ಪೊಲೀಸರ ಮುಂದೆ ತನ್ನ ಮಹತ್ವಾಕಾಂಕ್ಷೆ ಬಾಯ್ಬಿಟ್ಟ ರವಿ ಪೂಜಾರಿ..!

ಬೆಂಗಳೂರು

    ಕರ್ನಾಟಕದ ಪೋಲೀಸರು ಬಂಧಿಸಿ ಕರೆತಂದಿರುವ ಭೂಗತ ಪಾತಕಿ ರವಿಪೂಜಾರಿ ಅಚ್ಚರಿಯ ಸಂಗತಿಯನ್ನು ಬಿಚ್ಚಿಟ್ಟಿದ್ದು ಕರಾವಳಿ ಭೂಗತ ಜಗತ್ತಿನ ದೊರೆಯಾಗಲು ತಾನು ಹವಣಿಸುತ್ತಿರುವಾಗಲೇ ಬಂಧಿತನಾಗಿದ್ದಕ್ಕೆ ಪೋಲೀಸರ ಮುಂದೆ ಹಳಹಳಿಸಿದ್ದಾನೆ.

   ಕರಾವಳಿ ಭೂಗತ ಜಗತ್ತು ಹಾಗೂ ಹಲವು ವ್ಯವಹಾರಗಳ ನಿಯಂತ್ರಣ ಹೊಂದಿದ್ದ ಭೂಗತ ದೊರೆಯೊಬ್ಬರಿಗೆ ಆರೋಗ್ಯ ಸರಿಯಿಲ್ಲ ಎಂಬುದು ಬಹಿರಂಗವಾದ ಮೇಲೆ ಅಲ್ಲಿನ ಭೂಗತ ಜಗತ್ತಿಗೆ ದೊರೆಯಾಗಬೇಕು ಎಂದು ನಾನು ಮಹತ್ವಾಕಾಂಕ್ಷೆ ಇರಿಸಿಕೊಂಡಿದ್ದೆ.ಆದರೆ ಅಷ್ಟರಲ್ಲಿ ಬಂಧಿತನಾದೆ ಎಂದು ರವಿ ಪೂಜಾರಿ ಬಾಯಿಬಿಟ್ಟಿದ್ದಾರೆ.

    ಶಬನಮ್ ಡೆವಲಪರ್ಸ್ ಡಬಲ್ ಮರ್ಡರ್ ಕೇಸ್ ಹಾಗೂ ವಿವಿಧ ರಾಜಕಾರಣಿಗಳನ್ನು ಹಣಕ್ಕಾಗಿ ಬೆದರಿಸುತ್ತಿದ್ದ ರವಿಪೂಜಾರಿಯ ಮೇಲೆ ನಲವತ್ತಾರು ಪ್ರಕರಣಗಳು ವಿವಿಧ ಕಡೆ ದಾಖಲಾಗಿದ್ದು ಈ ಎಲ್ಲ ಪ್ರಕರಣಗಳನ್ನು ಪೋಲೀಸರು ಕೂಲಂಕುಶವಾಗಿ ತನಿಖೆ ಮಾಡುತ್ತಿದ್ದಾರೆ.
ಆತ ಯಾರ್ಯಾರಿಗೆ ಬೆದರಿಕೆ ಹಾಕಿದ ಎಂಬುದರಿಂದ ಹಿಡಿದು ಪಾತಕ ಕೃತ್ಯಗಳನ್ನು ಹೇಗೆ ಮಾಡುತ್ತಿದ್ದ ಎಲ್ಲೆಲ್ಲಿ ಮಾಡಿಸಿದ್ದ ಎಂಬುದರ ಕುರಿತಂತೆ ಪೋಲೀಸರು ವ್ಯಾಪಕ ತನಿಖೆ ನಡೆಸುತ್ತಿದ್ದಾರೆ.

    ಹಣಕ್ಕಾಗಿ ಹಲವರನ್ನು ಪೀಡಿಸುವುದರಿಂದ ತನಗೆ ನಿರೀಕ್ಷಿತ ಪ್ರಮಾಣದಲ್ಲಿ ಲಾಭವಾಗುತ್ತಿರಲಿಲ್ಲ.ಹೀಗಾಗಿ ಇತ್ತೀಚಿನ ಮಾಹಿತಿಯೊಂದರ ಆಧಾರದ ಮೇಲೆ ಕರಾವಳಿ ಭೂಗತ ಜಗತ್ತಿನ ಮೇಲೆ ನಿಯಂತ್ರಣ ಸಾಧಿಸಲು ಬಯಸಿದೆ.ಇಂತಹ ನಿಯಂತ್ರಣ ಸಾಧಿಸಲು ಅಗತ್ಯವಾದ ತಯಾರಿಯನ್ನೂ ನಡೆಸಿದ್ದೆ.ಆದರೆ ನನ್ನ ಇಚ್ಚೆ ಪೂರ್ಣವಾಗುವುದರ ಒಳಗೆ ಬಂಧಿತನಾದೆ.ಇನ್ನೂ ಸ್ವಲ್ಪ ಕಾಲವಾಗಿದ್ದಿದ್ದರೆ ಕರಾವಳಿ ಭೂಗತ ಜಗತ್ತಿಗೆ ನಾನೇ ದೊರೆಯಾಗುತ್ತಿದ್ದೆ ಎಂದು ರವಿ ಪೂಜಾರಿ ಹೇಳಿಕೊಂಡಿದ್ದಾನೆ.

   ಆಕ್ರವiವಾಗಿ ಶಸ್ತ್ರಾಸ್ತ್ರ ಮಾರಾಟ ಮಾಡುತ್ತಿದ್ದ ಬಗ್ಗೆ ಆತ ನೀಡಿರುವ ಹೇಳಿಕೆ ಪೋಲೀಸರನ್ನು ಅಚ್ಚರಿಕೆ ತಳ್ಳಿದೆ ಎಂದು ಮೂಲಗಳು ಹೇಳಿದ್ದು,ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ಶಸ್ತ್ರಾಸ್ತ್ರಗಳಿಗೆ ಹೆಚ್ಚಿನ ಬೇಡಿಕೆಯೇ ಇರಲಿಲ್ಲ ಎಂದಿದ್ದಾನೆ.ಮೊದಲನೆಯದಾಗಿ ಬೆಂಗಳೂರಿನಲ್ಲಿ ಮುಂಬೈ ರೀತಿಯ ಭೂಗತ ಜಗತ್ತಿಲ್ಲ.ಹೀಗಾಗಿ ಇಲ್ಲಿ ಗನ್ ಕಲ್ಚರ್ ಇಲ್ಲ.ಎಲ್ಲಕ್ಕಿಂತ ಮುಖ್ಯವಾಗಿ ಯಾರ್ಯಾರಿಗೆ ಗನ್ ಬೇಕೋ?ಅವರಿಗೆ ಗನ್ ಪೂರೈಸಲು ಬೆಂಗಳೂರಿನಲ್ಲಿಯೇ ಹಲವು ಅಡ್ಡೆಗಳಿವೆ.

   ಹೀಗಾಗಿ ಇತ್ತೀಚಿನ ದಿನಗಳಲ್ಲಿ ನನಗೆ ಗನ್ ಒದಗಿಸಿ ಎಂದು ಕೇಳುವವರ ಸಂಖ್ಯೆಯೇ ಕುಸಿದು ಹೋಗಿದೆ.ಇದೇ ರೀತಿ ಹಣಕ್ಕಾಗಿ ಬೇಡಿಕೆ ಮುಂದಿಟ್ಟರೆ ಆ ಕುರಿತು ದೂರು ನೀಡುವವರೇ ಹೆಚ್ಚು.ಇದೇ ಕಾರಣಕ್ಕಾಗಿ ಬೇಸತ್ತಿದ್ದ ನನಗೆ ಭೂಗತ ದೊರೆಯೊಬ್ಬರಿಗೆ ಆರೋಗ್ಯ ಸರಿಯಿಲ್ಲ ಎಂಬ ಮಾಹಿತಿ ಲಭ್ಯವಾಯಿತು.ಈ ಹಿನ್ನೆಲೆಯಲ್ಲಿ ಕರಾವಳಿ ಭೂಗತ ಜಗತ್ತಿನ ಮೇಲೆ,ಆ ಮೂಲಕ ಅಲ್ಲಿನ ವ್ಯವಹಾರಗಳ ಮೇಲೆ ನಿಯಂತ್ರಣ ಸಾಧಿಸಲು ಬಯಸಿದೆ.

    ಒಂದು ವೇಳೆ ಆ ಕೆಲಸ ಸಾಧಿತವಾಗಿದ್ದರೆ ನಾನು ನೆಮ್ಮದಿಯಿಂದಿರಬಹುದಿತ್ತು.ಹಣಕ್ಕಾಗಿ ಉದ್ಯಮಿಗಳು,ರಾಜಕಾರಣಿಗಳನ್ನು ದೂರವಾಣಿಯ ಮೂಲಕ ಹೆದರಿಸುವ ಪ್ರಮೇಯವೇ ಇರಲಿಲ್ಲ ಎಂದು ರವಿ ಪೂಜಾರಿ ಸಿಸಿಬಿ ಪೋಲೀಸರು ತನಿಖೆ ನಡೆಸುತ್ತಿರುವ ಸಂದರ್ಭದಲ್ಲಿ ಬಾಯಿಬಿಟ್ಟಿದ್ದಾನೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ  

Recent Articles

spot_img

Related Stories

Share via
Copy link