ಮಧುಗಿರಿ:
ಗ್ರಾಮದ ರಸ್ತೆಯ ಮಧ್ಯೆ ಭಾಗದಲ್ಲಿ ಹಾದು ಹೋಗಿರುವ 11000 ಕಿ.ವ್ಯಾಟ್‍ನ ಪ್ರೈಮರಿ ವಿದ್ಯುತ್ ತಂತಿಗಳನ್ನು ಹಾಗೂ ವಿದ್ಯುತ್ ಕಂಬಗಳನ್ನು ಬೇರೆ ಕಡೆ ಸ್ಥಳಾಂತರಿಸುವಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ತಾಲ್ಲೂಕಿನ ಕೊಡಿಗೇನಹಳ್ಳಿ ಹೋಬಳಿಯ ಜೋಗೇನಹಳ್ಳಿ ಗ್ರಾಮದಲ್ಲಿ 11000 ಕಿ.ವ್ಯಾಟ್‍ನ ಪ್ರೈಮರಿ ವಿದ್ಯುತ್ ತಂತಿಗಳು ಹಾದು ಹೋಗಿವೆ ಮಳೆಗಾಲ ಹತ್ತಿರ ವಾಗುತ್ತಿರುವುದರಿಂದ ಗಾಳಿ, ಮಳೆಯಿಂದಾಗಿ ಮನೆಗಳ ಸಮೀಪ ಮಕ್ಕಳು ಹಾಗೂ ಗ್ರಾಮಸ್ಥರು ಹೆದರಿಕೊಂಡು ಓಡಾಡುವ ವಾತವರಣ ಸೃಷ್ಟಿಯಾಗಿದೆ.
ವಿದ್ಯುತ್ ತಂತಿಗಳ ಸಮೀಪವೇ ಮನೆ ನಿರ್ಮಿಸಲು ಕಷ್ಟ ಕರವಾಗುತ್ತಿದೆ ಎಂಬುದು ಮನೆ ಮಾಲೀಕರ ಆಳಾಲಾಗಿದೆ ಹಾಗೂ ಮುಂದೆ ಆಗಬಹುದಾದ ಅನಾಹುತ ತಪ್ಪಿಸುವಂತೆ ದೊಡ್ಡಮಾಲೂರು ಪಿಡಿಓಗೆ ಮನವಿ ಪತ್ರ ನೀಡಲಾಗಿದ್ದರು ಪಿಡಿಓ ಯಾವುದೇ ಕ್ರಮಕ್ಕೆ ಮುಂದಾಗುತ್ತಿಲ್ಲಾ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ.
ಈ ವಿದ್ಯುತ್ ತಂತಿಗಳ ಸಮೀಪವೇ ಬೃಹದಾಕಾರದ ಮರವಿದ್ದು ಮರದ ಕೊಂಬೆಗಳು ಆಗಾಗ ತಂತಿಗಳಿಗೆ ಸ್ಪರ್ಶವಾಗುತ್ತಾ ಕಿಡಿಗಳು ಬರಲಾರಂಭಿಸಿದೆ ಮತ್ತು ತಂತಿಗಳ ಕೆಳಭಾಗದಲ್ಲಿ ಗುಡಿಸಲು ಸಹ ಇರುವುದರಿಂದ ವಿದ್ಯುತ್ ಅವಗಡವಾಗುವ ಸಂಭವವಿದೆ ಅದಷ್ಟು ಬೇಗಾ ಗ್ರಾಮದಲ್ಲಿ ಹಾದು ಹೋಗಿರುವ ತಂತಿಗಳನ್ನು ಅದಷ್ಟೂ ಬೇಗಾ ಬೇರೆ ಕಡೆ ವರ್ಗಾಯಿಸಿ ಸಾರ್ವಜನಿಕರಿಗೆ ಅನೂಕೂಲ ಮಾಡಿಕೊಡುವಂತೆ ಒತ್ತಾಯಿಸಿದ್ದಾರೆ.
ಗ್ರಾಮಸ್ಥರಾದ ನಾಗರಾಜು. ರಮಣಪ್ಪ. ಸುಶೀಲಮ್ಮ. ಗಂಗೋತ್ರಿ. ಉಮಾದೇವಿ. ರಮಾಂಜಿನಿ. ಶಿವನಂದಾ. ನರಸಿಂಹಯ್ಯ. ರವಿಕುಮಾರ್, ಸರೋಜಮ್ಮ, ವಿಜಯಗೀತಾ, ಶಿವಕುಮಾರ್, ಕಾಮರಾಜು, ಗಂಗಾಧರ, ರಮೇಶ, ಮತ್ತಿತರರು ಇದ್ದರು.