ಕೊಟ್ಟೂರು
ಗ್ರಂಥಗಳನ್ನು ಓದುವುದರಿಂದ ಜ್ಞಾನಾರ್ಜನೆ ವೃದ್ದಿಸುವುದಲ್ಲದೆ. ಮಾನಸಿಕ ಸಮತೋಲವನ್ನು ಹೆಚ್ಚಿಸುತ್ತದೆ ಎಂದು ನಿವೃತ್ತ ಮುಖ್ಯ ಶಿಕ್ಷಕಿ ಎಲ್. ಶಕುಂತಲಾ ಮುರಡಿಬಸಪ್ಪ ಅಭಿಪ್ರಾಯಪಟ್ಟರು.
ಪಟ್ಟಣದ ಸಾರ್ವಜನಿಕ ಗ್ರಂಥಾಲಯಲ್ಲಿ ಇಂದಿನಿಂದ ಏಳು ದಿನಗಳ ಕಾಲ ನಡೆಯುವ ಗ್ರಂಥಾಲಯ ಸಪ್ತಾಹದ ಅಂಗವಾಗಿ ಇಂದು ಪುಸ್ತಕ ಪ್ರದರ್ಶನಕ್ಕೆ ಚಾಲನೆ ನೀಡಿ ಮಾತನಾಡಿದರು.
ನನಗೆ ಆರೋಗ್ಯ ಸಮಸ್ಯೆ ನಿರಂತರವಾಗಿ ಕಾಡುತ್ತಿತ್ತು. ಸಾಕಷ್ಟು ವೈದ್ಯರಲ್ಲಿ ತೋರಿಸಿದೆ, ಗುಣವಾಗಲಿಲ್ಲ. ಆರ್ಯುವೈದೈ ವ್ಯದ್ಯರೊಬ್ಬರು, ನೀವು ಮಾನಸಿಕ ಸಮತೋಲನ ಕಾಪಾಡಿಕೊಳ್ಳಿ ಎಂದು, ಸಲಹೆ ನೀಡಿದರು.
ಅಂದಿನಿಂದ ನಿರಂತರವಾಗಿ ಪುಸ್ತಕಗಳನ್ನು ಓದುತ್ತಿದ್ದೇನೆ. ಆರೋಗ್ಯ ಸಮಸ್ಯೆ ಕಡಿಮೆಯಾಗಿದೆ. ಮಾನಸಿಕ ಸಮತೋಲನವನ್ನು ಕಾಪಾಡಿಕೊಂಡಿದ್ದೇವೆ. ಇದನ್ನು ವೈದ್ಯರು ದೃಢಪಡಿಸಿದರು ಎಂದು ಹೇಳಿದರು.
ವಯಸ್ಸಾಗಿದ್ದರೆ, ನೌಕರಿಯಿಂದ ನಿವೃತ್ತಿಯಾಗಿದ್ದರೆ, ಮಾನಸಿಕ ಕಿನ್ನತೆಯಿಂದ ಬಳಲುತ್ತಿದ್ದವರು ಸತತವಾಗಿ ಪುಸ್ತಕವನ್ನು ಓದುತ್ತಿದ್ದರೆ ಇಳೀ ವಯಸ್ಸಿನಲ್ಲಿಯೊ ಆರೋಗ್ಯ ಸ್ಥಿರವಾಗಿ ಕಾಪಾಡಿಕೊಳ್ಳಬಹುದು ಎಂದು ಸಲಹೆ ನೀಡಿದರು.ಗ್ರಂಥಾಲಯ ಅಧಿಕಾರಿ ಮಲ್ಲಪ್ಪ ಗುಡ್ಲಾನೂರು, ಪ್ರಾಸ್ತಾವಿಕವಾಗಿ ಮಾತನಾಡಿದರು.ಗ್ರಂಥಾಲಯ ಓದುಗರರಾದ ಜವಳಿ ರಾಜಣ್ಣ, ಕೆ.ಬಿ. ಮೂಗೇಶ, ಮುರಡಿ ಬಸಪ್ಪ, ಹ್ಯಾಳ್ಯಾ ಲೋಕೇಶ, ಕಂಟ್ಲಿ ಕೊಟ್ರೇಶಪ್ಪ, ಸಿದ್ದರಾಮೇಶ ಮುಂತಾದವರು ಇದ್ದರು.ಕೊಟ್ಟೂರು ತಾಲೂಕು ಗ್ರಾಮಪಂಚಾಯ್ತಿ ಗ್ರಂಥಾಲಯಗಳ ಸಂಘದ ಅಧ್ಯಕ್ಷ ಎಲ್. ವೀರಪ್ಪ ಸ್ವಾಗತಿಸಿ ವಂದಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ