ರೈತ ಸಂಘದ ಪದಾಧಿಕಾರಿಗಳಿಂದ ತಹಸೀಲ್ದಾರ್ ಗೆ ಮನವಿ

ಪಾವಗಡ:

         ಹೂ ಮಾರಕಟ್ಟೆಯಲ್ಲಿ ಅಳತೆಯಲ್ಲಿ ಮೋಸ ಮಾಡುತ್ತಿದ್ದಾರೆ ಮತ್ತು ಹಣ ನೀಡಲು ರೈತರಿಗೆ ಕಿರಿ ಕಿರಿ ಮಾಡುತ್ತಿದ್ದಾರೆ ಸರಿಪಡಿಸಬೆಕೆಂದು ತಾಹಸೀಲ್ದಾರ್‍ಅವರಿಗೆ ರಾಜ್ಯ ರೈತಸಂಘ ಮತ್ತು ಹಸಿರುಸೇನೆ ಪದಾಧಿಕಾರಿಗಳು ಮನವಿ ಪತ್ರಸಲ್ಲಿಸಿದರು.

         ತಾಲ್ಲೂಕು ಕಛೇರಿ ಮುಂದೆ ರೈತಸಂಘದ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಇರುವ ಅತ್ಯಲ್ಪ ನೀರಿನಲ್ಲಿ ಹೂ ಬೇಸಾಯ ಮಾಡಿದ ರೈತರಿಗೆ ಮಾರುಕಟ್ಟೆಯಲ್ಲಿ ಮೋಸ ಆಗುತ್ತಿರುವುದರಿಂದ ರೈತರ ಕಂಗಾಲಾಗಿದ್ದರೆ ಸರ್ಕಾರ ಮಧ್ಯಪ್ರವೇಶಿಸಿ ಮಾರುಕಟ್ಟೆಯಲ್ಲಿ ಅಗುತ್ತಿರುವ ಮೋಸ ವನ್ನುತಪ್ಪಿಸಬೇಕಾಗಿದೆ ಎಂದು ಒತ್ತಾಯಿಸಿದ್ದಾರೆ.

          ಒಂದು ಕೆಜಿ ಕನಕಾಂಬರ ಹೂ ಕಟ್ಟಿರುವ ಬಾರು ಲೆಕ್ಕದಲ್ಲಿ 16ರಿಂದ 18ಬಾರು ಅಳೆಯಬೇಕು ಮಂಡಿಯಲ್ಲಿ 9ಬಾರ್ ಅಳೆಯುತ್ತಾರೆ. ಸೇವಂತಿಗೆ ಹೂ 4ಬಾರು ಅಳೆತೆಯಲ್ಲಿ ಬರಬೇಕು ಮಂಡಿಯಲ್ಲಿ 2ಬಾರು ಅಳೆಯುತ್ತಾರೆ. ಮಲ್ಲಿಗೆ ಹೂ ಕೆಜಿ ಒಂದಕ್ಕೆ 16ಬಾರು ಅಳೆಯಬೇಕು ಕೇವಲ 6ಬಾರು ಅಳೆಯುತ್ತಾರೆ ಇದರಿಂದ ರೈತರಿಗೆ ಅಳತೆಯಲ್ಲಿ ಭಾರಿ ಪ್ರಮಾಣದ ಮೋಸ ಆಗುತ್ತಿದೆ ಅಳತೆ ಪದ್ದತಿಯನ್ನು ಬದಲಾಯಿಸಿ ಮೀಟರ್ ಅಳತೆಯನ್ನು ತರಬೇಕು ಅಥವಾ ತೂಕದಲ್ಲಿ ಹೂ ಕೊಳ್ಳುವ ವ್ಯವಸ್ಥೆ ಜಾರಿಗೆ ತರಬೇಕು ಮತ್ತು ಹಣವನ್ನು ಕೊಡುವಾಗ ಕಿರಿ ಕಿರಿ ಮಾಡುತ್ತಿದ್ದಾರೆ ಸರಿಪಡಿಸದೇ ಹೋದರೆ ಹೂ ಬೆಳೆಯುವ ರೈತರು ಅತ್ಮಹತ್ಯೆಗೆ ಮುಂದಾಗಬೇಕಾಗುತ್ತದೆ ಎಂದು ರೈತಸಂಘದ ಅಧ್ಯಕ್ಷ ಪೂಜಾರಪ್ಪ ಎಚ್ಚರಿಕೆ ಕೊಟ್ಟಿದ್ದಾರೆ.

         ಪ್ರತಿ ಪ್ರಭಟನೆಯಲ್ಲಿ ಪಿ ಇ ಹನುಮಂತರಾಯಪ್ಪ. ವೆಂಕಟರೆಡ್ಡಿ. ಜಂಪಯ್ಯ ಈರಸಿದ್ದಪ್ಪ ಅಂಜಿನಪ್ಪ ಎಸ್ ಅರ್ ವೆಂಕಟರೆಡ್ಡಿ. ಆಶ್ವತ್ತಪ್ಪ. ಡಿ ತಿಮ್ಮಯ್ಯ ಭಾಗವಹಿಸಿದ್ದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link