ಹುಳಿಯಾರು:
ಮಾರುಕಟ್ಟೆಯಲ್ಲಿ ರಾಗಿ ಬೆಲೆ ಕುಸಿದಿರುವುದರಿಂದ ಸರ್ಕಾರ ತಕ್ಷಣ ನಫೆಡ್ ಕೇಂದ್ರ ತೆರದು ಸರ್ಕಾರದ ಕನಿಷ್ಟ ಬೆಂಬಲ ಬೆಲೆಯಲ್ಲಿ ರಾಗಿ ಖರೀಧಿಸುವಂತೆ ರೈತ ಸಂಘದ ರಾಜ್ಯಾಧ್ಯಕ್ಷ ಹೊಸಹಳ್ಳಿ ಚಂದ್ರಣ್ಣ ಅವರು ಒತ್ತಾಯಿಸಿದ್ದಾರೆ .ಹುಳಿಯಾರಿನ ರಾಮಗೋಪಾಲ್ ಸರ್ಕಲ್ ಬಳಿಯ ರೈತ ಸಂಘದ ಕಛೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು ತಾಲೂಕಿನಲ್ಲಿ ಹತ್ತನ್ನೆರಡು ವರ್ಷಗಳ ನಂತರ ಉತ್ತಮವಾಗಿ ರಾಗಿ ಬೆಳೆ ಬಂದಿದೆ.
ಒಂದು ಕ್ವಿಂಟಾಲ್ ರಾಗಿ ಬೆಳೆಯಲು ಕನಿಷ್ಟ ಎಚಿದರೂ ಮೂರ್ನಲ್ಕು ಸಾವಿರ ರೂ. ವೆಚ್ಚವಾಗುತ್ತದೆ. ಆದರೆ ಮಾರುಕಟ್ಟೆಯಲ್ಲಿ ಮೂರು ಸಾವಿರದ ಆಸುಪಾಸಿನಲ್ಲಿದ್ದ ರಾಗಿ ಬೆಲೆ ಹೊಲದಲ್ಲಿ ಫಸಲು ಬಂದೊಡನೆ ದಿಡೀರ್ ಕುಸಿತ ಕಂಡಿದೆ. ಹಾಗಾಗಿ ರೈತರ ಹಿತ ಕಾಯುವ ನಿಟ್ಟಿನಲ್ಲಿ ಸರ್ಕಾರ ನಫೆಡ್ ತೆರೆದು ಕೇಂದ್ರ ಸರ್ಕಾರದ 3150 ರೂ. ಬೆಂಬಲ ಬೆಲೆ ಜೊತೆಗೆ ರಾಜ್ಯ ಸರ್ಕಾರ 1000 ರೂ. ಸಹಾಯ ಧನ ಸೇರಿಸಿ 4150 ರೂ.ಗೆ ರಾಗಿ ಖರೀಧಿ ಮಾಡುವಚಿತೆ ಅವರು ಒತ್ತಾಯಿಸಿದ್ದಾರೆ.
ಕೊಬ್ಬರಿ ಬೆಲೆಯೂ ಕುಸಿತ
ಕಳೆದ ಎರಡು ವರ್ಷಗಳಿಗೆ ಓಲಿಸಿದರೆ ಈ ವರ್ಷ ಕೊಬ್ಬರಿ ಬೆಲೆಯೂ ಸಹ ಕುಸಿತಕಂಡಿದ್ದು 11 ಸಾವಿರದ ಆಸುಪಾಸಿಗೆ ಬಂದು ನಿಂತಿದೆ. ಒಂದು ಕ್ವಿಂಟಾಲ್ ಕೊಬ್ಬರಿ ಬೆಳೆಯಲು ರೈತನಿಗೆ ಕನಿಷ್ಟ ಇಪ್ಪತ್ತು ಸಾವಿರ ರೂ. ವೆಚ್ಚವಾಗುತ್ತದೆ. ಕೃಷಿ ಬೆಲೆ ಆಯೋಗವೂ ಸಹ ಕೇಂದ್ರ ಸರ್ಕಾರಕ್ಕೆ 15 ಸಾವಿರ ರೂ. ಬೆಂಬಲ ಬೆಲೆ ನೀಡುವಂತೆ ವರದಿ ನೀಡಿದೆ. ರೈತರೂ ಸಹ ವ್ಶೆಜ್ಞಾನಿಕ ಬೆಲೆಗಾಗಿ ಹೋರಾಟ ಮಾಡಿದ್ದಾರೆ.
ಆದರೆ ಕೇಂದ್ರ 9920 ರೂ. ಮಾತ್ರ ಬೆಂಬಲ ಬೆಲೆ ಘೋಷಿಸಿದೆ. ಇತ್ತೀಚಿನ ಮಳೆ, ಬೆಳೆ ನಂಬಿ ರೈತರು ಬದುಕು ಕಟ್ಟಿಕೊಳ್ಳಲಾಗುವುದಿಲ್ಲ. ಹಾಗಾಗಿ ಸರ್ಕಾರ ಮಧ್ಯ ಪ್ರವೇಶಿಸಿ ಕೊಬ್ಬರಿಯ ಬೆಂಬಲ ಬೆಲೆ ಹೆಚ್ಚು ಮಾಡಿ ನಫೆಡ್ ಮೂಲಕ ಕೊಬ್ಬರಿ ಖರೀಧಿಸಬೇಕಿದೆ ಎಂದರು.
ರಾಜಕಾರಣಿಗಳಿಗೆ ಅಧಿಕಾರದ ವ್ಯಾಮೋಹ
ರಾಜಕಾರಣಿಗಳಿಗೆ ಅಧಿಕಾರದ ವ್ಯಾಮೋಹ ಹೆಚ್ಚಾಗಿದ್ದು ಯಡಿಯೂರಪ್ಪ ಅವರು ತಮ್ಮ ಖುರ್ಚಿ ಉಳಿಸಿಕೊಳ್ಳಲು, ಸಿದ್ದರಾಮಯ್ಯ ಮತ್ತು ಕುಮಾರಸ್ವಾಮಿ ಅವರು ಮತ್ತೆ ಸಿಎಂ ಆಗಲು ಚಿಂತಿಸುತ್ತಿದ್ದರೆ ವಿನಃ ರಾಜ್ಯದ ಜನರ ಹಿತಕ್ಕಾಗಿ ಒಂದು ನಿಮಿಷವೂ ಯೋಚಿಸುವುದಿಲ್ಲ. ಇದಕ್ಕೆ ಈಗ ನಡೆಯುತ್ತಿರುವ ಉಪ ಚುನಾವಣೆಯಲ್ಲಿ ಇವರಾರೂ ರೈತರ ಕಷ್ಟ, ನೆರೆ ಸಂತ್ರಸ್ತರ ಗೋಳಿದ ಬಗ್ಗೆ ತುಟಿ ಬಿಚ್ಚದಿರುವುದು ನಿದರ್ಶನವಾಗಿದೆ. ಇವರನ್ನು ಎಚ್ಚರಿಸುವ ಸಲುವಾಗಿ ರೈತರು ಒಗ್ಗಟ್ಟಾಗಿ ಹೋರಾಟ ರೂಪಿಸುವ ಅಗತ್ಯವಿದೆ ಎಂದರಲ್ಲದೆ ಬೆಂಬಲ ಬೆಲೆಯಲ್ಲಿ ರಾಗಿ, ಕೊಬ್ಬರಿ ಖರೀಧಿಗೆ ಸರ್ಕಾರ ಮುಂದಾಗದಿದ್ದರೆ ಬೆಂಗಳೂರು ಮತ್ತು ದೆಹಲಿ ಚಲೋಗೆ ಕರೆ ಕೊಡಬೇಕಾಗುತ್ತದೆ ಎಚಿದು ಎಚ್ಚರಿಸಿದ್ದಾರೆ.
ರೈತ ಸಂಘದ ರಾಜ್ಯ ಉಪಾಧ್ಯಕ್ಷ ತುರುವೇಕೆರೆ ಭೋಜರಾಜು, ರೈತ ಸಂಘದ ತಾಲೂಕು ಕಾರ್ಯದರ್ಶಿ ಕರಿಯಪ್ಪ, ಹೋಬಳಿ ಅಧ್ಯಕ್ಷ ಎಸ್.ಸಿ.ಬೀರಲಿಂಗಯ್ಯ, ಚಿ.ನಾ.ಹಳ್ಳಿ ಕಸಬ ಅಧ್ಯಕ್ಷ ಕೆಂಪಲಿಂಗಯ್ಯ, ತಿಮ್ಮಸ್ವಾಮಿ, ಎಚ್.ಎ.ರಂಗನಾಥ್, ಶ್ರೀನಿವಾಸ್, ಬಿ.ಎಸ್.ರಂಗಸ್ವಾಮಿ, ನೀರ ಈರಣ್ಣ, ಪರಮಶಿವಯ್ಯ, ಸಾಕುಬಾಯಿ, ಪುಟ್ಟಿಬಾಯಿ, ಭೀಮನಾಯ್ಕ, ಹೊನ್ನಪ್ಪ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ