ತಂತಿ ಬೇಲಿ ತೆರವಿಗೆ ಮನವಿ..!

ಚಿತ್ರದುರ್ಗ:

     ಭರಮಸಾಗರ ಸಮೀಪವಿರುವ ಕೊಳಾಳ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹೆಗ್ಗೆರೆ ಗ್ರಾಮದಲ್ಲಿರುವ ಜನತಾ ಕಾಲೋನಿಯಲ್ಲಿ ಕೆಲವರು ರಸ್ತೆಗೆ ತಂತಿ ಬೇಲಿ ನಿರ್ಮಿಸಿ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದನ್ನು ತೆರವುಗೊಳಿಸುವಂತೆ ಒತ್ತಾಯಿಸಿ ಜನತಾಕಾಲೋನಿ ನಿವಾಸಿಗಳು ಮಂಗಳವಾರ ತಹಶೀಲ್ದಾರ್‍ಗೆ ಮನವಿ ಸಲ್ಲಿಸಿದರು.

     1972 ರಲ್ಲಿ ಒಂದು ಎಕರೆ ಇಪ್ಪತ್ತು ಗುಂಟೆ ಜಮೀನನ್ನು ಸರ್ಕಾರ ಸ್ವಾಧೀನಪಡಿಸಿಕೊಂಡು ನಿವೇಶನಗಳಾಗಿ ವಿಂಗಡಿಸಿ 42 ಹಕ್ಕುಪತ್ರಗಳನ್ನು ನೀಡಲಾಗಿದೆ. ಸದರಿ ಜನತಾಕಾಲೋನಿಯಲ್ಲಿ ಪರಿಶಿಷ್ಟ ಜಾತಿ/ಪಂಗಡದವರೆ ಹೆಚ್ಚಾಗಿ ವಾಸಿಸುತ್ತಿದ್ದು, ಹಳವುದರ ಭರಮಸಾಗರ ರಸ್ತೆಯ ಪಕ್ಕದಲ್ಲಿದೆ. ಕೆಲವು ಕುಟುಂಬದವರು ರಸ್ತೆಗೆ ತಂತಿಬೇಲಿ ಹಾಕಿ ಜಾಗ ನಮಗೆ ಸೇರಿದ್ದೆಂದು ತಕರಾರು ತೆಗೆಯುತ್ತಿದ್ದಾರೆ.

     ಇದರಿಂದ ಜನತಾಕಾಲೋನಿಯ ನಿವಾಸಿಗಳಿಗೆ ಓಡಾಡಲು ರಸ್ತೆಯೇ ಇಲ್ಲದಂತಾಗಿದೆ. ಈ ಸಂಬಂಧ ಜನಸ್ಪಂದನ ಸಭೆಯಲ್ಲಿ ಜಿಲ್ಲಾಧಿಕಾರಿಗಳಿಗೂ ದೂರು ನೀಡಲಾಗಿದೆ. ಭೂಮಾಪನ ಇಲಾಖೆ ಮೂಲಕ ಸರ್ವೆ ನಡೆಸಿ ಜನತಾಕಾಲೋನಿಯ ನಕಾಸೆಯಲ್ಲಿ ದಾರಿ ಇದೆಯೋ ಇಲ್ಲವೊ ಎಂಬುದನ್ನು ಮೊದಲು ತಿಳಿದುಕೊಂಡು ನಮಗೆ ಸಂಚರಿಸಲು ಅನುವು ಮಾಡಿಕೊಡಿ ಎಂದು ಜನತಾ ಕಾಲೋನಿ ವಾಸಿಗಳು ತಹಶೀಲ್ದಾರ್‍ರವರನ್ನು ಕೋರಿದರು.ಹೆಗ್ಗೆರೆ ನಾರಪ್ಪ, ವಸಂತಕುಮಾರ್, ಟಿ.ನರಸಿಂಹಮೂರ್ತಿ ಹಾಗೂ ತಾಲೂಕು ಪಂಚಾಯಿತ ಕಾರ್ಯನಿರ್ವಹಣಾಧಿಕಾರಿ ಕೃಷ್ಣನಾಯ್ಕ ಈ ಸಂದರ್ಭದಲ್ಲಿ ಹಾಜರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link