ಸಂಗೊಳ್ಳಿ ರಾಯಣ್ಣ ಬಲಿದಾನದ ದಿನ ಆಚರಣೆ

ಹುಳಿಯಾರು

      ತ್ಯಾಗ ಬಲಿದಾನಕ್ಕೆ ಮತ್ತೊಂದು ಹೆಸರು ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಎಂದು ಹುಳಿಯಾರು ಕನಕ ಯುವ ಸೇನೆಯ ಅಧ್ಯಕ್ಷ ಕೆ.ಪಿ.ಮಂಜು ಅಭಿಪ್ರಾಯಪಟ್ಟರು.

       ಹುಳಿಯಾರಿನಲ್ಲಿ `ಸಂಗೊಳ್ಳಿ ರಾಯಣ್ಣ ಬಲಿದಾನದ ದಿನ’ ಅಂಗವಾಗಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ದೇಶದಲ್ಲಿ ಬ್ರಿಟಿಷ್ ಆಳ್ವಿಕೆಯಲ್ಲಿ ಹೋರಾಡಿ ಮಡಿದವರಲ್ಲಿ ಮೊದಲು ನಿಲ್ಲುವುದು ಕಿತ್ತೂರು ರಾಣಿ ಚೆನ್ನಮ್ಮ ಅವರ ದತ್ತು ಪುತ್ರ, ಬಲಗೈ ಬಂಟನಾಗಿದ್ದ ಸಂಗೊಳ್ಳಿ ರಾಯಣ್ಣ. ದೇಶ ಪ್ರೇಮವನ್ನು ಸಾರುವ ಜನಪ್ರತಿನಿಧಿಗಳು ದೇಶಕ್ಕಾಗಿ ಪ್ರಾಣ ಬಲಿದಾನ ಮಾಡಿದ ಸಂಗೊಳ್ಳಿ ರಾಯಣ್ಣ ಅವರನ್ನು ನೆನಪು ಮಾಡಿಕೊಳ್ಳದಿರುವುದು ನಿಜಕ್ಕೂ ದುರದೃಷ್ಟ ಎಂದು ವಿಷಾದಿಸಿದರು.

         ಕನಕ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೃಷ್ಣಮೂರ್ತಿ, ಶಿಕ್ಷಕ ಬೀರಪ್ಪ, ಬಾಪುರಾವ್, ಈರುಳ್ಳಿ ಮಂಜು, ಮೋಹನ್, ಲಕ್ಷ್ಮೀಕಾಂತ್, ರಂಗನಾಥ್ ಮತ್ತಿತರರು ಉಪಸ್ಥಿತರಿದ್ದು ರಾಯಣ್ಣ ಭಾವಚಿತ್ರಕ್ಕೆ ನಮನ ಸಲ್ಲಿಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ