ಸ್ಥಳಿಯರಿಗೆ ಟಿಕೆಟ್ ನೀಡಲು ಆಗ್ರಹ

ಪಾವಗಡ

       ಮತೊಮ್ಮೆ ನರೇಂದ್ರ ಮೋದಿಯನ್ನು ಪ್ರಧಾನಿ ಮಾಡಬೇಕಾದರೆ ಕ್ಷೇತ್ರದ ಸ್ಥಳಿಯ ಅಭ್ಯರ್ಥಿಗಳಿಗೆ ಟಿಕಿಟ್ ನೀಡದರೆ ಮಾತ್ರ ಅಭ್ಯರ್ಥಿಗಳನ್ನು ಗೆಲ್ಲುಸಲು ಸಾಧ್ಯ ಎಂದು ಬಿ.ಜೆ.ಪಿ ತಾಲೂಕು ಹಿರಿಯ ಮುಖಂಡರಾದ ಅಚಮ್ಮನಹಳ್ಳಿ ವೆಂಕಟರಮಣ ತಿಳಿಸಿದರು.

       ಅವರು ಪಟ್ಟಣದ ಗಾಯಿತ್ರಿ ಮಹಿಳಾ ಸ್ವ ಸಹಾಯ ಸಂಘದ ಕಛೇರಿಯಲ್ಲಿ ಪತ್ರಿಕಾ ಗೋಷ್ಠಿ ಉದ್ದೇಶಿಸಿ ಮಾತನಾಡಿ ಚಿತ್ರದುರ್ಗ ಕ್ಷೇತ್ರ (ಎಸ್.ಸಿ) ಕ್ಷೇತ್ರವಾಗಿದ್ದು,ಹಿಂದೆ ಮಾಜಿ ಸಂಸದರಾದ ಜನಾರ್ಧನಸ್ವಾಮಿಗೆ ಈ ಕ್ಷೇತ್ರದ ಟಿಕಿಟ್ ನೀಡಿದರೆ ಸುಲಭವಾಗಿ ಗೆಲ್ಲು ಸಾಧ್ಯವಾಗಿದ್ದು,ಬಿ.ಜೆ.ಪಿ ಪಕ್ಷದ ಕೇಂದ್ರ ಮತ್ತು ರಾಜ್ಯ ಅಧ್ಯಕ್ಷರು ಹಾಗೂ ಭಾರತೀಯ ಜನತಾ ಪಾರ್ಟಿ ವರಿಷ್ಠರು ಟಿಕಿಟ್ ಹಂಚಿಕೆಯಲ್ಲಿ ದೀರ್ಘವಾಗಿ ಚರ್ಚಿಸಿ ಟಿಕಿಟ್ ನೀಡಬೇಕು,ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಪ್ರಬಲ ಅಭ್ಯರ್ಥಿ ಹಾಗೂ ಮಾಜಿ ಸಂಸದರಾದ ಜನಾರ್ಧನಸ್ವಾಮಿ ಚಿತ್ರದುರ್ಗ ಕ್ಷೇತ್ರದ 8 ತಾಲ್ಲೂಕುಗಳ ಅಭಿವೃದ್ಧಿಗೆ ಶ್ರಮವಹಿಸಿದ್ದು,ಕ್ಷೇತ್ರದ ತಾಲ್ಲೂಕುಗಳ ಪರಿಸ್ಥಿತಿ ಅರಿತ್ತಿದ್ದು,ಪಾವಗಡ ತಾಲ್ಲೂಕಿಗೆ ಈ ಹಿಂದೆ ಸಂಸದರಾದಾಗ ಕುಡಿಯುವ ನೀರುಗಾಗಿ ವಿವಿಧ ಹಂತದಲ್ಲಿ ಹೋರಾಟದಿಂದ ಯೋಜನೆ ಮುಂಜೂರಾ ಗಿದ್ದು,ಕ್ಷೇತ್ರದಲ್ಲಿ ಹಲುವಾರು ಅಭಿವೃದ್ಧಿ ಕೆಲಸಗಳು ಕೈಗೊಂಡಿರುವ ಯೋಜನೆಗಳು ಶಾಶ್ವತವಾಗಿದ್ದು,ಮತ್ತೆ ಇವರಿಗೆ ಟಿಕಿಟ್ ನೀಡಿದರೆ ಗೆಲ್ಲುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದರು.

         ಪ್ರಧಾನಿ ನರೇಂದ್ರ ಮೋದಿಜೀರವರು ಕೇಂದ್ರದಲ್ಲಿ ಜನಪರ ಯೋಜನೆಗಳನ್ನು ಕೈಗೊಂಡುದ್ದು,ರಾಜ್ಯ ಮತ್ತು ಕೇಂದ್ರದ ಮತದಾರರು ಮತ ನೀಡುವ ಮುಖಾಂತರ ಪ್ರೋತ್ಸಹ ನೀಡುತ್ತಾರೆ ಎಂದರು.

         ಬಿ.ಜೆ.ಪಿ ನಾಯಕಿ ಗಾಯಿತ್ರಿ ರವರು ಮಾತನಾಡಿ ಚಿತ್ರದುರ್ಗ ಲೋಕಸಭಾ ಕ್ಷೇತ್ರದ ಮಾಜಿ ಸಂಸದ ಜನಾರ್ದನಸ್ವಾಮಿ ಕ್ಷೇತ್ರದ 8 ತಾಲ್ಲೂಕುಗಳ ಜ್ವಲಂತ ಸಮಸ್ಯೆಗಳಿಗೆ ಸ್ವಂದಿಸಿದ ವ್ಯಕ್ತಿ,ಬೋವಿ ಜನಾಂಗದ ಪ್ರಬಲ ವ್ಯಕ್ತ,ಕ್ಷೇತ್ರದ ಸ್ಥಳೀಯ ಅಭ್ಯರ್ಥಿಯಾಗಿದ್ದು,ಸ್ಥಳೀಯ ಕಾರ್ಯಾಕರ್ತರ ಮತ್ತು ಮತದಾರರ ಕಷ್ಟ ಸುಖಗಳಿಗೆ ಭಾಗಿಯಾಗಿರುವ ವ್ಯಕ್ತ,ಇಂತಹ ಅಭ್ಯರ್ಥಿಗೆ ಟಿಕಿಟ್ ನೀಡಿದರೆ ,ಹೆಚ್ಚು ಬಹುಮತದಿಂದ ಗೆಲ್ಲು ಅನುಕೂಲವಾಗುತ್ತದೆ,ಬೇರೆ ಕ್ಷೇತ್ರದ ಅಭ್ಯರ್ಥಿಗಳಿಗೆ ಟಿಕಿಟ್ ನೀಡಿದ ಅಭ್ಯರ್ಥಿ ಗೆದ್ದನಂತರ ಕ್ಷೇತ್ರದ ಸಮಸ್ಯೆಗಳ ಬಗ್ಗೆ ಎರಡು ವರ್ಷಗಳ ಕಾಲದಷ್ಟು ಕಾಲಾವಕಾಶ ಬೇಕಾಗುತ್ತದೆ,ಸ್ಥಳೀಯ ಅಭ್ಯರ್ಥಿ ಹಾಗೂ ಮಾಜಿ ಸಂಸದರಾದ ಜನಾರ್ಧನಸ್ವಾಮಿಗೆ ಟಿಕಿಟ್ ನೀಡಿದೆರೆ ಕ್ಷೇತ್ರವನ್ನು ಅಭಿವೃದ್ಧಿ ಪಡೆಸುವುದು ಸುಲುಬವಾಗಬಹುದೆಂದು ಹೇಳಿದ್ದಾರೆ.

           ಭಾರತೀಯ ಜನತಾ ಪಾರ್ಟಿ ತಾಲ್ಲೂಕು ರೈತ ಮೋರ್ಚಉಪಾಧ್ಯಕ್ಷ ಗೋವಿಂದರಾಜು ಮಾತನಾಡಿ ಚಿತ್ರದುರ್ಗ ಲೋಕಸಭಾ ಕ್ಷೇತ್ರಕ್ಕೆ ಹೊರಗಡೆಯಿಂದ ಬಂದ ಅಭ್ಯರ್ಥಿಗಳಿಗೆ ಟಿಕಿಟ್ ನೀಡದೇ ಸ್ಥಳೀಯ ಅಭ್ಯರ್ಥಿಯಾದ ಜನಾರ್ಧನಸ್ವಾಮಿಗೆ ಟಿಕಿಟ್ ನೀಡಿದರೆ,ಕ್ಷೇತ್ರದ ಕಾರ್ಯಾಕರ್ತರು ಒಗ್ಗಟ್ಟುನಿಂದ ಮತ ಹಾಕಿಸಲು ಪ್ರಯತ್ನ ಮಾಡುತ್ತಾರೆ ಎಂದು ತಿಳಿಸಿದರು.ಈ ಸಂದರ್ಭದಲ್ಲಿ ಮುಖಂಡರಾದ ಅಚ್ಚಮ್ಮನಹಳ್ಳಿ ಡಿ.ಅಂಜಯ್ಯ, ಲಕ್ಷ್ಮನಾರಾಯಣ,ಮಲ್ಲೇಶ್ವರಪ್ಪ,ಪಿ.ವೈ.ಹನುಮಂತರಾಯಪ್ಪ ಹಾಜರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link