ತಿಪಟೂರು :
ತಾಲ್ಲೂಕಿನ ಜೆ.ಡಿ.ಎಸ್ ಮುಖಂಡ ಲೋಕೇಶ್ವರ್‍ರನ್ನು ಜೆ.ಡಿ.ಎಸ್ ಜಿಲ್ಲಾಧ್ಯಕ್ಷರನ್ನಾಗಿ ಮಾಡಲುವಂತೆ ತಿಪಟೂರು ತಾಲ್ಲೂಕು ಜೆ.ಡಿ.ಎಸ್‍ನ ರಾಷ್ಟ್ರೀಯ ಅಧ್ಯಕ್ಷ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರಿಗೆ ಒತ್ತಾಯಿಸಿದ್ದಾರೆ.
ನಗರದ ಖಾಸಗಿ ಹೋಟೆಲ್‍ನಲ್ಲಿ ಆಯೋಜಿಸಿದ್ದ ಪತ್ರಿಕಾಘೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಜೆ.ಡಿ.ಎಸ್‍ನ ತಾಲ್ಲೂಕು ಅಧ್ಯಕ್ಷ ಸೊಪ್ಪುಗಣೇಶ್ ಈಬಾರಿಯ ಲೋಕಸಭಾ ಚುನಾವಣೆಯಲ್ಲಿ ನಾವು ನಿರೀಕ್ಷಿಸಿದ್ದ ಮತಗಳಿಗಿಂತ ಹೆಚ್ಚಿನ ಮತಗಳನ್ನು ಜೆ.ಡಿ.ಎಸ್‍ನ ಅಭ್ಯರ್ಥಿಯಾಗಿದ್ದ ಹೆಚ್.ಡಿ.ದೇವೇಗೌಡರಿಗೆ ದೊರಕಿಸಿಕೊಟ್ಟ ಕೀರ್ತಿ ನಮ್ಮ ಲೋಕೇಶ್ವರ್‍ರವರಿಗೆ ಸಲ್ಲುತ್ತದ್ದೆ ಹಾಗೂ ಲೋಕೇಶ್ವರ್ ಪಕ್ಷನಿಷ್ಠರು ಮತ್ತು ಸಂಘಟನಾ ಚತುರರಾಗಿರುವುದಲ್ಲದೇ ವೀರಶೈವಲಿಂಗಾಯತ ಮುಖಂಡರಾಗಿರುವುದು ಮುಂದಿನ ಸ್ಥಳೀಯ ಸಂಸ್ಥೆ ಚುನಾವಣೆಗಳಲ್ಲಿ ಹೆಚ್ಚಿನ ಮತಗಳನ್ನು ತರುವಲ್ಲಿ ಮತ್ತು ಜಿಲ್ಲೆಯಲ್ಲಿ ಜೆ.ಡಿ.ಎಸ್ ಅನ್ನು ಕಟ್ಟಿಬೆಳೆಸುವ ಸಲುವಾಗಿ ಲೋಕೇಶ್ವರ್‍ರವರನ್ನು ಜಿಲ್ಲಾಧ್ಯಕ್ಷರನ್ನಾಗಿಮಾಡುವಂತೆ ಒತ್ತಾಯಿಸಿದರು.
ನಮಗೆ ಅಧ್ಯಕ್ಷಸ್ಥಾನ ಕೊಡುವುವವರ ಜೊತೆ ಮೈತ್ರಿ :
ನಗರಸಭೆಯಲ್ಲಿ ಈ ಬಾರಿ ನಮ್ಮ ಜೆ.ಡಿ.ಎಸ್ ಪಕ್ಷದಿಂದ 5 ಸದಸ್ಯರು 11 ನೇ ವಾರ್ಡ್‍ನಿಂದ ಎಂ.ಬಿ.ಜಯರಾಮು, 24 ನೇ ವಾರ್ಡ್‍ನಲ್ಲಿ ಆಸಿಫಾ ಬಾನು, 27 ನೇ ವಾರ್ಡ್‍ನಲ್ಲಿ ಸೊಪ್ಪು ಗಣೇಶ್, 28 ನೇ ವಾರ್ಡ್‍ನಲ್ಲಿ ಭಾರತಿ ಮಂಜುನಾಥ್ ಮತ್ತು 31 ನೇ ವಾರ್ಡ್‍ನಲ್ಲಿ ಸರೋಜಮ್ಮ ಜಯಗಳಿಸಿದ್ದು ಜನರು ಯಾವುದೇ ಪಕ್ಷಕ್ಕೂ ಬಹುಮತ ನೀಡದೇ ಅತಂತ್ರಸ್ಥಿತಿಯಲ್ಲಿ ಇದ್ದು ನಾವು ಎರಡು ಬಾರಿಯು ಮೈತ್ರಿಮಾಡಿಕೊಂಡಾಗ ಒಂದು ಬಾರಿ ಬಿ.ಜೆ.ಪಿಗೆ ಮತ್ತೊಂದು ಬಾರಿ ಕಾಂಗ್ರೇಸ್‍ಗೆ ಅಧ್ಯಕ್ಷ ಸ್ಥಾನವನ್ನು ಬಿಟ್ಟುಕೊಟ್ಟಿದ್ದೆವು ಆದರೆ ಈ ಬಾರಿ ಹಾಗೆ ಆಗದಂತೆ ನಮ್ಮಗೆ ಅಧ್ಯಕ್ಷಸ್ಥಾನವನ್ನು ಬಿಟ್ಟುಕೊಡುವ ಪಕ್ಷದ ಜೊತೆ ಮೈತ್ರಿಮಾಡಿಕೊಳ್ಳುತ್ತೆವೆ ಅದು ಬಿ.ಜೆ.ಪಿ ಆದರೂ ಸರಿ ಕಾಂಗ್ರೇಸ್ ಆದರೂ ಸರಿ ಎಂದು ಸೊಪ್ಪುಗಣೇಶ್ ತಿಳಿಸಿದರು.ಪತ್ರಿಕಾಘೋಷ್ಠಿಯಲ್ಲಿ ತಾಲ್ಲೂಕು ಜೆ.ಡಿ.ಎಸ್‍ನ ನೂತನ ನಗರಸಭಾಸದ್ಯರುಗಳು, ಕಾರ್ಯಾಧ್ಯಕ್ಷ ಶಿವಸ್ವಾಮಿ, ನಿಜಗುಣಜ, ಸಾರ್ಥವಳ್ಳಿ ಶಿವಕುಮಾರ್, ಹರೀಶ್, ಮತ್ತಿತರರಿದ್ದರು.








