ತುಮಕೂರು
ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯ ವತಿಯಿಂದ ಪ್ರವಾಹ ನೆರಸಂತ್ರಸ್ಥರಿಗೆ ವಿವಿಧ ಸಂಘ ಸಂಸ್ಥೆಗಳು ಮತ್ತು ದಾನಿಗಳಿಂದ ಸಂಗ್ರಹಿಸಿದ ಅಗತ್ಯ ವಸ್ತುಗಳನ್ನು ಬೆಳಗಾವಿ ಜಿಲ್ಲೆಗೆ ಸಾಗಿಸಿದ ವಾಹನಕ್ಕೆ ಹಿರೇಮಠದ ಅಧ್ಯಕ್ಷರಾದ ಡಾ. ಶಿವಾನಂದ ಶಿವಾಚಾರ್ಯ ಸ್ವಾಮೀಜಿರವರು ಚಾಲನೆ ನೀಡಿದರು.
ತುಮಕೂರು ಜಿಲ್ಲಾ ರೆಡ್‍ಕ್ರಾಸ್ ಸಂಸ್ಥೆಯ ವತಿಯಿಂದ ಸಿದ್ಧಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಮತ್ತು ಪಾವಗಡದ ಶ್ರೀ ಜಪಾನಂದ ಸ್ವಾಮೀಜಿ ರವರ ಮಾರ್ಗದರ್ಶನದಲ್ಲಿ ರಾಜ್ಯದ ರೆಡ್‍ಕ್ರಾಸ್ ಸಂಸ್ಥೆಯ ಸಭಾಪತಿಗಳಾದ ಎಸ್.ನಾಗಣ್ಣ, ಕಾರ್ಯದರ್ಶಿ ಡಾ|| ಬಿ.ಆರ್ ಚಂದ್ರಿಕ, ಪ್ರೊ.ಕೆ ಚಂದ್ರಣ್ಣ, ಸಾಗರನಹಳ್ಳಿ ಪ್ರಭು, ಉಮೇಶ್, ಶಿವಕುಮಾರ್, ಸುರೇಂದ್ರ ಷಾ, ಮಲ್ಲೇಶ್, ಮುಷ್ತಾಕ್ ಅಹಮ್ಮದ್, ಚೇತನ್‍ರವರ ನೇತೃತ್ವದಲ್ಲಿ ಪ್ರವಾಹ ನೆರಸಂತ್ರಸ್ಥರಿಗೆ ಜಿಲ್ಲಾ ಮಧ್ಯ ಮಾರಾಟಗಾರರ ಸಂಘ, ಹೋಟೇಲ್ ಬೆಸಿಲ್ ಲೀಫ್, ಬಿ.ಹೆಚ್ ರಸ್ತೆ, ತುಮಕೂರು., ಗಂಧದಗುಡಿ ಫೌಂಡೇಷನ್, ಗಾಂಧಿನಗರ, ತುಮಕೂರು. ಶ್ರೀ ನೀಲಕಂಠೇಶ್ವರ ಸೇವಾ ಟ್ರಸ್ಟ್, ಹೊರಪೇಟೆ, ಚರಕ ಆಸ್ಪತ್ರೆ, ಅಮ್ಮಾನಿಕೆರೆ ಮುಂಜಾನೆ ಗೆಳೆಯರ ಬಳಗ, ಸೋಮಶೆಟ್ಟಿಹಳ್ಳಿ ಕೆಂಪಮ್ಮದೇವಿ ಟ್ರಸ್ಟ್, ಗೌರಿಬಿದನೂರು, ಚಿಕಬಳ್ಳಾಪುರ ಜಿಲ್ಲೆ, ಮುಂಜಾನೆ ಮಿತ್ರರು, ಜಯನಗರ, ತುಮಕೂರು. ಸವೇಜನಾ ಸುಖಿನಾಭವಂತು ಟೀಂ, ತುಮಕೂರು. ಶ್ರೀ ಓಂಕಾರ್ ಹಾರ್ಡ್‍ವೇರ್, ತುಮಕೂರು, ಸೂರ್ಯಪ್ರಭ ರಂಗಭೂಮಿ ಕಲಾ ಸಂಘ, ತುಮಕೂರು, ಎಸ್.ಆರ್.ಎಸ್ ಟೂರ್ಸ್ ಅಂಡ್ ಟ್ರಾವೆಲ್ಸ್, ವ್ಯವಸಾಯ ಉತ್ಪನ್ನ ಮಾರುಕಟ್ಟೆ ಆವರಣ (ಆರ್.ಎಂ.ಸಿ ಯಾರ್ಡ್), ಲೋಕಸಭಾ ಸದಸ್ಯರಾದ ಜಿ. ಬಸವರಾಜುರವರು, ತುಮಕೂರು ನಗರ ಶಾಸಕರಾದ ಜಿ.ಬಿ ಜ್ಯೋತಿಗಣೇಶ್‍ರವರ ಅಭಿಮಾನಿಗಳ ಬಳಗ ತುಮಕೂರು. ಮತ್ತು ಇತರೆ ಸಂಘ ಸಂಸ್ಥೆಗಳು ಮತ್ತು ದಾನಿಗಳಿಂದ ಸಂಗ್ರಹಿಸಿದ ಅಗತ್ಯ ವಸ್ತುಗಳನ್ನು ಸಂಗ್ರಹಿಸಲಾಯಿತು.
ಸಂಗ್ರಹಿಸಿದ ಈ ವಸ್ತುಗಳನ್ನು ವಿಂಗಡಿಸಿ ಪ್ರತ್ಯೇಕ ಚೀಲಗಳಲ್ಲಿ ಹೆಸರುಗಳನ್ನು ನಮೂದಿಸಿ ರೆಡ್‍ಕ್ರಾಸ್ ಸಂಸ್ಥೆಯಲ್ಲಿರುವ ಕಿವುಡ ಮಕ್ಕಳ ಶಾಲೆಯಲ್ಲಿ ಶಾಲಾ ಮಕ್ಕಳು ಶಿಕ್ಷಕರು, ಸಿಬ್ಬಂದಿಗಳು, ಸ್ಕೌಟ್ಸ್ ಮತ್ತು ಗೈಡ್ಸ್‍ನ ಸಿಬ್ಬಂದಿಗಳು, ಯೂನಿವರ್ಸಿಟಿ ಕಾಲೇಜಿನ ವಿದ್ಯಾರ್ಥಿಗಳು, ಶ್ರೀ ಬಸವೇಶ್ವರ ಕಾಲೇಜಿನ ವಿದ್ಯಾರ್ಥಿಗಳು ಸಹಕರಿಸಿದ್ದರು. ವಿಶೇಷವಾಗಿ ತುಮಕೂರು ಜಿಲ್ಲಾ ಚೆಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರಿ ಕಾರ್ಯದರ್ಶಿಗಳಾದ ಟಿ.ಜೆ ಗಿರೀಶ್‍ರವರು ಖುದ್ದು ಹಾಜರಿದ್ದು, ಸಹಕರಿಸಿದರು.
ಸೀರೆ, ಪಂಚೆ, ಟಿ ಷರ್ಟ್, ಟವೆಲ್, ಜಮಖಾನ, ಚಾಪೆ, ದಿನ ಬಳಕೆ ವಸ್ತುಗಳು, ಆಹಾರ ಪದಾರ್ಥ ಸೇರಿದಂತೆ ಅಗತ್ಯ ವಸ್ತುಗಳನ್ನು ನೆರೆ ಸಂತ್ರಸ್ತರಿಗಾಗಿ ಸಂಗ್ರಹಿ ಕಳುಹಿಸಲಾಯಿತು.ಇದುವರೆಗೂ ಸುಮಾರು 10 ಲಕ್ಷ ಮೌಲ್ಯದ ಅಗತ್ಯ ವಸ್ತುಗಳನ್ನು ಸಂಗ್ರಹಿಸಿ ರಾಜ್ಯದ ವಿವಿಧ ಕಡೆಗಳಲ್ಲಿ ನೆರಸಂತ್ರಸ್ಥರ ನೆರವಿಗಾಗಿ ರವಾನಿಸಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ