ಪಾವಗಡ :
ರೈತರು ಬೆಳೆ ವಿಮೆ ಪಾವತಿಗೆ ಒಂದು ತಿಂಗಳು ಹೆಚ್ಚುವರಿ ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಪದಾಧಿಕಾರಿಗಳು ತಹಶೀಲ್ದರ್ ಗೆ ಮನವಿ ಸಲ್ಲಿಸಿದರು.
ಇದೇ ವೇಳೆ ಮನವಿ ಪತ್ರ ಸಲ್ಲಿಸಿ ತಾಲೂಕು ಘಟಕದ ಅದ್ಯಕ್ಷರಾದ ಪೂಜಾರಪ್ಪ ಮಾತನಾಡಿ ಕಳೆದಾ 20 ವರ್ಷಗಳಿಂದ ತಾಲ್ಲೂಕಿಗೆ ಬರ ಅಪ್ಪಳಿಸಿದ್ದು,ಬೆಳೆ ವಿಮೆಯನ್ನು ಪಾವತಿಸಲು ರೈತರು ಪರದಾಡುವಂತಾಗಿದ್ದು , ರೈತರು ಹಣ ವದಿಗಿಸಲು ಸಾಧ್ಯವಾಗದೆ ಪರಿಸ್ಥಿತಿಯಲ್ಲಿ ರೈತರು ಇದ್ದಾರೆ.ರಾಜ್ಯ ಸರ್ಕಾರ ಇನ್ನು ಒಂದು ತಿಂಗಳ ಕಾಲಾವಕಾಶ ನೀಡಬೇಕೆಂದು ಒತ್ತಾಯಿಸಿದರು.
ರಾಜ್ಯದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ ಆಧಿಕಾರಕ್ಕೆ ಬಂದಿದ್ದು,ರೈತರು ಮಾಡಿರುವ ಸಾಲವನ್ನು ಸಂಪೂರ್ಣ ಮನ್ನಾ ಮಾಡಬೇಕು , ಸಾಲಮನ್ನಾವಾದ ಹತ್ತು ದಿನಗಳ ಒಳಗಾಗಿ ಹೊಸ ಸಾಲವನ್ನು ನೀಡಿ ರೈತರ ನೆರವಿಗೆ ದಾವಿಸುವ ಪ್ರಯತ್ನ ಸರ್ಕಾರ ಮಾಡಬೇಕೆಂದರು.
ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಗ್ರೇಡ್ 2 ತಹಶೀಲ್ದರ್ ಸತ್ಯನಾರಾಯಣ ಮಾತನಾಡಿ ಜಿಲ್ಲಾಧಿಕಾರಿಗಳ ಮೂಖಾಂತರ ಸರ್ಕಾರದ ಗಮನಕ್ಕೆ ತರಲಾಗುವುದೆಂದರು.ಈ ಸಂದರ್ಭದಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಅಶ್ವತ್ತಪ್ಪ ,ಈರಪ್ಪ ,ಹನುಮಂತರಾಯಪ್ಪ ,ಗಂಗಾದರ ,ನರಸಪ್ಪ ,ಸುಬ್ಬಯ್ಯ ,ರಾಮಣ್ಣ ,ಪಕೃಬಿ ,ಓಬಳಪ್ಪ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ