108 ಅ್ಯಂಬುಲೆನ್ಸ್ ಸಿಬ್ಬಂದಿ ನಿರ್ಲಕ್ಷ್ಯ ಖಂಡಿಸಿ ಪ್ರತಿಭಟನೆ..!

ಹರಪನಹಳ್ಳಿ

    ಹಾವೇರಿ ಜಿಲ್ಲಾ ಪ್ರಜಾವಾಣಿ ವರದಿಗಾರ ಮಂಜುನಾಥ ಅವರು ಅಪಘಾತವಾಗಿ ಬಿದ್ದಾಗ ಅಲ್ಲಿಗೆ ಬಂದಿದ್ದ 108 ಅಂಬುಲೆನ್ಸ್ ಸಿಬ್ಬಂದಿ ವಾಪಸ್ಸಾಗಿದ್ದು ಮತ್ತು ಆತನ ದೇಹವನ್ನು ಆಟೋದಲ್ಲಿ ಸಾಗಿಸಿರುವುದನ್ನು ಖಂಡಿಸಿ ಹರಪನಹಳ್ಳಿ ತಾಲ್ಲೂಕು ಪತ್ರಕರ್ತರ ಸಂಘ ಶುಕ್ರವಾರ ಪ್ರತಿಭಟನೆ ನಡೆಸಿತು.

   ಮಿನಿವಿಧಾನಸೌಧದ ಆವರಣದಲ್ಲಿ ಪ್ರತಿಭಟನಾ ಬಹಿರಂಗ ಸಭೆ ನಡೆಸಿದ ಪತ್ರಕರ್ತರು, ಅಪಘಾತವಾಗಿ ಬಿದ್ದಿದ್ದ ಮಂಜುನಾಥ್ ಅವರನ್ನು 108 ಅಂಬುಲೆನ್ಸ್ ಸಿಬ್ಬಂದಿ ಕರೆದು ತರಬೇಕಿತ್ತು, ಆ ಬಳಿಕ ವೈಧ್ಯರು ಪರಿಶೀಲಿಸಿ ದೃಢಪಡಿಸುತ್ತಿದ್ದರು. ಅವರೇ ಸ್ವತಃ ಸತ್ತಿದ್ದಾರೆ ಎಂದು ನಿರ್ಧರಿಸಲು ಸಿಬ್ಬಂದಿಗೆ ಅಧಿಕಾರ ಕೊಟ್ಟವರು ಯಾರೂ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದರು.

   ಅವರ ದೇಹವನ್ನು ಅಪೆ ಆಟೋದಲ್ಲಿ ತರುವ ಮೂಲಕ ಅಮಾನವೀಯತೆ ಮೆರೆದಿದ್ದಾರೆ. ಇಂತಹ ಘಟನೆಗಳು ಹೆಚ್ಚಾಗುತ್ತಲಿವೆ. ಎಲ್ಲ ಪತ್ರಕರ್ತರಿಗೂ ರಕ್ಷಣೆ ಕೊಡಬೇಕು ಎಂದು ಆಗ್ರಹಿಸಿದರು. ತಹಶೀಲ್ದಾರ ಮುಖಾಂತರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದರು. ತಾಲ್ಲೂಕು ಅಧ್ಯಕ್ಷ ಎಚ್.ಎ.ಸುರೇಂದ್ರಬಾಬು, ಉಪಾಧ್ಯಕ್ಷ ಬಿ.ರಾಮಪ್ರಸಾದಗಾಂಧಿ, ಕಾರ್ಯದರ್ಶಿ ಕೆ.ಉಚ್ಚಂಗೆಪ್ಪ, ಖಜಾಂಚಿ ಡಿ.ವಿಶ್ವನಾಥ, ಪಿ.ಕರಿಬಸಪ್ಪ, ಎಂ.ಸುರೇಶ, ಅರ್ಜುನ, ಮಾಳ್ಗಿ ಮಂಜುನಾಥ, ವೆಂಕಟೇಶ್, ಮದನ್, ಮಾಧವರಾವ್, ಎನ್.ರವಿ, ಪಿ.ನಾಗರಾಜ್ ಅವರೂ ಇದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap