ಜನಾರ್ಧನ್ ಸ್ವಾಮಿಗೆ ಬಿಜೆಪಿ ಟಿಕೆಟ್ ಕೊಡಿ

ಚಿತ್ರದುರ್ಗ;
         ಮಾಜಿ ಸಂಸದ ಜನಾರ್ಧನ ಸ್ವಾಮಿಯವರಿಗೆ ಚಿತ್ರದುರ್ಗ ಲೋಕ ಸಭಾ ಕ್ಷೇತ್ರಕ್ಕೆ ಭಾರತೀಯ ಜನತಾ ಪಕ್ಷದ (ಬಿಜೆಪಿ) ಟಿಕೆಟ್ ನೀಡಬೇಕೆಂದು ಲಂಬಾಣಿ ಸಮಾಜದ ಮುಖಂಡರು ಬಿಜೆಪಿ ರಾಜ್ಯ ಹಾಗೂ ರಾಷ್ಟ್ರ ನಾಯಕರಿಗೆ  ಹೈಕಮಾಂಡ್‍ಗೆ ಒತ್ತಾಯಿಸಿದ್ದಾರೆ.
         ಹೊಳಲ್ಕೆರೆಯ ಪತ್ರಿಕಾ ಭವನದಲ್ಲಿ ಚಿತ್ರದುರ್ಗ ಜಿಲ್ಲಾ ಬಂಜಾರ ಲಂಬಾಣಿ ಸಮಾಜದ ವತಿಯಿಂದ ಕರೆಯಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖಂಡರು ಬಣಜಾರ (ಲಂಬಾಣಿ) ಸಮಾಜ ಸೇರಿದಂತೆ ಪರಿಶೀಷ್ಟ ಜಾತಿ, ವರ್ಗ, ಹಿಂದುಳಿದವರು, ಅಲ್ಪಸಂಖ್ಯಾತ ಸಮುದಾಯಗಳಿಗೆ ಆಧ್ಯತೆ ನೀಡಿ ಕೆಲಸ ಮಾಡಿದಂತಹ ಪ್ರಶಂಸೆಗೆ ಪಾತ್ರರಾದವರು ಜನಾರ್ಧನ ಸ್ವಾಮಿಯವರು ಎಂದು  ಲಂಬಾಣಿ ಸಮಾಜದ ಮುಖಂಡರು ಹೇಳಿದರು.
 
       ಚಿತ್ರದುರ್ಗ ಜಿಲ್ಲೆಗೆ  ಬಹು ದಶಕಗಳ ಕನಸಾಗಿದ್ದ ಭದ್ರಾ ಮೇಲ್ದಂಡೆ ಯೋಜನೆ ತುಮಕೂರು, ಚಿತ್ರದುರ್ಗ ನೇರ ರೈಲು ಮಾರ್ಗ  ಮತ್ತು ಚಳ್ಳಕೆರೆ ಸಮೀಪದ ಕುದಾಪುರದ ಬಳಿ ಅನುಷ್ಠಾನಕ್ಕೆ ಬರುತ್ತಿರುವ ಭಾರತೀಯ ವಿಜ್ಞಾನ ಮಂದಿರ, ಡಿ.ಆರ್.ಡಿ.ಓ, ಸೋಲಾರ್ ಉತ್ಪಾದನಾ ಘಟಕ ಸೇರಿದಂತೆ ಹಲವು ಜನಪರ ಯೋಜನೆಗಳನ್ನು ಅನುಷ್ಠಾನಕ್ಕೆ ತಂದ ಕೀರ್ತಿ ಮಾಜಿ ಸಂಸದರಾದ ಜನಾರ್ಧನಸ್ವಾಮಿಯವರಿಗೆ ಸಲ್ಲುತ್ತದೆ.
   
        ಜನಾರ್ಧನಸ್ವಾಮಿಯವರು ಲೋಕಸಭಾ ಸದಸ್ಯರಾಗಿದ್ದ ಸಂದರ್ಭದಲ್ಲಿ ನೀರಾವರಿ, ರೈಲು, ವೈಜ್ಞಾನಿಕ ಸಂಶೋಧನಾ ಕೇಂದ್ರಗಳು ಚಳ್ಳಕೆರೆ, ಮೊಳಕಾಲ್ಮೂರು ಪಾವಗಡ ತಾಲ್ಲುಕುಗಳಿಗೆ ತುಂಗ ಭದ್ರಾ ಹಿರಿಯೂರಿನಿಂದ ಕುಡಿಯುವ ನೀರಿನ ಯೋಜನೆ ಸೇರಿದಂತೆ ಹಲವು ಕಾರ್ಯಕ್ರಮಗಳಿಗೆ ಚಾಲನಾ ಸ್ವರೂಪ ನೀಡಿದ್ದರು. 
   
          ಅದೇ ಸಂದರ್ಭದಲ್ಲಿ ಭಾರತ್ ಸರ್ಕಾರದ  ಗ್ರಾಮೀಣ ನೀರು ಸರಬರಾಜು ಸಚಿವರಾಗಿದ್ದ ಅಘಾತ ಸಂಗ್ಮ ಅವರನ್ನು ಕರೆತಂದು ಶುದ್ದ ಕುಡಿಯುವ ನೀರಿನ ಯೋಜನೆಗೆ ಅಂದೇ ಚಾಲನೆ ನೀಡಿದರು.  ಸೌಜನ್ಯ ವಿನಯವಂತಿಕೆ ಆತ್ಮೀಯವಾಗಿ ಎಲ್ಲರಲ್ಲೂ ಪ್ರೀತಿಯಿಂದ ಕಾಣುವ ಗುಣ ಹೊಂದಿರುವ ಜನಾರ್ಧನ್ ಸ್ವಾಮಿಯವರಿಗೆ ಬಿಜೆಪಿಯ ಹೈಕಮಾಂಡ್ ಚಿತ್ರದುರ್ಗ ಲೋಕ ಸಭಾ ಚುನಾವಣೆಗೆ ಟಿಕೆಟ್ ನೀಡಿದರೆ ಅವರ ಗೆಲುವು ಖಚಿತ ಎಂದು ಬಂಜಾರ ಸಮಾಜದ ಮುಖಂಡರು ಅಭಿಪ್ರಾಯ ಪಟ್ಟರು.
   
        ಚಿತ್ರದುರ್ಗ ಮೀಸಲು ಲೋಕಸಭಾ ಕ್ಷೇತ್ರಕ್ಕೆ ಸ್ಥಳೀಯರು ಮತ್ತು ಪರಿಶಿಷ್ಟ ಜಾತಿಯ ಭೋವಿ ಜನಾಂಗದವರಾದ ಅವರು ಎಲ್ಲಾ ಜಾತಿ, ಜನಾಂಗದ ಬಗ್ಗೆ ಅಪಾರವಾದ ಗೌರವ ಹೊಂದಿರುವವರು.  ಇವರಿಗೆ ಬಿಜೆಪಿಗೆ ಟಿಕೆಟ್ ನೀಡಿದರೆ ಲಂಬಾಣಿ ಸಮಾಜ ಇವರ ಪರವಾಗಿ ನಿಲ್ಲಲಿದೆ ಎಂದು ಬಣಜಾರ ಮುಖಂಡರು ಹೇಳಿದರು.
 
       ಸುದ್ದಿಗೋಷ್ಠಿಯಲ್ಲಿ ಚಿತ್ರದುರ್ಗ ಜಿಲ್ಲಾ ಬಣಜಾರ ಸಮಾಜದ ಮುಖಂಡರಾದ ಯೋಗಮೂರ್ತಿನಾಯ್ಕ್, ವಿಜಯಸಿಂಹಖಾಟ್ರೋತ್, ಜಗದೀಶ್‍ನಾಯ್ಕ್, ಪರಮೇಶ್ವರ್‍ನಾಯ್ಕ್, ಪಂಕಜನಾಯ್ಕ್, ನವೀನ್ ನಾಯ್ಕ್, ಭರತ್‍ನಾಯ್ಕ್, ಮುಂತಾದವರು ಬಿಜೆಪಿಯ ರಾಜ್ಯ ಮತ್ತು ರಾಷ್ಟ್ರ ನಾಯಕರಿಗೆ ಜನಾರ್ಧನಸ್ವಾಮಿಯವರಿಗೆ ಟಿಕೇಟ್ ನೀಡುವಂತೆ ಮನವಿ ಮಾಡಿದರು.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ  

Recent Articles

spot_img

Related Stories

Share via
Copy link