ಯುವಜನ ಆಯೋಗ ರಚನೆಗೆ ಒತ್ತಾಯ…!!

ಮಧುಗಿರಿ:

         ಯುವ ಭಾರತದ ದೇಶದಲ್ಲಿನ ಯುವ ಜನರಿಗೆ ನಿರ್ದಿಷ್ಟ ಹಕ್ಕುಗಳಿಲ್ಲವಾಗಿದ್ದು ಮುಖ್ಯ ಮಂತ್ರಿಗಳು ಯುವ ಜನರಿಗಾಗಿ ಯುವಜನ ಆಯೋಗವನ್ನು ರಚಿಸುವಂತೆ ಒತ್ತಾಯಿಸಿ ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ವತಿಯಿಂದ ತಹಶೀಲ್ದಾರ್ ನಂದೀಶ್ ರವರಿಗೆ ಮನವಿ ಪತ್ರ ಸಲ್ಲಿಸಲಾಯಿತು.

        ತಾಲ್ಲೂಕಿನ ಪುರವರ ಹೋಬಳಿಯ ಹಂದ್ರಾಳು ಗ್ರಾಮದ ವೇದಿಕೆಯ ಜಿಲ್ಲಾ ಕಾರ್ಯದರ್ಶಿ ಹೆಚ್ ಆರ್ ನಾಗಭೂಷಣ್ ಮಾತನಾಡಿ ನಮ್ಮ ಭಾರತ ದೇಶವು ಯುವ ಜನರಿಂದ ಕೂಡಿದ ರಾಷ್ಟ್ರವಾಗಿದ್ದು ಯುವ ಜನತೆಗೆ ಉದ್ಯೋಗ ಆರೋಗ್ಯ ಶಿಕ್ಷಣ, ಆಪ್ತ ಸಮಾಲೋಚನೆ ವೃತ್ತಿ ಬದುಕನ್ನು ಕಟ್ಟಿಕೊಳ್ಳಲು ಆಗದೆ ತಮ್ಮ ಹಕ್ಕುಗಳ ಬಗ್ಗೆ ಅರಿವಿಲ್ಲದೆ ಗೊಂದಲ, ಖಿನ್ನತೆ ಆತ್ಮಹತ್ಯೆಯಂತ ದಾರಿ ಹಿಡಿದಿರುವುದು ಶೊಚನೀಯ ಸಂಗತಿಯಾಗಿದೆ.

       ಸಂವಿಧಾನದಲ್ಲಿ ಯುವಜನರಿಗೆ ಯುವ ಜನ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವುದು ನಮ್ಮ ಮತ್ತು ಸರ್ಕಾರದ ಆದ್ಯ ಕರ್ತವ್ಯ ವಾಗಿದೆ ಆದ್ದರಿಂದ ಯುವಜನರಿಗಾಗಿ ಸರರ್ಕಾರವು ಯುವಜನ ಆಯೋಗ ರಚಿಸಿ ಯುವಪೀಳಿಗೆಗೆ ಸಹಕಾರ ನೀಡುವಂತೆ ಒತ್ತಾಯಿಸಿದ್ದಾರೆ.
ಈ ಸಂಧರ್ಭದಲ್ಲಿ ವೇದಿಕೆಯ ಜಿಲ್ಲಾ ಉಪಾಧ್ಯಕ್ಷ ಬಿ.ಎಸ್. ಹನುಮಂತರಾಯಪ್ಪ, ಪದಾಧಿಕಾರಿಗಳಾದ ಗಣೇಶಮೂರ್ತಿ, ತಿಮ್ಯಯ್ಯ ಇದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap