾಗಿರುವ ಜನರ ಪರವಾಗಿ ನಿಸ್ವಾರ್ಥ ಸೇವೆ ಮಾಡುವಂತಹ ಅರ್ಹ ಅಭ್ಯರ್ಥಿಯನ್ನ ಗೆಲ್ಲಿಸುವ ಮೂಲಕ ಬ್ರಷ್ಟಾಚಾರದಿಂದ ತುಂಬಿ ತುಳುಕುತ್ತಿರುವ ನಮ್ಮ ಪ್ರಜಾಪ್ರಭುತ್ವ ರಾಷ್ಟ್ರವನ್ನ ಉಳಿಸುವಂತಹ ವ್ಯಕ್ತಿಗೆ ಮತಹಾಕಿ ಎಂದು ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯಾಧ್ಯಕ್ಷ ರವಿಕೃಷ್ಣಾರೆಡ್ಡಿ ಕರೆನೀಡಿದರು.
ಅವರು ಕುಣಿಗಲ್ ಪಟ್ಟಣ ಸೇರಿದಂತೆ ತಾಲ್ಲೂಕಿನಾದ್ಯಂತ ಸಂಚರಿಸಿ ಮತದಾರರಿಗೆ ಕರಪತ್ರವನ್ನ ವಿತರಿಸಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಪಕ್ಷೇತ್ರವಾಗಿ ಸ್ಪರ್ಧಿಸಿರುವ ತಮ್ಮ ಬೆಂಬಲಿತ ಅಭ್ಯರ್ಥಿ ರಘು ಜಾಣಗೆರೆ ಅವರ ಪರ ಮತಯಾಚನೆ ಮಾಡುತ್ತ ರಾಜ್ಯ ಮತ್ತು ದೇಶದಲ್ಲಿ ರಾಜಕೀಯ ಅರಾಜಕತೆ ಉಂಟಾಗಿದೆ.
ನಮ್ಮ ರಾಜ್ಯದ ಬಜೆಟ್ ಬಗ್ಗೆ ಕೇಳಿದರೆ ಸಾವಿರಾರು ಕೋಟಿ ಆದರೆ ಅಭಿವೃದ್ದಿ ಮಾತ್ರ ಅರೇಬರೆ ಇಂತಹ ರಾಜಕೀಯ ವ್ಯವಸ್ಥೆ ಸ್ವಾತಂತ್ರ್ಯ ಬಂದು 70ವರ್ಷವಾದರೂ ಇದೆ ಎಂದರೆ ಆಶ್ಚರ್ಯವಾಗುತ್ತದೆ ಎಂದು ಆತಂಕವ್ಯಕ್ತಪಡಿಸಿದ ಅವರು ಬೃಹತ್ ಪ್ರಜಾಪ್ರಭುತ್ವ ರಾಷ್ಟ್ರ ನಮ್ಮದು ಇಲ್ಲಿ ಮತದಾರನೇ ಪ್ರಭು. ರಾಜಕಾರಣಿ ಕೊಡುವ ಎಂಜಲು ಖಾಸಿಗೆ ಕೈಯೊಡ್ಡಿ ಅವರ ಗುಲಾಮರಾಗದೇ ಜನಸಾಮಾನ್ಯರ ಸೇವೆ ಮಾಡುವ ನಿಷ್ಠಾವಂತ ಪ್ರಾಮಾಣಿಕ ರಾಜಕಾರಣಿಗಳನ್ನ ಗೆಲ್ಲಿಸಿ.
ಆ ಮೂಲಕ ಸಮಾಜದ ಉದ್ದಾರವನ್ನ ಕಾಣಬೇಕು. ಬರೀ ಹೆಂಡ-ಗುಂಡು ಮಾಂಸ, ಹಣದ ಆಸೆಗೆ ತಮ್ಮ ಅಮೂಲ್ಯವಾದ ಮತವನ್ನ ಮಾರಿಕೋಳ್ಳದೆ ಉತ್ತಮರನ್ನ ಆಯ್ಕೆ ಮಾಡಿ ಎಂದ ಅವರು ಇದೇ ತಾಲ್ಲೂಕಿ ಜಾಣಗೆರೆಯ ಯುವಕ ರಘುಜಾಣಗೆರೆ ಎಂಬ ಪ್ರಾಮಾಣಿಕ ವ್ಯಕ್ತಿಯನ್ನ ನಮ್ಮ ಕರ್ನಾಟಕ ರಾಷ್ಟ್ರ ಸಮಿತಿಯು ಬೆಂಬಲಿಸಿ ಪಕ್ಷೇತ್ರವಾಗಿ ಕಣಕ್ಕಿಳಿಸಿದ್ದು ಈತನ ವಿಶಲ್ ಗುರುತಿಗೆ ಮತಹಾಕಿ ಜಯಶೀಲನನ್ನಾಗಿ ಮಾಡಿ ಎಂದು ಮತಯಾಚಿಸಿದರು.
ಲೋಕಸಭಾ ಅಭ್ಯರ್ಥಿ ರಘುಜಾಣಗೆರೆ ಮಾತನಾಡಿ ನಾನು ಬಿ.ಫಾರ್ಮಸಿ ಮಾಡಿ ಸ್ವಯಂ ಉದ್ಯೋಗದಲ್ಲಿ ನಿಷ್ಠಾವಂತನಾಗಿ ಬದುಕು ಕಂಡುಕೊಂಡಿದ್ದೇನೆ. ನನಗೆ ರಾಜ್ಯದ ಹೆಸರಾಂತ ಹೋರಾಟಗಾರರಾದ ಎಸ್.ಆರ್. ಹೀರೇಮಠ್ ಹಾಗೂ ರವಿಕೃಷ್ಣಾರೆಡ್ಡಿ ಯವರಂತಹ ಭ್ರಷ್ಟಾಚಾರ ವಿರೋಧಿ ಹೋರಾಟಗಾರರ ಜೊತೆಯಲ್ಲಿ ಸೇವೆ ಮಾಡುವ ಮೂಲಕ ಸಮಾಜದ ವಿವಿಧ ಸ್ತರಗಳಲ್ಲಿ ಉತ್ತಮ ಸಾಮಾಜಿಕ ಸೇವೆಗಳನ್ನ ಮಾಡುತ್ತಾ ಬಂದಿದ್ದೇನೆ. ಇಂದಿನ ಭ್ರಷ್ಟಾಚಾರ, ಅನೀತಿ,ಅತ್ಯಾಚಾರಗಳು ತಾಂಡವಾಡುತ್ತಿವೆ ಇಂತಹ ಅವ್ಯವಸ್ಥೆಯನ್ನು ಸರಿಪಡಿಸಲು ನನ್ನಂತಹ ಯುವಕರ ಸೇವೆ ಅಗತ್ಯ ಎಂದು ಬಾವಿಸಿ ಈ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ.
ಉತ್ತಮ ಸುಭದ್ರ ರಾಜ್ಯ –ದೇಶವನ್ನ ಕಟ್ಟುವ ಕನಸು ಕಂಡಿರುವ ನನಗೆ ಮತನೀಡಿ ಎಂದರು. ಇವರಿಗೆ ಬೆಂಬಲವಾಗಿ ಲಂಚಮುಕ್ತ ಕರ್ನಾಟಕ ನಿರ್ಮಾಣವೇದಿಕೆಯ ಜಿಲ್ಲಾ ಅಧ್ಯಕ್ಷ ಹೆಚ್.ಜಿ.ರಮೇಶ್, ತಾಲ್ಲೂಕು ಅಧ್ಯಕ್ಷ ಎಂ.ಡಿ. ಮೋಹನ್, ಪದಾಧಿಕಾರಿಗಳಾ ವಿಷ್ಣುವಿಜಯ, ಹೇಮಂತ್, ದೇವರಾಜ, ಗುರು, ಸುರೇಶ್ ಮುಂತಾದವರು ಭಾಗವಹಿಸಿದ್ದರು.