ಚಿತ್ರದುರ್ಗ;
ನರೇಂದ್ರ ಮೋದಿಯವರನ್ನು ಮತ್ತೊಮ್ಮೆ ಪ್ರಧಾನ ಮಂತ್ರಿಯನ್ನಾಗಿ ನೋಡಬೇಕಾದರೆ ರಾಜಸ್ತಾನ ವಿಧಾನಸಭೆ ಚುನಾವಣೆಯಲ್ಲಿ ಪಕ್ಷ ಗೆಲ್ಲಬೇಕು ಅದಕ್ಕೆ ಇಲ್ಲಿರುವ ಮತದಾರರ ತಪ್ಪದೆ ಡಿ.7 ರಂದು ನಡೆಯಲಿರುವ ಚುನಾವಣೆಗೆ ಬಂದು ಮತದಾನ ಮಾಡುವಂತೆ ಶಾಸಕ ಜೋಗರಾಮಜಿ ಪಟೇಲ್ ಜೈನ ಬಂಧುಗಳಲ್ಲಿ ಮನವಿ ಮಾಡಿದ್ದಾರೆ,
ರಾಜಸ್ತಾನದಿಂದ ವ್ಯಾಪಾರದ ಸಲುವಾಗಿ ರಾಜ್ಯದ ನಾನಾ ಕಡೆಗಳಲ್ಲಿ ಆಗಮಿಸಿ ನೆಲೆಯೂರಿರುವ ಜೈನ್ ಸಮಯದಾಯದ ಬಂಧುಗಳನ್ನು ಬೇಟಿ ಮಾಡಿ ಚುನಾವಣೆಯಲ್ಲಿ ಮತದಾನ ಮಾಡಲು ಆಗಮಿಸುವಂತೆ ಮನವಿ ಮಾಡುವ ಹಿನ್ನಲೆಯಲ್ಲಿ ಚಿತ್ರದುರ್ಗ ನಗರದ ತೇರಪಂಥ್ ಭವನದಲ್ಲಿ ಬುಧವಾರ ಏರ್ಪಡಿಸಿದ್ದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು
200 ಸ್ಥಾನವನ್ನು ಹೊಂದಿರುವ ರಾಜಸ್ತಾನ ವಿಧಾನಸಭೆಯಲ್ಲಿ ಹಾಲಿ ಬಿಜೆಪಿ ಅಧಿಕಾರ ನಡೆಸುತ್ತಿದ್ದು 163 ಜನ ಶಾಸಕರನ್ನು ಹೊಂದಿದೆ ಈ ಬಾರಿ ಡಿ. 7 ರಂದು ನಡೆಯಲಿರುವ ಚುನಾವಣೆಯಲ್ಲಿ 180 ಸ್ಥಾನಗಳನ್ನು ಗೆಲ್ಲುವ ಗುರಿಯನ್ನು ಹೊಂದಲಾಗಿದೆ ಇದಕ್ಕೆ ನಿಮ್ಮಗಳ ಸಹಕಾರ ಅಗತ್ಯವಾಗಿದೆ ಎಂದರು.
2019ರಲ್ಲಿ ನಡೆಯಲಿರುವ ಲೋಕಸಭಾ ಚುನಾವಣೆಗೆ ಇಂದು ದಾರಿ ದೀಪವಾಗಿದೆ ವಿಧಾನಸಭೆ ಚುನಾವಣೆ ಸಮಿ ಫೈನಲ್ ಆದರೆ ಲೋಕಸಬಾ ಚುನಾವಣೆ ಫೈನಲ್ ಆಗಲಿದೆ. ಬೇರೆ ಪಕ್ಷದಂತೆ ಬಿಜೆಪಿ ಯಾವುದೇ ಮುಖಂಡರ ಪಕ್ಷವಲ್ಲ, ಅದು ಕಾರ್ಯಕರ್ತರ ಪಕ್ಷವಾಗಿದೆ ಟೀಕೇಟ್ ಹಂಚಿಕೆಯನ್ನು ಸೇರಿದಂತೆ ವಿವಿಧ ಕಾರ್ಯಕ್ರಮಗಳನ್ನು ಕಾರ್ಯಕರ್ತರನ್ನು ಕೇಳಿ ಮಾಡಲಾಗುತ್ತದೆ ವ್ಯಾಪಾರ ಸಲುವಾಗಿ ಅಲ್ಲಿಂದ ರಾಜ್ಯದ ನಾನಾಕಡೆಯಲ್ಲಿ ರಾಜಸ್ತಾನದ ಮತದಾರರು ಇದ್ದಾರೆ ಅವರನ್ನು ಭೇಟಿ ಮಾಡಿ ಮತದಾನದಂದು ಆಗಮಿಸಿ ಮತದಾನ ಮಾಡುವಂತೆ ಎಲ್ಲರಲ್ಲಿ ಮನವಿ ಮಾಡಲಾಗುತ್ತಿದೆ ಈಗಲೇ ಬಳ್ಳಾರಿ ಸೇರಿದಂತೆ ಇತರೆ ಜಿಲ್ಲೆಗಳಿಗೆ ಭೇಟಿ ನೀಡುವುದರ ಮೂಲಕ ಅಲ್ಲಿನ ರಾಜಸ್ತಾನದ ಮತದಾರರಲ್ಲಿಯೂ ಸಹಾ ಮನವಿ ಮಾಡಲಾಗಿದೆ ಎಂದರು.
ಮೋದಿ ದೇಶದ ಪ್ರಧಾನ ಮಂತ್ರಿಗಳಾದ ಮೇಲೆ ದೇಶದ ಘನತೆಯನ್ನು ಹೆಚ್ಚುವಂತ ಕೆಲಸ ಮಾಡಿದ್ದಾರೆ. ಬೇರೆ ದೇಶಗಳ ಮುಂದೆ ತಲೆ ತಗ್ಗಿಸುತ್ತಿದ್ದ ಭಾರತವನ್ನು ತಲೆ ಎತ್ತಿ ನಡೆಯುವಂತೆ ಮಾಡಿದ್ದಾರೆ ಮುಂದಿನ ದಿನಗಳಲ್ಲಿಯೂ ಅವರೇ ದೇಶದ ಪ್ರಧಾನ ಮಂತ್ರಿಯಾಗಿರಬೇಕೆಂದು ಬಹಳಷ್ಟು ಜನ ಬಯಸಿದ್ದಾರೆ ಅದಕ್ಕೆ ಪೂರಕವಾಗಿ ನಾವು ನೀವು ಕೆಲಸ ಮಾಡಬೇಕಿದೆ. ಇದರಿಂದ ರಾಜಸ್ತಾನಕ್ಕೆ ಬಂದು ತಪ್ಪದೆ ಮತದಾನ ಮಾಡುವಂತೆ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಶಾಸಕ ತಿಪ್ಪಾರೆಡ್ಡಿ ಮಾತನಾಡಿ ಮುಂದಿನ ದಿನಗಳಲ್ಲಿ ನಡೆಯುತ್ತಿರುವ 5 ರಾಜ್ಯಗಳ ವಿಧಾನಸಭಾ ಚುನಾವಣೆ ಮಹತ್ತರವಾದ ಪಾತ್ರವನ್ನು ವಹಿಸಲಿದೆ. ರಾಜಾಸ್ತಾನದಲ್ಲಿ ಗೆದ್ದ ಪಕ್ಷ ಲೋಕಸಭೆಯಲ್ಲಿ ಅಧಿಕಾರ ನಡೆಸುತ್ತದೆ ಎಂಬ ಪ್ರತೀತಿ ಇದೆ ಈ ಹಿನ್ನಲೆಯಲ್ಲಿ ರಾಜಾಸ್ತಾನದಲ್ಲಿ ಮತವನ್ನು ಹೊಂದಿ ಇಲ್ಲಿ ವ್ಯಾಪಾರಕ್ಕಾಗಿ ಬಂದಿರುವ ಎಲ್ಲರು ಸಹಾ ಡಿ. 7 ರಂದು ನಡೆಯಲಿರುವ ಚುನಾವಣೆಯಲ್ಲಿ ತಪ್ಪದೆ ಮತದಾನವನ್ನು ಮಾಡಲು ಹೋಗಬೇಕಿದೆ, ಯಾವುದೆ ರೀತಿಯ ಕಾರಣವನ್ನು ಹೇಳದೆ ಅಲ್ಲಿಗೆ ಹೋಗಲು ಈಗಿನಿಂದಲೇ ಸಿದ್ದತೆಯನ್ನು ಮಾಡಿಕೊಳ್ಳಿ ಕೊನೆಗಳಿಗೆಯಲ್ಲಿ ಆಗಲಿಲ್ಲ ಎಂಬ ಉತ್ತರ ಬರಬಾರದೆಂದು ಹೇಳಿದರು.
ಕಾರ್ಯಕ್ರಮದಲ್ಲಿ ವಿಷ್ಣ ಸಮಾಜದ ಅಧ್ಯಕ್ಷ ಸುಜಾ ರಾಮಜಿ, ಟ್ರಸ್ಟ್‍ಗಳಾದ ಪೃಥ್ವಿರಾಜ್, ಗೋಪಾಲ್ ಸಿಂಗ್, ನಗರಸಭಾ ಸದಸ್ಯ ಸುರೇಶ್ ಸೇರಿದಂತೆ ಇತರರು ಭಾಗವಹಿಸಿದ್ದರು,
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ