ಹುಳಿಯಾರು
ಹುಳಿಯಾರು ಹೋಬಳಿಯ ಯಳನಾಡು ಗ್ರಾಪಂ ವ್ಯಾಪ್ತಿಯ ಸಿಂಗಾಪುರಕ್ಕೆ ನೀರು ಸರಬರಾಜು ಮಾಡುವ ಕೊಳವೆಬಾವಿಗೆ ಇನ್ನೊಷ್ಟು ಲೆಂತ್ ಪೈಪ್ ಬಿಡುವಂತೆ ಗ್ರಾಮಸ್ಥರು ಮನವಿ ಮಾಡಿದ್ದಾರೆ.
ಸರಿಸುಮಾರು 300 ಮನೆಗಳಿರುವ ರೈತಾಪಿವರ್ಗದವರೆ ಹೆಚ್ಚಾಗಿರುವ ಸಿಂಗಾಪುರ ಗ್ರಾಮಕ್ಕೆ ಊರ ಒಳಗಿನ ಒಂದು ಕೊಳವೆಬಾವಿ ಹಾಗೂ ಹೊರಗಿನ ಒಂದು ಕೊಳವೆಬಾವಿ ಇದೂವರೆವಿಗೂ ನೀರು ಪೂರೈಸುತ್ತಿತ್ತು. ಆದರೆ ನಿರಂತರ ಬರಗಾಲದಿಂದ ಊರ ಒಳಗಿನ ಕೊಳವೆಬಾವಿಯಲ್ಲಿ ಅಂತರ್ಜಲ ಬರಿದಾಗಿ ನೀರು ಕಡಿಮೆಯಾಗಿದೆ. ಅಲ್ಲದೆ ಊರ ಹೊರಗಿನ ಕೊಳವೆಬಾವಿಯಲ್ಲಿ ಸಮರ್ಪಕವಾಗಿ ನೀರು ಇದ್ದರೂ ಕೇವಲ 20 ಲೆಂತ್ ಮಾತ್ರ ಪೈಪ್ ಬಿಟ್ಟಿರುವುದರಿಂದ ಆಳದಲ್ಲಿನ ನೀರು ಮೋಟರ್‍ಗೆ ಸಿಗದಾಗಿದೆ.
ಪರಿಣಾಮ ಹನಿ ನೀರಿಗೂ ಜನ ಪರದಾಡುವಂತ್ತಾಗಿದೆ. ಊರ ಒಳಗಿನ ಬೋರ್‍ನಿಂದ ನಲ್ಲಿ ನೀರಿಗೂ ಕಡೆಯಾಗಿ ಬರುವ ನೀರು ಹಿಡಿಯಲು ಜನ ಕಿತ್ತಾಡುವಂತಾಗಿದೆ. ಸಿಸ್ಟನ್‍ಗಳಿದ್ದರೂ ನೀರು ತುಂಬಿಸಲು ಸಾಧ್ಯವಾಗದಂತ್ತಾಗಿದೆ.
ತಾಪಂ ಇಓ ಅವರು ಗ್ರಾಮಕ್ಕೆ ಭೇಟಿ ನೀಡಿ ಸಮಸ್ಯೆ ಬಗೆಹರಿಸುವಂತೆ ಗ್ರಾಪಂ ಪಿಡಿಓ ಅವರಿಗೆ ಸೂಚಿಸಿದ್ದರೂ ನಿರ್ಲಕ್ಷ್ಯ ಧೋರಣೆ ತಾಳಿದ್ದಾರೆ. ಹಾಗಾಗಿ ನೀರಿನ ಸಮಸ್ಯೆ ಹೆಚ್ಚಾಗಿದ್ದು ಚಿಕ್ಕನಾಯಕನಹಳ್ಳಿ ತಾಲೂಕು ತಹಶೀಲ್ದಾರ್ ಅವರು ಬರಪರಿಹಾರ ಯೋಜನೆಯಡಿ ಕೊಳವೆಬಾವಿಗೆ ಇನ್ನೊಷ್ಟು ಲೆಂತ್ ಪೈಪ್ ಬಿಟ್ಟು ಸಮಸ್ಯೆ ಪರಿಹರಿಸುವಂತೆ ಮನವಿ ಮಾಡಿದ್ದಾರೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
