ಹುಳಿಯಾರು
ಹುಳಿಯಾರು ಪಟ್ಟಣ ಸೇರಿದಂತೆ ಹೋಬಳಿಯ ಎಲ್ಲಾ ಶಾಲಾ-ಕಾಲೇಜು, ಸರ್ಕಾರಿ ಕಛೇರಿಗಳಲ್ಲಿ ಶನಿವಾರ 70 ನೇ ಗಣರಾಜ್ಯೋತ್ಸವವನ್ನು ಸಂಭ್ರಮದಿಂದ ಶಿಸ್ತುಬದ್ದವಾಗಿ ಆಚರಿಸಲಾಯಿತು.ಹುಳಿಯಾರಿನ ನಾಡಕಛೇರಿಯಲ್ಲಿ ಪ್ರಭಾರ ಉಪತಹಶೀಲ್ದಾರ್ ಮಂಜುನಾಥ್ ಅವರು ಧ್ವಜಾರೋಹಣ ನೆರವೇರಿಸಿ ಮಾತನಾಡಿ ಯುವಜನತೆಯಲ್ಲಿ ಸಂವಿಧಾನದ ಅರಿವು, ಪಾಲನೆ ಅತಿಮುಖ್ಯವಾಗಿದ್ದು, ಈ ನಿಟ್ಟಿನಲ್ಲಿ ಸಂವಿಧಾನದ ಆಶಯದಂತೆ ಸ್ವಾತಂತ್ರ್ಯ, ಸಮಾನತೆ ಮತ್ತು ಸಹೋದರತ್ವ ಬದುಕಿನ ಮೂಲತತ್ವವೆಂದು ಅರಿತು ಅದರಂತೆ ನಡೆಯಬೇಕಿದೆ ಎಂದರು.
ಗ್ರಾಮ ಲೆಕ್ಕಿಗರಾದ ಮಂಜುನಾಥ್, ಚಂದ್ರು, ಭಾಗ್ಯ, ಈಶ್ವರ್, ಗ್ರಾಮ ಸಹಾಯಕರಾದ ಕುಮಾರ್, ಚನ್ನಬಸವಯ್ಯ, ಸುಬ್ರಹ್ಮಣ್ಯ, ಸಿದ್ಧರಾಮಯ್ಯ ಮತ್ತಿತರರು ಇದ್ದರು.
ಹುಳಿಯಾರಿನ ವಿದ್ಯಾವಾರಿಧಿ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ನಡೆದ ಗಣರಾಜ್ಯೋತ್ಸವದಲ್ಲಿ ಮಾಜಿ ಶಾಸಕ ಕೆ.ಎಸ್.ಕಿರಣ್ ಕುಮಾರ್ ಧ್ವಜಾರೋಹಣ ನೆರವೇರಿಸಿ ಮಾತನಾಡಿ ಭಾರತ ದೇಶವು ಸಂವಿಧಾನದಿಂದ ಮಾತ್ರ ಜಾತ್ಯಾತೀತ, ಗಣತಂತ್ರ, ಸಮಾಜವಾದಿ, ಪ್ರಜಾಪ್ರಭುತ್ವ ರಾಷ್ಟ್ರವಾಗಲಿದೆ. ಈ ನಿಟ್ಟಿನಲ್ಲಿ ಸಂವಿಧಾನದ ಹಕ್ಕು ಹಾಗೂ ಕರ್ತವ್ಯಗಳನ್ನು ಭಾರತೀಯರಾದ ನಾವು ಅನುಪಾಲನೆ ಮಾಡಬೇಕಿದ್ದು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಸಂವಿಧಾನದ ಅಡಿಯಲ್ಲಿ ರಾಷ್ಟ್ರಕ್ಕೆ ಗೌರವ ಸೂಚಿಸಬೇಕೆಂದರು.ಕಾರ್ಯದರ್ಶಿ ಕವಿತಾಕಿರಣ್, ಮುಖ್ಯಶಿಕ್ಷಕ ವಿಜಯ್, ದೈಹಿಕ ಶಿಕ್ಷಕ ಸುಭಾಷ್ ಹಾಗೂ ಶಾಸಲ ಸಿಬ್ಬಂಧಿವರ್ಗದವರು ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.
ಪಟ್ಟಣ ಪಂಚಾಯ್ತಿ ಕಛೇರಿಯಲ್ಲಿ ಆಡಳಿತಾಧಿಕಾರಿ ಮಂಜುನಾಥ್ ಮಾತನಾಡಿ ಹಕ್ಕು ಹಾಗೂ ಕರ್ತವ್ಯಗಳು ಒಂದೇ ನಾಣ್ಯದ ಎರಡು ಮುಖಗಳಿದ್ದಂತೆ. ಹಕ್ಕುಗಳಿಗಾಗಿ ಹಾತೊರೆದರೆ ಸಾಲದು ಕರ್ತವ್ಯ ನಿರ್ವಹಣೆಗೆ ಆದ್ಯತೆ ನೀಡಬೇಕು. ಸಂವಿಧಾನ ಎಲ್ಲರಿಗೂ ಸಮಾನವಾದ ಅವಕಾಶಗಳನ್ನು ಕಲ್ಪಿಸುತ್ತದೆ. ಆದ್ದರಿಂದ ಸಂವಿಧಾನಕ್ಕೆ ಎಲ್ಲರೂ ಬದ್ಧರಾಗಿ ನಡೆದುಕೊಳ್ಳಬೇಕು ಎಂದು ಹೇಳಿದರು.
ಎಂಜಿನಿಯರ್ ಮಂಜುನಾಥ್, ಗ್ರಾಮೀಣಾಧಿಕಾರಿ ಪ್ರದೀಪ್, ಪಪಂ ಅಧ್ಯಕ್ಷೆ ಗೀತಾ, ಸದಸ್ಯರುಗಳಾದ ಪುಟ್ಟಿಬಾಯಿ, ಕೆಂಪಮ್ಮ ಹಾಗೂ ಸಿಬ್ಬಂಧಿ ವರ್ಗದವರು ಉಪಸ್ಥಿತರಿದ್ದರು.
ಪಟ್ಟಣದ ಹುಳಿಯಾರು-ಕೆಂಕೆರೆ ಬಿಎಂಎಸ್ ಸರ್ಕಾರಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಹುಳಿಯಾರು-ಕೆಂಕೆರೆ ಸರ್ಕಾರಿ ಪ್ರೌಢಶಾಲೆ, ಐಟಿಐ ಕಾಲೇಜು, ಕನಕದಾಸ ಶಾಲೆ, ಉರ್ದುಶಾಲೆ, ಜ್ಞಾನಜ್ಯೋತಿ ಸ್ಕೂಲ್, ಶಾರದಾ ಕಾನ್ವೆಂಟ್, ಎಂ.ಪಿ.ಎಸ್ ಶಾಲೆ, ವಾಸವಿ ಶಾಲೆ, ಬಸವೇಶ್ವರ ಶಾಲೆ, ಮಾರುತಿ ಶಾಲೆ, ಕೇಶವ ಶಾಲೆಗಳಲ್ಲಿ ಧ್ವಜಾರೋಹಣ ನಡೆಸಿ ಮಕ್ಕಳಿಗೆ ಸಿಹಿ ಹಂಚಿದರು. ಎಲ್ಲಾ ಶಾಲೆಗಳಲ್ಲೂ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.
ಸರ್ಕಾರಿ ಕಛೇರಿಗಳಾದ ನಾಢಕಛೇರಿ, ಪೊಲೀಸ್ ಠಾಣೆ , ಬೆಸ್ಕಾಂ ಕಛೇರಿ, ಸರ್ಕಾರಿ ಆಸ್ಪತ್ರೆ, ಬಿಎಸ್.ಎನ್.ಎಲ್ ಕಛೇರಿ, ಅಂಚೇ ಕಛೇರಿ, ಎಪಿಎಂಸಿಯಲ್ಲೂ ಧ್ವಜಾರೋಹಣ ನೆಡೆಸಿ ಸಿಹಿ ವಿತರಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
