ಕೊರಟಗೆರೆ
ಪ್ರತಿಯೊಂದು ಹಿಂದುಳಿದ ಸಮಾಜಕ್ಕೆ ನಿಗಮ ಮಂಡಳಿಯನ್ನು ನೀಡಿರುವ ಸರ್ಕಾರ ಕುಂಚಿಟಿಗ ಸಮುದಾಯಕ್ಕೆ ನಿಗಮ ಮಂಡಳಿಯನ್ನು ನೀಡಬೇಕು ಇಲ್ಲವಾದಲ್ಲಿ ಇದರ ವಿರುದ್ದ ಪ್ರತಿಭಟಿಸುವುದಾಗಿ ಎಲೆರಾಂಪುರ ಕುಂಚಿಟಿಗ ಮಹಾಸಂಸ್ಥಾನಮಠದ ಪೀಠಾಧ್ಯಕ್ಷ ಡಾ. ಹನುಮಂತನಾಥಸ್ವಾಮೀಜಿ ಸರ್ಕಾರಕ್ಕೆ ಒತ್ತಾಯಿಸಿದರು.
ತಾಲೂಕಿನ ಕುಂಚಿಟಿಗ ಮಹಾಸಂಸ್ಥಾನ ಮಠದಲ್ಲಿ ಬುಧವಾರ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ನೇಕಾರರು, ವಿಶ್ವಕರ್ಮ,ಯಾದವ,ಉಪ್ಪಾರರಿಗೆ ನಿಮಗಮಂಡಳಿಯನ್ನು ಸರ್ಕಾರ ಸ್ಥಾಪಿಸಿದೆ ಈ ಸಮುದಾಯಗಳ ರೀತಿಯಲ್ಲಿಯೇ ಕುಂಚಿಟಿಗ ಸಮುದಾಯವೂ ಸಹ ವ್ಯಾಪಾರ ಮತ್ತು ವ್ಯವಸಾಯವನ್ನು ಮಾಡುತ್ತಿದ್ದು ಆರ್ಥಿಕವಾಗಿ, ಶೈಕ್ಷಣಿಕವಾಗಿ ಹಿಂದುಳಿದಿದ್ದು ಮುಖ್ಯವಾಹಿನಿಗೆ ಸಮುದಾಯ ಬರಲು ಸರ್ಕಾರ ಒಂದು ನಿಗಮವನ್ನು ಸ್ಥಾಪಿಸಿ ಇಂತಿಷ್ಟು ಅನುಧಾವನ್ನು ಸಮುದಾಯಕ್ಕೆ ಮೀಸಲಿಡಬೇಕು ಎಂದು ಮನವಿ ಮಾಡಿದರು.
ಹಲವು ದಶಕಗಳಿಂದಲೂ ಸಮುದಾಯದ ಬೇಡಿಕೆಗಳನ್ನು ಯಾವೊಂದು ಸರ್ಕಾರಗಳೂ ಪೂರೈಸಿಲ್ಲ ಆದರೆ ಯಡೆಯೂರಪ್ಪ ನೇತೃತ್ವದ ಬಿಜೆಪಿ ಪಕ್ಷವು ಹಲವು ತುಳಿತಕ್ಕೊಳಗಾದ ಸಮುದಾಯಕ್ಕೆ ನ್ಯಾಯ ಒದಗಿಸುತ್ತಿದ್ದು ಅದೇ ರೀತಿ ಕುಂಚಿಟಿಗ ಸಮುದಾಯಕ್ಕೂ ನ್ಯಾಯ ಸಿಗಬೇಕು ಎಂದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ








