ತಿಪಟೂರು
ಇಂದಿನ ರಾಜಕಾರಣಿಗಳು ಕಾರ್ಪೋರೆಟ್ ಕಂಪನಿಗಳಿಗೆ ದೇಶವನ್ನುಕೊಟ್ಟು ಮಧ್ಯಮ ಹಾಗೂ ಅತಿ ಸಣ್ಣರೈತರನ್ನು ಬಿಕಾರಿಗಳನ್ನಾಗಿ ಮಾಡುತ್ತಿದ್ದಾರೆಎಂದುಅರ್.ಕೆ.ಎಸ್ ಸ್ವಾಮಿಆಕ್ರೋಶ ವ್ಯಕ್ತಪಡಿಸಿದರು ನಗರದ ಎ.ಪಿ.ಎಂ.ಸಿ ಆವರಣದಿಂದ ಉಪವಿಭಾಗಾಧಿಕಾರಿ ಕಚೇರಿಯ ವರೆಗೆ ವಿವಿಧ ಬೇಡಿಕೆಗಳಿಗಾಗಿ ಮತ್ತುಕೊಬ್ಬರಿಯ ಬೆಂಬಲಬೆಲೆಯನ್ನು 5000 ಹೆಚ್ಚಿಸಬೇಕೆಂದು ಆಗ್ರಹಿಸಿ ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿಯಿಂದ ಕಾಲ್ನಡಿಗೆ ಜಾಥಾ ನಡೆಸಿ ಉಪವಿಭಾಗಾಧಿಕಾರಿ ಕಛೇರಿ ಮುಂದೆ ಮಾತನಾಡಿದ ಅವರು ಎ.ಪಿ.ಎಂ.ಸಿ ಕಾಯ್ದೆ, ಬೆಲೆ ಭರವಸೆ ಮತ್ತು ಕೃಷಿ ಸೇವೆಗಳ ಕುರಿತುಒಪ್ಪಂದ, ಅಗತ್ಯ ವಸ್ತುಗಳ ಕಾಯಿದೆ ಭೂಸುಧಾರಣಕಾಯ್ದೆ ಮುಂತಾದವುಗಳೂ ಮುಖ್ಯವಾಗಿರೈತ ವಿರೋಧಿ ಕಾಯ್ದೆಗಳಾಗಿವೆ.
ಇನ್ನು ಭೂಸುಧಾರಣೆ ಕಾಯಿದೆಯಲ್ಲಿ ಯಾರು ಎಷ್ಟು ಬೇಕಾದರೂ ಜಮೀನು ಹೊಂದುವ ಕಾಯ್ದೆ ಸಣ್ಣ ರೈತರ ನಿರ್ಣಾಮ ಮಾಡಲೆಂದೆ ಬಂದಿದೆ, ಇನ್ನು ಎ.ಪಿ.ಎಂ.ಸಿ ಕಾಯಿದೆ ರೈತರ ಶವಪೆಟ್ಟಿಗೆಯ ಕೊನೆಯ ಮೊಳೆ ಇದ್ದಂತೆ. ರೈತರು ತಾವು ಬೆಳೆಯುವ ಬೆಳೆಗೆ ಸೂಕ್ತವಾದ ಬೆಲೆಯನ್ನು ಕೇಳುವ ಒಂದೇ ಒಂದು ಸಂಸ್ಥೆಯಾಗಿದ್ದು ಇದನ್ನು ಮುಚ್ಚುತ್ತಿದ್ದು ಇನ್ನು ಭೂ ಸುದಾರಣೆ ಕಾಯ್ದೆಯು ಸಹ ಕಾರ್ಪೋರೆಟ್ ಸಂಸ್ಥೆಗೆ ರತ್ನಗಂಬಳಿ ಹಾಸಿದಂತೆ ರೈತರತುಂಡು ಭೂಮಿಗಳನ್ನು ಕಿತ್ತುಕೊಳ್ಳಲು ಹೊರಟಿರುವುದುರೈತರಿಗೆ ಮರಣಶಾಸನವಾಗುತ್ತಿದೆಎಂದುಕೇಂದ್ರ ಮತ್ತುರಾಜ್ಯ ಸರ್ಕಾರದ ವಿರುದ್ದ ಹರಿಹಾಯ್ದರು.
ರೈತರ ನಿರಾಸಕ್ತಿ :ಕೊರೊನಾ ಮದ್ಯೆ ಪ್ರತಿಭಟನೆಗೆಕರೆನೀಡಿದರು ಬಹಳಷ್ಟು ರೈತರು, ಹಾಲು ಉತ್ಪಾದಕರು ಪ್ರತಿಭಟನೆಗೆ ಹಾಜರಾಗದಿರುವುದುರೈತರಲ್ಲಿ ಸರ್ಕಾರದ ಮೇಲಿನ ಮನೋಭಾವನೆ ಸಂಪೂರ್ಣವಾಗಿ ಬದಲಾಗಿದ್ದು ನಾವು ಏನು ಮಾಡಿದರು ಸರ್ಕಾರದವರು ಕೇಳಿಸಿಕೊಳ್ಳುವುದಿಲ್ಲ ಬಡವನ ಕೋಪ ದವಡೆಗೆ ಮೂಲ ಎಂಬತಾಗಿದೆಎಂದುರೈತರಅಭಿಪ್ರಾಯವಾಗಿದೆ.
ಪ್ರತಿಭಟನೆಯಲ್ಲಿ ರೈತ ಸಂಘದಅಧ್ಯಕ್ಷಬಸ್ತಿಹಳ್ಳಿ ರಾಜಣ್ಣ, ಹಸಿರು ಸೇನೆ ಅಧ್ಯಕ್ಷತಿಮ್ಲಾಪುರದೇವರಾಜ್, ಜನಸ್ಪಂದನ ಟ್ರಸ್ಟ್ ಅಧ್ಯಕ್ಷ ಶಶಿಧರ್, ಪ್ರಾಂತರೈತ ಸಂಘದಚನ್ನಬಸವಣ್ಣ ಮತ್ತಿತರರು ಪ್ರತಿಭಟನಾಜಾಥದಲ್ಲಿ ಪಾಲ್ಗೊಂಡಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ