ಬೆಂಗಳೂರು
ಪಶ್ಚಿಮ ಆಫ್ರಿಕಾದ ಸೆನಗಲ್‍ನಲ್ಲಿ 4 ತಿಂಗಳ ಹಿಂದೆ ಬಂಧನಕ್ಕೊಳಗಾಗಿದ್ದ ಕರಾವಳಿ ಮೂಲದ ಭೂಗತ ದೊರೆ ರವಿ ಪೂಜಾರಿ ಪರಾರಿಯಾಗಿದ್ದಾನೆ.
ನಕಲಿ ಪಾಸ್‍ಪೋರ್ಟ್ ಆರೋಪದಡಿ ಬಂಧಿತನಾಗಿದ್ದ ರವಿ ಪೂಜಾರಿ ಎಲ್ಲಿಗೆ ಹೇಗೆ ಪರಾರಿಯಾಗಿದ್ದಾನೆ ಎನ್ನುವುದು ಸದ್ಯಕ್ಕೆ ತಿಳಿದುಬಂದಿಲ್ಲ ನ್ಯಾಯಾಲಯದಿಂದ ಜಾಮೀನು ಪಡೆದು ಜೈಲಿನಿಂದ ಬಿಡುಗಡೆಯಾದ ರವಿ ಪೂಜಾರಿ ಸೆನೆಗಲ್ ನಿಂದ ಪರಾರಿಯಾಗಿದ್ದಾನೋ ಅಥವಾ ಜೈಲಿನಿಂದಲೇ ಪರಾರಿಯಾಗಿದ್ದಾನೋ ಎನ್ನುವುದು ಖಚಿತವಾಗಿಲ್ಲ. ರವಿ ಪೂಜಾರಿ ಪರಾರಿಯಾಗಿದ್ದಾನೆ ಎಂದು ಸೆನೆಗಲ್ ಪತ್ರಿಕೆಗಳು ವರದಿ ಮಾಡಿವೆ.
ರವಿ ಪೂಜಾರಿ ಪರಾರಿಯಾಗಿರುವ ಬಗ್ಗೆ ಪೊಲೀಸ್ ವಲಯದಲ್ಲೂ ಚರ್ಚೆ ಆರಂಭವಾಗಿದೆ. ಆದರೆ ಹಿರಿಯ ಪೆÇಲೀಸ್ ಅಧಿಕಾರಿಗಳು ಈ ಕುರಿತು ಮಾಹಿತಿ ನೀಡಲು ನಿರಾಕರಿಸಿದ್ದಾರೆ. ರವಿ ಪೂಜಾರಿ ಸೆನೆಗಲ್‍ನಿಂದ ಪರಾರಿಯಾಗಿದ್ದಾನೆ ಎಂದು ಅಧಿಕೃತವಾಗಿ ಯಾರೂ ತಿಳಿಸಿಲ್ಲ.
ಹಲವಾರು ಪ್ರಕರಣಗಳಲ್ಲಿ ಭಾರತಕ್ಕೆ ಬೇಕಾಗಿದ್ದ ರವಿ ಪೂಜಾರಿಯನ್ನು ಕಾನೂನು ಹೋರಾಟದಡಿ ಗಡೀಪಾರು ಮಾಡುವ ಭಾರತದ ಪೊಲೀಸರ ಪ್ರಯತ್ನಕ್ಕೆ ತಣ್ಣೀರು ಎರಚಿದಂತಾಗಿದೆ.ರವಿ ಪೂಜಾರಿಯನ್ನು ಕರೆತರಲು ಬೆಂಗಳೂರು, ಮುಂಬೈ ಪೊಲೀಸರು ಕಳೆದ 3 ತಿಂಗಳಿಂದ ಸೆನಗಲ್‍ನಲ್ಲಿ ಭಾರೀ ಪ್ರಯತ್ನ ನಡೆಸಿದ್ದರು.
ಆತನ ವಿರುದ್ಧ ದಾಖಲಾಗಿರೋ ಪ್ರಕರಣಗಳು ಸಾಕ್ಷ್ಯಾಧಾರಗಳನ್ನು ಫ್ರೆಂಚ್ ಭಾಷೆಗೆ ಭಾಷಾಂತರ ಮಾಡಿ ನ್ಯಾಯಾಲಯಕ್ಕೆ ಸಲ್ಲಿಸಿದ್ದರು. ವಿಚಾರಣೆ ಅಂತಿಮ ಹಂತದಲ್ಲಿದ್ದು, ಹಸ್ತಾಂತರ ಆಗುವ ನಿರೀಕ್ಷೆ ಇತ್ತು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ