‘ ಸಮಯಕ್ಕೆ ಸರಿಯಾಗಿ ಸಾಲ ಮರುಪಾವತಿ ಮಾಡಿ’

ಮಲೇಬೆನ್ನೂರು:

    ಸಾಲ ಪಡೆದವರು ಸರಿಯಾಗಿ ಸಾಲ ಮರು ಪಾವತಿಸಿದರೆ ಮಾತ್ರ ಸಹಕಾರ ಸಂಘದ ಉಳಿಯುತ್ತದೆ ಎಂದು ಸಂಸದ ಜಿ.ಎಂ.ಸಿದ್ದೇಶ್ವರ ಹೇಳಿದರು.,

    ಸಮೀಪದ ನಂದಿಗುಡಿಯಲ್ಲಿ ನಂದಿ ಪತ್ತಿನ ಸಹಕಾರ ಸಂಘ ನಿಯಮಿತದ ರಜತ ಮಹೋತ್ಸವದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ಸಹಕಾರ ಸಂಘಗಳಲ್ಲಿ ರಾಜಕೀಯ ಬೆರಸಬೇಡಿ. ಆರ್ಥಿಕ ಸಮಸ್ಯೆಗೆ ಸಿಲುಕಿ ನೂರಾರು ಸಹಕಾರ ಸಂಘ ನಷ್ಟ ಹೊಂದಿ ಮುಳುಗಿವೆ ಎಂದರು.

     ಸಹಕಾರ ತತ್ವ ಪಾಲಿಸಿ ಸಂಘ ಬೆಳೆಸಿಕೊಂಡು ಹೋಗಿ ಎಂದು ಅರಸೀಕರೆ ತಾಲ್ಲೂಕು ಯಳನಾಡು ಜ್ಞಾನಪ್ರಭು ದೇಶಿಕೇಂದ್ರ ಸ್ವಾಮೀಜಿ ಮಾತನಾಡಿದರು, ಹಣಕಾಸು ನಿರ್ವಹಣೆಗೆ ಸೂಕ್ತ ವ್ಯವಸ್ಥೆ ಇರಬೇಕು ಎಲ್ಲವೂ ಹಣದಿಂದಲೇ ಸಾದ್ಯವಿಲ್ಲ ಎಂದರು.
ಸಮಾಜದ ಜನತೆ ಗುರುಹಿರಿಯರ ಬಗ್ಗೆ ಗೌರವ ಇಟ್ಟುಕೊಳ್ಳಿ ಎಂದು ಸಮಾಜದ ಎದುರಿಸುತ್ತಿರುವ ಸಮಸ್ಯೆ ಸೂಕ್ಷ್ಮವಾಗಿ ಬಿಡಿಸಿಟ್ಟರು.
ಇಮ್ಮಡಿ ಕರಿಬಸವ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ ಮಠ, ಗುರುಹಿರಿಯರ ಬಗ್ಗೆ ಗೌರವ ಇರಲಿ. ಸಮಾಜದ ಉನ್ನತಿಗೆ ಶ್ರಮಿಸಿ ಎಂದರು.ಡಾ. ಬಿ.ಎಸ್. ಸಾತೇನಹಳ್ಳಿ ಪ್ರಾಸ್ತಾವಿಕ ನುಡಿಗಳಲ್ಲಿ ಸಂಘದ ಹುಟ್ಟು , ಸಾಧನೆ ಮಾಹಿತಿ ನೀಡಿದರು ಶಾಸಕ ಎಸ್. ರಾಮಪ್ಪ , ಶಿವ ಬ್ಯಾಂಕ್ ಅಧ್ಯಕ್ಷ ಡಾ. ಚಂದ್ರಶೇಖರ್, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ಕರ್ನಾಟಕ ಉದ್ಯೋಗ ಮಿತ್ರ ನವದೆಹಲಿ, ನಿವಾಸಿ ನಿರ್ದೇಶಕ ಪಿ. ಜಯರಾಜ್, ಹೊಳಲ್ಕೆರೆ ಒಂಟಿ ಕಂಬದ ಮಠದ ಶಿವಲಿಂಗ ಸ್ವಾಮೀಜಿ ಹಾಜರಿದ್ದು ಶುಭ ಕೋರಿದರು. 

       ದಾವಣಗೆರೆ ಕಸಾಪ ಜಿಲ್ಲಾಧ್ಯಕ್ಷ ಡಾ. ಮಂಜುನಾಥ ಕುರ್ಕಿ ಸಹಕಾರ ಸಂಘಗಳ ಕುರಿತು ಉಪನ್ಯಾಸ ನೀಡಿದರು.ಸಹಕಾರ ಸಂಘದ ಪ್ರಗತಿಗೆ ನಿರ್ದೇಶಕರು, ಶೇರುದಾರರು ಕಾರಣ ಎಂದು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಂಘದ ಅಧ್ಯಕ್ಷ ಕೆ. ರಾಜು ಹರ್ಷ ವ್ಯಕ್ತಪಡಿಸಿದರು.ಸಂಘದ ಹಾಲಿ, ಮಾಜಿ ನಿರ್ದೇಶಕರಿಗೆ ನೆನಪಿನ ಕಾಣಿಕೆ ನೀಡಿ ಸನ್ಮಾನಿಸಿದರು.ಸಹಕಾರ ಸಂಘಗಳ ಉಪ ನಿಬಂಧಕ ಎನ್. ಸುರೇಶ್, ಸಹಕಾರ ಅಭಿವೃದ್ಧಿ ಅಧಿಕಾರಿ ಎಸ್.ಜಿ.ರುದ್ರಪ್ಪ, ಸಂಘದ ನಿರ್ದೇಶಕರು, ಸಿಬ್ಬಂದಿ, ಶೇರುದಾರರು, ಗ್ರಾಹಕರು ಇದ್ದರು. 

                         ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link