ಸಾರ್ವಜನಿಕರಿಗೆ ಭ್ರಷ್ಟಾಚಾರದ ಅರಿವು ಹಾಗೂ ಕುಂದುಕೊರತೆ ನಿವಾರಣೆ ಸಭೆ

ಕೊರಟಗೆರೆ

        ತುಮಕೂರು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಆಯೋಜಿಸಿದ್ದ ದೂರು ಸ್ವೀಕಾರ ಕಾರ್ಯಕ್ರಮಕ್ಕೆ ಕಂದಾಯ, ಶಿಕ್ಷಣ ಹಾಗೂ ಭೂಮಾಪನ ಇಲಾಖೆಗಳ ವಿರುದ್ದಸಾರ್ವಜನಿಕರು ನಮ್ಮ ಕೆಲಸ ಕಾರ್ಯಗಳು ವಿನಾಕಾರಣ ವಿಳಂಬವಾಗುತ್ತಿವೆ ಹಾಗೂ ಅಧಿಕಾರಿಗಳು ಹಣಕಾಸು ನಿರೀಕ್ಷೆಯಿಂದ ಕೆಲಸ ಕಾರ್ಯಗಳಾಗದೆ ಅಲೆದಾಡಿಸುತ್ತಿದ್ದಾರೆ ಎಂದು ಡಿಸಿಬಿ ಉಪಾಧೀಕ್ಷಕ ರಘುಕುಮಾರ್ ಬಳಿ ತಮ್ಮ ನೋವು ತೋಡಿಕೊಂಡಿದ್ದಾರೆ.

        ಗುರುವಾರದಂದು ಪಟ್ಟಣದ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳ ಉಪಾಧೀಕ್ಷಕರು ಏರ್ಪಡಿಸಿದ್ದ `ಸಾರ್ವಜನಿಕರಿಗೆ ಭ್ರಷ್ಟಾಚಾರದ ಅರಿವು ಹಾಗೂ ಕುಂದುಕೊರತೆ ನಿವಾರಣೆ ಸಭೆ’ಯಲ್ಲಿ ದೂರುಗಳನ್ನು ಸ್ವೀಕರಿಸಿ ಇಲಾಖೆಗಳಲ್ಲಿನ ಅನಗತ್ಯ ವಿಳಂಬಕ್ಕೆ ಕಿಡಿಕಾರಿದರು.

        ಬುರುಗನಹಳ್ಳಿ ತಿಮ್ಮಯ್ಯ ಎಂಬುವರು ತಮ್ಮ ಜಮೀನಿಗೆ ಸಂಬಂಧಿಸಿದಂತೆ ತಹಸೀಲ್ದಾರ್ ನ್ಯಾಯಾಲಯದ ಕಡತವನ್ನೆ ಕಳೆದು ಹಾಕಿ ವರ್ಷಗಳು ಕಳೆದಿವೆ. ಆದರೂ ಇಲ್ಲಿವರೆಗೂ ಕಡತವು ದೊರೆತಿಲ್ಲ. ಈ ಬಗ್ಗೆ ತಹಸೀಲ್ದಾರ್ ನಾಗರಾಜು, ಶಿರಸ್ಥೆದಾರ್ ಶ್ರೀರಂಗಯ್ಯ ಒಬ್ಬರ ಮೇಲೆ ಒಬ್ಬರು ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ. ಇವರಿಬ್ಬರ ಜಗಳದಲ್ಲಿ ಬಡರೈತನಾದ ನನಗೆ ತುಂಬಾ ತೊಂದರೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

         ಜಿಲ್ಲಾ ಮಾದಿಗದಂಡೋರ ಯುವ ಸೇನೆಯ ಅಧ್ಯಕ್ಷ ಜಟ್ಟಿಅಗ್ರಹಾರ ನಾಗರಾಜು ಪಟ್ಟಣಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಜಂಪೇನಹಳ್ಳಿಯ ಕೆರೆಯನ್ನು ಹಲವು ಪ್ರಭಾವಿ ಜನರು ಒತ್ತುವರಿ ಮಾಡಿಕೊಂಡು ಡಾಬಾ ನಿರ್ಮಿಸುವ ಮೂಲಕ ಹಣ ಮಾಡುತ್ತಿದ್ದಾರೆ.

        ಆದರೂ ಸಂಬಂಧಪಟ್ಟ ಅಧಿಕಾರಿಗಳು ಕ್ಯಾರೆ ಎನ್ನದೇ ಮೌನ ವಹಿಸುವುದರ ಹಿಂದಿನ ಗುಟ್ಟೇನು? ಸಂಬಂಧಪಟ್ಟ ಇಲಾಖೆ ಸರ್ವೇ ಮಾಡಿಸುವುದರ ಮುಖೇನ ಒತ್ತುವರಿ ತೆರವುಗೊಳಿಸಿ ನೀರಾವರಿಗೆ ಮೀಸಲಿಟ್ಟ ಕೆರೆಯನ್ನು ರಕ್ಷಿಸುವಂತೆ ಸಾರ್ವಜನಿಕರ ಪರವಾಗಿ ಹಲವಾರು ವರ್ಷಗಳಿಂದ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಅಧಿಕಾರಿಗಳ ವಿರುದ್ದ ಕಿಡಿಕಾರಿದರು.

        ಇದೇ ಸಂದರ್ಭದಲ್ಲಿ ಅಹವಾಲು ಆಲಿಸುತ್ತಿದ್ದ ಎಸಿಬಿ ಅಧಿಕಾರಿ ಜೊತೆಯಲ್ಲಿದ್ದ ತಹಸೀಲ್ದಾರ್ ನಾಗರಾಜುಗೆ ಜಂಪೇನಹಳ್ಳಿ ನೀರನ್ನು ಪಟ್ಟಣಕ್ಕೆ ಕುಡಿಯಲು ಬಳಸುತ್ತಾರಾ ಎಂದು ಪ್ರಶ್ನಿಸಿದರು. ಆಗ ತಹಸೀಲ್ದಾರ್‍ರವರ ಬೇಜವಾಬ್ದಾರಿ ಉತ್ತರಕ್ಕೆ ಇಡೀ ಸಭೆ ಒಂದು ನಿಮಿಷ ಮೌನವಾಯಿತು.

        ಅಧಿಕಾರಿಯ ಈ ಉತ್ತರ ನಗೆಪಾಟಲಿಗೆ ಗುರಿಯಾಯಿತು. ನಂತರ ತಹಸೀಲ್ದಾರ್ ನಾಗರಾಜುಗೆ ಅಧಿಕಾರಿ ನಿಮ್ಮಇಲಾಖೆಯ ಬಗ್ಗೆ ಸಾರ್ವಜನಿಕರು ದೂರು ನೀಡುವುದಲ್ಲದೆ, ಮೌಖಿಕವಾಗಿ ಖಾತೆ ಹಾಗೂ ಪಹಣಿ ತಿದ್ದುಪಡಿ ಸೇರಿದಂತೆ ಕಂದಾಯ ಇಲಾಖೆಗೆ ಸಂಬಂಧಿಸಿದಂತೆ ಕೆಲಸ ಕಾರ್ಯಗಳು ವಿಳಂಬವಾಗುತ್ತಿರುವುದರ ಬಗ್ಗೆ ಅನುಮಾನ ಬರುತ್ತಿದೆ. ಮುಂದಿನ ದಿನಗಳಲ್ಲಿ ಇದೇ ಪ್ರವೃತ್ತಿ ಮುಂದುವರೆದರೆ ನಿರ್ದಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಮೌಖಿಕ ಎಚ್ಚರಿಕೆ ನೀಡಿದರು.

         ಇದೇ ರೀತಿ ಕೊರಟಗೆರೆಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಯಲ್ಲಿ ಶಿಕ್ಷಕರ ವಾರ್ಷಿಕ ಬಡ್ತಿ, ರಜಾ ವೇತನ ಸೇರಿದಂತೆ ಇನ್ನಿತರ ಭತ್ಯೆಗಳನ್ನು ಮಂಜೂರು ಮಾಡಲು ಗುಮಾಸ್ತರುಗಳ ಲಂಚಗುಳಿತನ ಮತ್ತು ಅನಗತ್ಯ ವಿಳಂಬದಿಂದ ಶಿಕ್ಷಕರಿಗೆ ಕಿರುಕುಳ ನೀಡುತ್ತಿರುವುದನ್ನು ಸಹಿಸುವುದಿಲ್ಲ. ಈ ಬಗ್ಗೆ ಅರ್ಜಿಗಳನ್ನು ಸಕಾಲದಲ್ಲಿ ತೆಗೆದುಕೊಳ್ಳಬೇಕೆಂದು ಗುಮಾಸ್ತರುಗಳಾದ ಗಂಗಣ್ಣ ಮತುನಂದ್‍ಗೆ ಎಚ್ಚರಿಕೆ ನೀಡಿದರು.

         ಅದೇ ರೀತಿಯಾಗಿ ಕೊರಟಗೆರೆ ಭೂಮಾಪನ ಕಚೇರಿಯಲ್ಲಿ ರೈತರ ತಿದ್ದುಪಡಿ, ತಕರಾರು, ಪೋಡಿ ಸೇರಿದಂತೆ ಹಲವು ಅರ್ಜಿಗಳನ್ನು ವರ್ಷಗಟ್ಟಲೆ ವಿಳಂಬ ಮಾಡುವುದು, ತಿಂಗಳುಗಟ್ಟಲೆ ಕಚೇರಿಗೆ ಅಲೆಸುವುದು ನಡೆಯುತ್ತಿದೆ ಎಂದು ಕೆಲ ರೈತರು ಎಸಿಬಿ ಅಧಿಕಾರಯ ಬಳಿ ತಮ್ಮ ಅಳಲನ್ನುತೋಡಿಕೊಂಡರು, ಭೂಮಾಪನಾ ಇಲಾಖೆ ರೈತರಜಮೀನನ್ನು ಪೋಡಿ ಮತ್ತುಕ್ರಯದ ನಕ್ಷೆಗೆ ಅಳತೆಮಾಡಲು ಬರುವ ಭೂಮಾಪಕರು ಸಾವಿರಾರುರೂ ಹಣ ಪಡೆಯದೆ ಕೆಲಸ ಮಾಡುವುದೇಇಲ್ಲಎಂದಾಗ ಈ ಬಗ್ಗೆ ರೈತರು ಭಯಪಡೆದೆ ನೇರವಾಗಿ ಭ್ರಷ್ಟಾಚಾರ ನಿಗ್ರಹದಳದ ಕಛೇರಿಗೆ ಬರವಂತೆ ಹಾಗೂ ರೈತರ ಕೆಲಸಗಳನ್ನು ಅನಗತ್ಯವಾಗಿ ವಿಳಂಭ ಮಾಡದಂತೆ ಭೂಮಾಪನ ಇಲಾಖೆಯ ಎ.ಡಿ.ಎಲ್.ಅರ್ ಗೆ ಆದೇಶ ಮಾಡುವುದಾಗಿ ತಿಳಿಸಿ ಅರ್ಜಿ ಸ್ವೀಕರಿಸಿದರು ,

        ನಂತರ  ಪತ್ರಕರ್ತರೊಂದಿಗೆ ಮಾತನಾಡಿದ ನಿಗ್ರಹ ದಳದ ಉಪಾಧೀಕ್ಷರಘುಕುಮಾರ್‍ರವರು ಇಲಾಖೆಗಳಲ್ಲಿ ಸಾರ್ವಜನಿಕರ ಕೆಲಸಗಳು ವಿಳಂಭವಾದಲ್ಲಿ ಅಥವಾ ಲಂಚ ಕೇಳಿದಲ್ಲಿ ಗೌಪ್ಯವಾಗಿ ನಮ್ಮಇಲಾಖೆಯನ್ನು ನೇರವಾಗಿ ಸಂಪರ್ಕಿಸ ಬೇಕು ಅಥವಾ 0816-2255522 ಮತ್ತು 9480806221 ದೂರವಾಣಿಗೆಕರೆಮಾಡಬೇಕುಎಂದು ತಿಳಿಸಿದ ಅವರು ಪ್ರತಿಇಲಾಖೆಯಲ್ಲೂ ಸಾರ್ವಜನಿಕರ ಕೆಲಸದ ವಿವರ ತೆಗೆದುಕೊಳ್ಳುವ ದಿನಗಳು ಸಲ್ಲಿಸಬೇಕಾದಆರ್ಜಿಯ ಶುಲ್ಕದ ನಾಮಫಲಕವನ್ನುಕಡ್ಡಾಯವಗಿ ಹಾಕಲೇ ಬೇಕು ಎಂದರು.
ಈ ಸಂದರ್ಬದಲ್ಲಿ ಭ್ರಷ್ಟಾಚಾರ ನಿಗ್ರಹ ದಳದ ಅಧಿಕಾರಿಗಳಾದ ನರಸಿಂಹರಾಜು, ಗಿರೀಶ್, ತಹಶೀಲ್ದಾರ್ ನಾಗರಾಜು, ಶ್ರೀರಂಗಯ್ಯ, ತಾ.ಪಂ. ಇಓ ಶಿವಪ್ರಕಾಶ್, ಎ.ಡಿ.ನಾಗರಾಜು, ಪ.ಪಂ.ಮುಖ್ಯಾಧಿಕಾರಿ ಲಕ್ಷ್ಮಣ್‍ಕುಮಾರ್ ಸೇರಿದಂತೆಇನ್ನಿತರರ ಇಲಾಖಾ ಸಿಬ್ಬಂದಿಗಳು ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link