ಖಾಸಗಿ ಶಾಲೆಗಳಲ್ಲಿನ ಇಂಗ್ಲೀಷ್ ನಾಮಫಲಕ ತೆರವಿಗೆ ಆಗ್ರಹ

ಮಧುಗಿರಿ

    ಖಾಸಗಿ ಶಾಲೆಗಳಲ್ಲಿ ಇಂಗ್ಲೀಷ್ ನಾಮ ಫಲಕ ತೆಗೆದು ಕನ್ನಡ ನಾಮ ಫಲಕ ಅಳವಡಿಸಬೇಕೆಂದು ಒತ್ತಾಯಿಸಿ ಕನ್ನಡ ಜಾಗೃತಿ ವೇದಿಕೆ ಪದಾಧಿಕಾರಿಗಳು ಮಧುಗಿರಿ ಶೈಕ್ಷಣಿಕ ಜಿಲ್ಲೆಯ ಉಪನಿರ್ದೇಶಕ ರೇವಣಸಿದ್ದಯ್ಯ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭದಲ್ಲಿ ಮಾಧ್ಯಮದೊಂದಿಗೆ ಕನ್ನಡ ಜಾಗೃತಿ ವೇದಿಕೆ ತಾಲ್ಲೂಕು ಅಧ್ಯಕ್ಷ ರಾಘವೇಂದ್ರ ಮಾತನಾಡಿ, ಖಾಸಗಿ ಶಾಲೆಗಳ ಹೆಸರನ್ನು ನಾಮಫಲಕಗಳ ಮೇಲೆ ಇಂಗ್ಲಿಷ್‍ನಲ್ಲಿ ಅಳವಡಿಸಿದ್ದಾರೆ ಖಾಸಗಿ ಶಾಲೆಯ ಮಾಲೀಕರು ಬುದ್ಧಿವಂತರು, ಪ್ರಜ್ಞಾವಂತರು, ಇವರೇ ಕನ್ನಡ ನಾಮಫಲಕ ಅಳವಡಿಸದೆ ಇರುವುದು ಸೋಜಿಗವಾಗಿದೆ. ಖಾಸಗಿ ಶಾಲೆಯವರು ಶೀಘ್ರದಲ್ಲೇ ಕನ್ನಡ ನಾಮಫಲಕ ಬಳಸದಿದ್ದರೆ ಕನ್ನಡ ಜಾಗೃತಿ ವೇದಿಕೆ ವತಿಯಿಂದ ಕಪ್ಪು ಬಣ್ಣವನ್ನು ಹಚ್ಚುವುದಾಗಿ ತಿಳಿಸಿದರು.

    ಡಿಡಿಪಿಐ ರೇವಣಸಿದ್ದಪ್ಪ ಮಾತನಾಡಿ, ಇಂಗ್ಲಿಷ್ ನಾಮಫಲಕ ಹಾಕಿದ ಶಾಲೆಗಳಿಗೆ ಕನ್ನಡ ನಾಮ ಫಲಕ ಹಾಕಿ ಎಂದು ನೋಟಿಸ್ ನೀಡುವುದಾಗಿ ತಿಳಿಸಿದರು. ಈ ಸಂದರ್ಭದಲ್ಲಿ ಕನ್ನಡ ಜಾಗೃತಿ ವೇದಿಕೆ ಸಂಘಟನೆ ಕಾರ್ಯದರ್ಶಿ ಶಿವಲಿಂಗಪ್ಪ, ನಗರ ಕಾರ್ಯದರ್ಶಿ ರೋಹಿತ್ ಕೊಡಿಗೇನಹಳ್ಳಿ, ಹೋಬಳಿ ಅಧ್ಯಕ್ಷ ರಾಜು, ನರಸಿಂಹಮೂರ್ತಿ, ನಾಗರಾಜ್, ಚೌಡಪ್ಪ ಮುಂತಾದವರಿದ್ದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link
Powered by Social Snap