ತಿಪಟೂರು :
ಗಣೇಶನ ವಿಸರ್ಜನೆಗೂ ಮೊದಲು ಹಾಳುಬಿದ್ದ ರಸ್ತೆಗಳನ್ನು ಸರಿಪಡಿಸಿ ಗಣೇಶನ ಮೆರವಣಿಗೆ ಸೂಸೂತ್ರವಾಗಿ ಸಾಗಲು ಅನುವು ಮಾಡಿಕೊಡಿ ಎಂದು ನಗರಸಭಾ ಸದಸ್ಯರುಗಳು ಒಕ್ಕೊರಲಿನಿಂದ ಆಗ್ರಹಿಸಿದರು.
ನಗರದ ಕಲ್ಪತರು ಆಡಿಟೋರಿಯಂನಲ್ಲಿ ನಗರದ ಶ್ರೀ ಸತ್ಯಗಣಪತಿ ವಿಸರ್ಜನ ಮಹೋತ್ಸವದ ಅಂಗವಾಗಿ ಏರ್ಪಡಿಸಿದ್ದ ಶಾಂತಿಸಭೆಯಲ್ಲಿ ಒಕ್ಕೊರಲಿನಿಂದ ಮಾತನಾಡಿದ ನಗರಸಭಾ ಸದಸ್ಯರುಗಳು ಗಣೇಶನ ಜಾತ್ರೆಗೂ ಮೊದಲೇ ರಸ್ತೆಗಳನ್ನು ಸರಿಪಡಿಸಿದಿದ್ದರೆ ಗಣಪತಿ ಮೆರವಣಿಗೆ ಕಷ್ಟಸಾದ್ಯ ನಗರಸಭೆ ಎ.ಇ.ಇ. ನಾಗೇಶ್ ಯಾವಾಗಲು ಬರೀ ಸುಳ್ಳನ್ನೇ ಹೇಳುತ್ತಾರೆಂದು ನಗರಸಭಾ ಸದಸ್ಯರುಗಳು ತಿಳಿಸಿದರು.
ಡಿ.ಜೆ.ಬದಲು ಜನಪದ ಕಲಾವಿದರಿಗೆ ಪ್ರೋತ್ಸಾಹನೀಡಿ :
ತಿಪಟೂರು ಗಣೇಶ ವಿಸರ್ಜನೆ ಜಾತ್ರೆ ಎಂದರೆ ವಿಶಿಷ್ಟವಾದ ಸ್ಥಾನವಿದೆ ಆದರೆ ಈಗ ಬಂದಿರುವ ಡಿ.ಜೆ. ಹಾವಳಿಯಿಂದ ಯುವಕರು ದಾರಿತಪ್ಪುವುದಲ್ಲದೇ ಇದನ್ನೇ ಮೆರವಣಿಗೆ ಎಂದು ತಿಳಿಯುತ್ತಿದ್ದು ಇದು ನಮ್ಮ ಮಕ್ಕಳಿಗೆ ಇದೇ ಸಂಸ್ಕøತಿಯಾಗಿದೆ ಮಕ್ಕಳಿಗೆ ನಮ್ಮ ಸಂಸ್ಕøತಿ ಅರಿವು ಮೂಡಿಸುವಂತಹ ಜಾನಪದಕಲೆ, ಸಾಂಸ್ಕøತಿಕ ನೃತ್ಯಗಳನ್ನು ಏರ್ಪಡಿಸುವ ಮೂಲಕವಾದರೂ ಜನರಿಗೆ ನಮ್ಮ ಸಂಸ್ಕೃತಿಯ ಅವಿವನ್ನು ಈ ಕಾರ್ಯಕ್ರಮದ ಮೂಲಕ ಮೂಡಿಸಿ ಎಂದು ಹರೀಶ್ ಶಾಂತಿಸಭೆಯಲ್ಲಿ ಉತ್ತಮವಾದ ಸಲಹೆಯನ್ನು ನೀಡಿದರು.
ಇದು ನಮ್ಮ ನಿಮ್ಮೆಲ್ಲರ ಕಾರ್ಯಕ್ರಮ :
ಶಾಂತಿಸಭೆಯಲ್ಲಿ ಮಾತನಾಡಿದ ಎಸ್ಪಿ. ಕೋನಂ ವಂಶಿಕೃಷ್ಣ ಈ ಸತ್ಯಗಣಪತಿ ಜಾತ್ರೆಯೂ ರಾಜ್ಯದಲ್ಲೇ ಹೆಸರುವಾಸಿಯಾಗಿದ್ದು ಇದಕ್ಕೆ ಸಾಕಷ್ಟು ಜನರು ಬರುತ್ತಾರೆ ನಗರದಲ್ಲಿ ಜನಸಂದಣಿ ಹೆಚ್ಚಾಗಿರುತ್ತದೆ ಇಂತಹ ಸಂದರ್ಭದಲ್ಲಿ ಜನರು ತಮ್ಮದೇ ಕಾರ್ಯಕ್ರಮವೆಂದು ತಿಳಿಸಿದು ಜಾಗೃತೆವಹಿಸಿ ಆರಕ್ಷಕರೊಂದಿಗೆ ಕೈಜೋಡಿಸಿ ನಿಮ್ಮೊಂದಿಗೆ ನಾವಿದ್ದೇವೆ. 3-4 ನಾಲ್ಕು ಸಹಾಯಕೇಂದ್ರಗಳನ್ನು ತೆಗೆದು ಜನರಿಗೆ ಸೂಕ್ತ ಸೂಚನೆಗಳನ್ನು ನೀಡಲಾಗುವುದೆಂದು ತಿಳಿಸಿದ ಅವರು ಮುಂಜಾಗೃತಕ್ರಮವಾಗಿ ನವೆಂಬರ್ 23-24 ರಂದು ತಾತ್ಕಾಲಿಕವಾಗಿ ರಸ್ತೆಮಾರ್ಗವನ್ನು ಬದಲಿಸಲಾಗಿದ್ದು ತುಮಕೂರಿನಿಂದ ಶಿವಮೊಗ್ಗ, ಅರಸೀಕೆರೆ ಮಾರ್ಗವಾಗಿ ಚಲಿಸುವ ವಾಹನಗಳು ತಿಪಟೂರು ಕೆರೆಕೋಡಿಯಿಂದ ಹುಣಸೇಘಟ್ಟ, ಸಾಸಲಹಳ್ಳಿ, ಬುದವಾರಸಂತೆ ಗೇಟ್, ಗಂಡಸಿ ಮುಖಾಂತರ ಹೋಗುವುದು ಮತ್ತು ಶಿವಮೊಗ್ಗ, ಅರಸೀಕೆರೆ, ಹಾಸನದಿಂದ ತುಮಕೂರು ಕಡೆಗೆ ಹೋಗುವ ವಾಹನಗಳು ಕಂಚಾಘಟ್ಟ, ಗೋವಿನಪುರ, ಹಳೇಪಾಳ್ಳ, ಈಡೇನಹಳ್ಳಿ ಮಾರ್ಗದಲ್ಲಿ ಸಂಚರಿಸಿ ಬಿ.ಹೆಚ್.ರಸ್ತೆಯನ್ನು ಸೇರುವುದೆಂದು ತಿಳಿಸಿದರು.
ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ಮಾತನಾಡಿ ತಿಪಟೂರು ಗಣೇಶ ಮಹೋತ್ಸವವು ಬೆಂಗಳೂರು ಕರಗ ಮೈಸೂರು ದಸರಾದಂತೆ ವಿಶಿಷ್ಟವಾಗಿ ಬಹಳ ಅದ್ದೂರಿಯಾಗಿ ಸ್ವಾತಂತ್ರ್ಯಪೂರ್ವದಿಂದಲೂ ನಡೆದುಕೊಂಡು ಇಂದು 90ನೇ ವರ್ಷದಲ್ಲಿ ಯಾವುದೇ ಅಡೆತಡೆಯಿಲ್ಲದೇ ನಡೆದುಕೊಂಡು ಬರುತ್ತಿದ್ದು ಈ ಬಾರಿಯೂ ಯಾವುದೇ ಅಡೆತಡಗೆಳಿಲ್ಲದಂತೆ ಆಗಲೂ ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದ್ದು ಸಾರ್ವಜನಿಕರ ಸಹಕರಿಸಬೇಕೆಂದು ಕೋರಿದರು.
ಪೋಲೀಸ್ ಸಂಖ್ಯೆಯನ್ನು ಹೆಚ್ಚಿಸಿಲ್ಲ :
ನಾನು ಹುಟ್ಟಿಬೆಳದದ್ದು ಇಲ್ಲಿಯೇ ನಾನು ಚಿಕ್ಕವನಾಗಿದ್ದು 10 ಸಾವಿರ ಜನಸಂಖ್ಯೆಇದಾಗ ಇದ್ದ ಪೋಲೀಸ್ ಸಂಖ್ಯೆ ಇದ್ದು ಈಗ ಜನಸಂಖ್ಯೆ 1 ಲಕ್ಷದಾಟಿದರು ಅಷ್ಟೇ ಪೋಲೀಸರಿರುವುದು ದುರಾದೃಷ್ಟ ಈಗಲಾದರೂ ಪೋಲೀಸ್ ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಿ ಎಂದು ಜೆ.ಡಿ.ಎಸ್ ತಾಲ್ಲೂಕು ಅಧ್ಯಕ್ಷ ತರಕಾರಿ ನಾಗರಾಜು ವಿನಂತಿಸಿದರು.
ಕಾರ್ಯಕ್ರಮದಲ್ಲಿ ಉಪವಿಭಾಗಾಧಿಕಾರಿ ನಂದಿನಿ, ಡಿವೈಎಸ್ಪಿ ಕಲ್ಯಾಣ್‍ಕುಮಾರ್, ತಹಸಿಲ್ದಾರ್ ಆರತಿ, ಸಿ.ಪಿ.ಐ ನವೀನ್‍ಕುಮಾರ್, ಜಯಲಕ್ಷ್ಮಿ, ವಿವಿಧ ಇಲಾಖೆಗಳ ಅಧಿಕಾರಿಗಳು, ನಗರಸಭಾ ಸದಸ್ಯರುಗಳು, ವಿವಿಧ ಸಮಾಜದ ಮುಖಂಡರುಗಳು ಭಾಗವಹಿಸಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ