ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ ಆಗ್ರಹ

ದಾವಣಗೆರೆ 

       ಅಯೋಧ್ಯೆಯಲ್ಲಿ ಮಂದಿರ ನಿರ್ಮಾಣದ ವಿಚಾರದಲ್ಲಿ ನ್ಯಾಯಾಲಯದ ವಿಳಂಬ ಧೋರಣೆಯಿಂದಾಗಿ ಹಿಂದೂ ಸಮಾಜದ ಸಹನೆ ಕಟ್ಟೆಯೊಡೆದ್ದು, ತಕ್ಷಣವೇ ಕೇಂದ್ರ ಸರ್ಕಾರ ಸೋಮನಾಥ ಮಂದಿರ ಮಾದರಿಯಲ್ಲಿ ಶ್ರೀರಾಮಚಂದ್ರನ ಭವ್ಯ ಮಂದಿರ ನಿರ್ಮಾಣ ಮಾಡಬೇಕೆಂದು ವಿಶ್ವ ಹಿಂದೂ ಪರಿಷತ್‍ನ ಮಂಗಳೂರು ವಿಭಾಗ ಕಾರ್ಯದರ್ಶಿ ಶರಣ್ ಪಂಪ್‍ವೆಲ್ ಒತ್ತಾಯಿಸಿದ್ದಾರೆ.

        ಇಲ್ಲಿನ ಮೋತಿ ವೀರಪ್ಪ ಪದವಿಪೂರ್ವ ಕಾಲೇಜು ಮೈದಾನದಲ್ಲಿ ಶನಿವಾರ ಸಂಜೆ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ವಿಶ್ವ ಹಿಂದೂ ಪರಿಷತ್ ವತಿಯಿಂದ ಏರ್ಪಡಿಸಿದ್ದ ಜನಾಗ್ರಹ ಸಭೆಯಲ್ಲಿ ಮುಖ್ಯ ಭಾಷಣಕಾರರಾಗಿ ಭಾಗವಹಿಸಿ ಮಾತನಾಡಿದ ಅವರು, ನಮಗೆ ಕಾನೂನು, ನ್ಯಾಯಾಂಗದ ಬಗ್ಗೆ ಅಪಾರ ಗೌರವವಿದೆ. ಆದರೆ, ಜನರ ನಂಬಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಯಾವ ನ್ಯಾಯಾಲಯವೂ ತೀರ್ಪು ಕೊಡಲು ಸಾಧ್ಯವಿಲ್ಲ ಎಂದರು.

      ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ದಶಕಗಳ ಕಾಲ ಕಾದಿದ್ದಾಗಿದೆ. ನ್ಯಾಯಾಲಯದ ವಿಳಂಬ ಧೋರಣೆಯಿಂದಾಗಿ ಹಿಂದೂ ಬಾಂಧವರ ಸಹನೆ ಕಟ್ಟೆಯೊಡೆದಿದೆ. ಸರ್ದಾರ್ ವಲ್ಲಭಬಾಯಿ ಪಟೇಲ್ ಯಾವ ಕೋರ್ಟ್‍ಗೂ ಹೋಗಿರಲಲಿಲ್ಲ. ಮುಸ್ಲಿಮರ ಕಾಲಿಗೂ ಬಿದ್ದಿರಲಿಲ್ಲ. ತಮ್ಮ ಸ್ವಂತ ನಿರ್ಧಾರದಿಂದ ಪಟೇಲ್‍ರವರು ಸೋಮನಾಥ ಮಂದಿರ ಕಟ್ಟಿದ ಮಾದರಿಯಲ್ಲಿಯೇ ಈಗಿನ ಕೇಂದ್ರ ಸರ್ಕಾರ ಸಹ ಭವ್ಯ ರಾಮಮಂದಿರ ನಿರ್ಮಾಣಕ್ಕಾಗಿ ಬರುವ ಸಂಸತ್ ಅಧಿವೇಶನದಲ್ಲಿ ಶಾಸನವೊಂದನ್ನು ತಂದು ಮಂದಿರ ನಿರ್ಮಾಣ ಮಾಡಬೇಕೆಂದು ಆಗ್ರಹಿಸಿದರು.

     ಪ್ರಭು ಶ್ರೀರಾಮ ಅಯೋಧ್ಯೆಯ ಜೋಪಡಿಯಲ್ಲಿ ಪೂಜೆಗೆ ಒಳಪಡುತ್ತಿದ್ದಾನೆ. ಇದು ಇಲ್ಲಿಗೆ ಸಾಕು. ಕೇಂದ್ರ ಸರ್ಕಾರ ಡಿ.11ರಿಂದ ಆರಂಭವಾಗಲಿರುವ ಸಂಸತ್ ಅಧಿವೇಶನದಲ್ಲಿ ಎಲ್ಲಾ ಸಂಸದರೂ ಪಕ್ಷಾತೀತವಾಗಿ ರಾಮಮಂದಿರ ನಿರ್ಮಾಣಕ್ಕೆ ಬೆಂಬಲಿಸಬೇಕು ಹಾಗೂ ಪ್ರಧಾನಿ ನರೇಂದ್ರ ಮೋದಿಯವರು ರಾಮ ಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳುವ ಮೂಲಕ ಜನರ ಭಾವನೆಗಳಿಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.

       ಹರಪನಹಳ್ಳಿ ಹಿರೇಹಡಗಲಿತ ಶ್ರೀಶಿವಯೋಗಿ ಹಾಲಸ್ವಾಮೀಜಿ ಮಾತನಾಡಿ, ಎಷ್ಟೇ ಅಡೆತಡೆ ಎದುರಾದರೂ ಹಿಂದೂ ಸಮಾಜ ಹಿಂಜರಿಯುವುದಿಲ್ಲ. ಅಯೋಧ್ಯೆಯ ಜನ್ಮಭೂಮಿಯಲ್ಲಿ ರಾಮ ಮಂದಿರ ನಿರ್ಮಿಸಿಯೇ ತೀರುತ್ತೇವೆ. ಇದರಲ್ಲಿ ಯಾವುದೇ ಅನುಮಾನ ಬೇಡ. ಏಕಪತ್ನಿ ವೃತಸ್ಥ, ಪಿತೃವಾಕ್ಯ ಪರಿಪಾಲಕನಾಗಿದ್ದ ರಾಮಚಂದ್ರನ ಆದರ್ಶ ಅಂತಹವರಿಗೆ ಬೇಡವಾಗಿದೆ. ಏಕೆಂದರೆ ಆ ಮಂದಿ ಇದಕ್ಕೆ ವ್ಯತಿರಿಕ್ತವಾದ ಸಿದ್ಧಾಂತ, ಜೀವನಶೈಲಿ ಹೊಂದಿರುವವರು. ನಮ್ಮ ದೇಶದ ಮನೆ-ಮನೆಯಲ್ಲೂ ಶ್ರೀರಾಮನ ಆದರ್ಶ ಪಾಲಿಸುವವರಿದ್ದಾರೆ. ರಾಮಮಂದಿರ ವಿರೋಧಿಸುವ ಜನರು ತಮ್ಮ ಸಮಾಜದಲ್ಲಿ ಅಂತಹ ನೂರು ಜನರನ್ನು ತೋರಿಸಲಿ ಎಂದು ಸವಾಲು ಹಾಕಿದರು

ವಿಹೆಚ್‍ಪಿ ವಿಭಾಗ ಸಂಘಟನಾ ಕಾರ್ಯದರ್ಶಿ ಪಿ.ಜಿ.ಷಡಾಕ್ಷರಪ್ಪ ಪ್ರಾಸ್ತಾವಿಕವಾಗಿ ಮಾತನಾಡಿದರು.ಕಾರ್ಯಕ್ರಮದ ಸಾನಿಧ್ಯವನ್ನು ಅಡವಿಹಳ್ಳಿ ಶ್ರೀವೀರಗಂಗಾಧರ ಹಾಲಸ್ವಾಮೀಜಿ, ದಾವಣಗೆರೆಯ ಶ್ರೀಶಿವಾನಂದ ಸ್ವಾಮೀಜಿ, ಆವರಗೊಳ್ಳ ಮಠದ ಶ್ರೀ ಓಂಕಾರ ಶಿವಾಚಾರ್ಯ ಸ್ವಾಮೀಜಿ, ಯರಗುಂಟೆ ಶ್ರೀಪರಮೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು. ವಿಹೆಚ್‍ಪಿ ಜಿಲ್ಲಾಧ್ಯಕ್ಷ ದೇವರಮನೆ ಶಿವಕುಮಾರ ಸ್ವಾಗತಿಸಿದರು. ಐಶ್ವರ್ಯ ಪ್ರಾರ್ಥಿಸಿದರು. ಬಸವರಾಜ ಗುಬ್ಬಿ ಕಾರ್ಯಕ್ರಮ ನಿರೂಪಿಸಿದರು. ಸಹನಾ ಮಂಜುನಾಥ ಶ್ರೀರಾಮ ಭಕ್ತಿಗೀತೆ ಹಾಡಿದರು. ಯೋಗೇಶ್ ಭಟ್ ವಂದನಾರ್ಪಣೆ ಮಾಡಿದರು. ರಾಜು ಶಾಂತಿಮಂತ್ರ ಪಠಿಸಿದರು.

  ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap