ಚಿತ್ರದುರ್ಗ:
ತೆಲಂಗಾಣದಲ್ಲಿ ಪಶುವೈದ್ಯೆ ಮೇಲೆ ಅತ್ಯಾಚಾರವೆಸಗಿ ಕ್ರೂರವಾಗಿ ಕೊಲೆಗೈದಿರುವ ಕಾಮುಕರನ್ನು ಶೂಟ್‍ಔಟ್ ಮಾಡಿರುವ ಬೆಳಗಾವಿ ಮೂಲದ ಐ.ಪಿ.ಎಸ್.ಅಧಿಕಾರಿ ಹಾಗೂ ಜೊತೆಯಲ್ಲಿದ್ದ ಸಿಬ್ಬಂದಿಗಳ ಮೇಲೆ ಸರ್ಕಾರ ಯಾವುದೇ ಕ್ರಮ ಕೈಗೊಳ್ಳಬಾರದು ಎಂದು ಅಖಂಡ ಕರ್ನಾಟಕ ರೈತ ಸಂಘದಿಂದ ಶನಿವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಪಶುವೈದ್ಯೆ ಪ್ರಿಯಾಂಕಾರೆಡ್ಡಿ ಮೇಲಿನ ಅತ್ಯಾಚಾರ ಇಡೀ ದೇಶವನ್ನೆ ಬೆಚ್ಚಿ ಬೀಳಿಸಿತ್ತು. ಕಾಮುಕರಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಎಲ್ಲಡೆ ವ್ಯಾಪಕ ಪ್ರತಿಭಟನೆ ಆಕ್ರೋಶಗಳು ವ್ಯಕ್ತಗೊಳ್ಳುತ್ತಿರುವುದರ ನಡುವೆಯೇ ಅತ್ಯಾಚಾರಿಗಳನ್ನು ಶೂಟ್‍ಔಟ್ ಮಾಡಿರುವ ಅಧಿಕಾರಿಗೆ ಪ್ರಶಂಸೆಯ ಮಹಾಪೂರವೇ ಹರಿದು ಬರುತ್ತಿದೆ. ಶೂಟ್‍ಔಟ್ ಬಗ್ಗೆ ಯಾರೂ ಪೋಲಿಸರ ವಿರುದ್ದ ಕೀಳಾಗಿ ಮಾತನಾಡಬಾರದು. ಭಾರತದ ಪೊಲೀಸರು ಯಾರ ಶಿಫಾರಸ್ಸು, ಪ್ರಭಾವ, ಒತ್ತಡಗಳಿಗೆ ಮಣಿಯದೆ ದಿಟ್ಟತನದಿಂದ ಕರ್ತವ್ಯ ನಿಭಾಯಿಸುತ್ತಾರೆಂಬುದನ್ನು ಬೆಳಗಾವಿಯ ಐ.ಪಿ.ಎಸ್.ಅಧಿಕಾರಿ ಸಾಬೀತುಪಡಿಸಿ ದೇಶದ ಜನರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಹಾಗಾಗಿ ಹೆಣ್ಣು ಮಕ್ಕಳು ಯಾರು ಭಯಪಡುವ ಅಗತ್ಯವಿಲ್ಲ. ಇಂತಹ ಧೈರ್ಯಶಾಲಿ ಅಧಿಕಾರಿಗಳ ಪರವಾಗಿ ಸರ್ಕಾರಗಳು ನಿಲ್ಲಬೇಕು ಎಂದು ಅಖಂಡ ಕರ್ನಾಟಕ ರೈತ ಸಂಘದ ಗೌರವಾಧ್ಯಕ್ಷ ಕುರುಬರಹಳ್ಳಿ ಜಿ.ಎಸ್.ಶಿವಣ್ಣ ಆಗ್ರಹಿಸಿದರು.
ಇನ್ನು ಮುಂದೆ ಇಂತಹ ಅತ್ಯಾಚಾರಗಳು ದೇಶದಲ್ಲಿ ಎಲ್ಲಿಯಾದರೂ ನಡೆದರೆ ಅಂತಹವರ ಒಂದು ಕಾಲು, ಒಂದು ಕೈಯನ್ನು/ಮರ್ಮಾಂಗವನ್ನು ಕತ್ತರಿಸಿ ಸಮಾಜದಲ್ಲಿ ಬಿಡಬೇಕು. ಅದಕ್ಕಾಗಿ ಕೇಂದ್ರ ಸರ್ಕಾರ ಅತ್ಯಾಚಾರಿಗಳ ವಿಚಾರದಲ್ಲಿ ಕಾನೂನು ತಿದ್ದುಪಡಿ ಮಾಡುಬೇಕೆಂದು ಒತ್ತಾಯಿಸಿದ ಕುರುಬರಹಳ್ಳಿ ಶಿವಣ್ಣ ಕಾಮುಕರನ್ನು ಎನ್‍ಕೌಂಟ್‍ರ್ ಮಾಡಿದ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ರಾಷ್ಟ್ರದ ಅತ್ಯುನ್ನತ ಪದಕ ನೀಡಬೇಕೆಂದು ಕೋರಿದರು.ಎಂ.ಸಿದ್ದಪ್ಪ ಇನ್ನು ಮೊದಲಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ