ಹಿರಿಯೂರು :
ರೆಡ್ ಕ್ರಾಸ್ ಸಂಸ್ಥೆ ಹೆಸರನ್ನು ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ಇನ್ನೂ ಉನ್ನತ ಮಟ್ಟಕ್ಕೆ ಏರಿಸುವ ಕೆಲಸವನ್ನು ಹಿರಿಯೂರು ರೆಡ್ ಕ್ರಾಸ್ ಸಂಸ್ಥೆ ಮಾಡುತ್ತಿದೆ ಎಂಬುದಾಗಿ ರಾಜ್ಯ ರೆಡ್ ಕ್ರಾಸ್ ಸಂಸ್ಥೆ ಛೇರ್ಮನ್ ಎಸ್.ನಾಗಣ್ಣ ಹೇಳಿದರು.
ನಗರದ ತಾಹಾ ಪ್ಯಾಲೇಸ್ ಸಭಾಂಗಣದಲ್ಲಿ ಭಾರತೀಯ ರೆಡ್ ಕ್ರಾಸ್ ಸಂಸ್ಥೆ ಹಿರಿಯೂರು ಸಮಿತಿ ವತಿಯಿಂದ ವಿಕಲಚೇತನರಿಗೆ ಉಚಿತ ವೀಲ್ ಚೇರ್, ಮೂರುಗಾಲಿ ಸೈಕಲ್ ಗಳು, ಮತ್ತು ಪರಿಕರಗಳನ್ನು ವಿತರಿಸುವ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ಸಂವಿಧಾನದ ಅಡಿಯಲ್ಲಿ ಈ ರೆಡ್ ಕ್ರಾಸ್ ಸಂಸ್ಥೆಗೆ ವಿಶೇಷ ಸ್ಥಾನಮಾನ ನೀಡಲಾಗಿದ್ದು, ಇದು ಜಾತ್ಯಾತೀತ, ಪಕ್ಷಾತೀತವಾದ ಸಂಸ್ಥೆಯಾಗಿದೆ. ಸಮಾಜಮುಖಿ ಹಾಗೂ ಜನಪರ ಕಾರ್ಯಕ್ರಮಗಳನ್ನು ಮಾಡುವ ಮೂಲಕ ಸಮಾಜದಲ್ಲಿನ ಬಡವರ, ದೀನದಲಿತರ, ನೊಂದವರ, ವಿಕಲಚೇತನರ ಪಾಲಿಗೆ ಆಶಾಕಿರಣವಾಗಿದೆ ಎಂಬುದಾಗಿ ಹೇಳಿದರು.
ಬೆಂಗಳೂರು ಸಾಲ್ವೆ ರೆಜಿನ ಛಾರಿಟಬಲ್ ಟ್ರಸ್ಟ್ ನ ಅಧ್ಯಕ್ಷರಾದ ಡಾ||ರೆಜೀನಸೀಲನ್ ಮಾತನಾಡಿ, ವಿಕಲ ಚೇತನರೂ ಸಹ ಸಮಾಜದಲ್ಲಿ ಎಲ್ಲರಂತೆ ಸಹಜವಾಗಿ ಬದುಕುವ ಮೂಲಕ ಮುಖ್ಯವಾಹಿನಿಗೆ ಬರಬೇಕು ಎಂಬ ಉದ್ದೇಶದಿಂದ ನಮ್ಮ ಟ್ರಸ್ಟ್ ವತಿಯಿಂದ ಅಗತ್ಯ ಪರಿಕರಗಳನ್ನು ನೀಡಲಾಗುತ್ತಿದೆ ಎಂಬುದಾಗಿ ಹೇಳಿದರು.
ಇದೇ ಸಂದರ್ಭದಲ್ಲಿ ವಿಕಲ ಚೇತನರಿಗೆ 10 ವೀಲ್‍ಚೇರ್ಸ್, 10 ಟ್ರೈಸಿಕಲ್ ಗಳನ್ನು ಹಾಗೂ ಬಡಕೂಲಿ ಕಾರ್ಮಿಕರಿಗೆ 210 ರೆಡಿಮೇಡ್ ಶರ್ಟ್‍ಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲಾಯಿತು.ವೇದಿಕೆಯಲ್ಲಿ ರಾಜ್ಯ ರೆಡ್ ಕ್ರಾಸ್ ಸಂಸ್ಥೆಯ ಮಾಜಿ ಛೇರ್ಮನ್ ಬಸ್ರೂರು ರಾಜೇಶ್ ಶೆಟ್ಟಿ, ರೆಡ್ ಕ್ರಾಸ್ ಸಂಸ್ಥೆ ಛೇರ್ಮನ್ ಹೆಚ್.ಎಸ್.ಸುಂದರ್ ರಾಜ್, ಉಪಾಧ್ಯಕ್ಷ ಬಿ.ಎಸ್.ನವಾಬ್ ಸಾಬ್, ಜಿಲ್ಲಾ ವಿಕಲ ಚೇತನರ ನೋಡಲ್ ಅಧಿಕಾರಿ ಮಂಜುನಾಥ್ ನಾಡರ್, ಚಿತ್ರದುರ್ಗ ಜಿಲ್ಲಾ ಯೂತ್ ರೆಡ್ ಕ್ರಾಸ್ ನೋಡಲ್ ಅಧಿಕಾರಿ ಹೆಚ್. ತಿಪ್ಪೇಸ್ವಾಮಿ, ರೆಡ್ ಕ್ರಾಸ್ ಗೌ||ಅಧ್ಯಕ್ಷ ಕೆ.ಆರ್.ವೆಂಕಟೇಶ್, ಕಾರ್ಯದರ್ಶಿ ಎಂ.ಎಸ್.ರಾಘವೇಂದ್ರ, ಎಂ.ಎನ್.ಸೌಭಾಗ್ಯವತೀದೇವರ್, ಬಾಲಕೃಷ್ಣಶೆಟ್ಟಿ, ಮಹೇಂದ್ರನಾಥ್, ಅರುಣ್ ಕುಮಾರ್, ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ರೆಡ್ ಕ್ರಾಸ್ ಸಂಸ್ಥೆಯ ಶ್ರೀಮತಿ ಶಶಿಕಲಾರವಿಶಂಕರ್, ಹೆಚ್.ಪಿ.ರವೀಂದ್ರನಾಥ್, ಬಿ.ಕೆ.ನಾಗಣ್ಣ, ಮಹಾಬಲೇಶ್ವರಶೆಟ್ಟಿ, ವೈ.ಎಸ್.ಉಮಾಶಂಕರ್, ಪರಮೇಶ್ವರಭಟ್, ಬಸವರಾಜ್, ಆಲೂರು ಹನುಮಂತರಾಯಪ್ಪ, ಸತೀಶ್ ಬಾಬು, ಇತರರು ಪಾಲ್ಗೊಂಡಿದ್ದರು.