ಪಾವಗಡ
ಅಂತರ್ಜಲ ಮಟ್ಟ ಕುಸಿತದಿಂದ ಜನ ಜಾನುವಾರುಗಳಿಗೆ ಕುಡಿಯುವಾ ನೀರಿನ ಆಹಾಕಾರ ಎದುರಾಗಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲ್ಲೂಕು ಅದ್ಯಕ್ಷರಾದ ಪೂಜಾರಪ್ಪ ತಿಳಿಸಿದರು.ಪಟ್ಟಣದ ತಹಶೀಲ್ದರ್ ಕಛೇರಿಗೆ ಮುಂದೆ ಪ್ರತಿಭಟನೆ ನಡೆಸಿ ಮನವಿ ಪತ್ರ ಸಲ್ಲಿಸಿ ಮಾತನಾಡಿ ಕಳೆದಾ ಹತ್ತು ವರ್ಷಗಳಿಂದ ವರ್ಷದಿಂದ ವರ್ಷಕ್ಕೆ ಮಳೆಯಾ ಪ್ರಮಾಣ ಇಳಿಕೆಯಾದ ಕಾರಣ ಅಂತರ್ಜಲ ಮಟ್ಟಕುಸಿತದಿಂದ ಕೊಳವೆ ಬಾವಿಗಳಲ್ಲಿ ನೀರು ಬತ್ತಿಹೊಗಿ ಸೀಗುವಾ ಅಲ್ಪಸ್ವಲ್ಪ ನೀರು ಕೂಡ ವಿಷಕಾರಿಯಾಗಿದ್ದು ,ರ್ಮಾವಾಗಿದ್ದು ಸಮಸ್ಯೆ ಇರುವಾ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನಿರಂತರವಾಗಿ ನೀರನ್ನು ಪೂರೈಕರ ಮಾಡಿ ಜನ ಜಾನುವಾರುಗಳ ರಕ್ಷಣೆ ಮಾಡಬೇಕೆಂದು ಒತ್ತಾಯಿಸಿದರು.
ಮನವಿ ಪತ್ರ ಸ್ವೀಕರಿಸಿ ತಹಶೀಲ್ದರ್ ವರದರಾಜು ಮಾತನಾಡಿ ಬೇಸಿಗೆಯ ಬರ ಎದುರಿಸಲು ತಾಲ್ಲೂಕು ಆಡಳಿತ ಸಿದ್ದವಾಗಿ ಸಮಸ್ಯೆ ಇರುವಾ ಕಡೆ ಕೊಳವೆ ಬಾವಿ ಕೋರೆಸುವುದು ಹಾಗೂ ಟ್ಯಾಂಕರ್ ಮೂಲಕ ನೀರು ಪೂರೈಕೆ ಮಾಡಲಾಗುತ್ತಿದೆ ಎಂದರು.ಈ ಸಂದರ್ಭದಲ್ಲಿ ಕರಿಯಣ್ಣ , ಆಶ್ವತ್ತಪ್ಪ , ವೀರಭದ್ರಪ್ಪ , ಹನುಂತರಾಯಪ್ಪ , ಗಂದಾಧರ್ , ಜಂಪಣ್ಣ ,ಕನ್ನಮೇಡಿ ಕೃಷ್ಣಮೂರ್ತಿ , ಗಂಗಪ್ಪ , ಗೊವಿಂದಪ್ಪ , ಪಕೃದೀನಮ್ಮ ಉಪಸ್ಥಿತರಿದ್ದರು.