ಮೈನ್ಸ್ ಲಾರಿ ಓಡಾಟ ನಿಲ್ಲಿಸಲು ಜಿಲ್ಲಾಧಿಕಾರಿಗೆ ಮನವಿ

ಚಿತ್ರದುರ್ಗ:

    ಭೀಮುಸಮುದ್ರ ಹಿರೇಗುಂಟನೂರು ಮಾರ್ಗದಲ್ಲಿ ಮೈನ್ಸ್ ಲಾರಿಗಳ ಸಂಚಾರವನ್ನು ನಿಲ್ಲಿಸುವಂತೆ ತಾ.ಪಂ.ಅಧ್ಯಕ್ಷ ಡಿ.ಎಂ.ಲಿಂಗರಾಜು ನೇತೃತ್ವದಲ್ಲಿ ತಾ.ಪಂ.ನ ಸರ್ವ ಸದಸ್ಯರುಗಳು ಶುಕ್ರವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

    ಹಳಿಯೂರು ಸಮೀಪ ಬೈಕ್‍ಗೆ ಲಾರಿ ಡಿಕ್ಕಿ ಹೊಡೆದು ಕಳೆದ ತಿಂಗಳು ಗರ್ಭಿಣಿ ಸೇರಿದಂತೆ ನಾಲ್ವರು ಮೃತಪಟ್ಟಿರುವುದು ಅತ್ಯಂತ ಘೋರ ಅನಾಹುತ. ಯಾವುದೆ ಕಾರಣಕ್ಕೂ ಈ ಮಾರ್ಗದಲ್ಲಿ ಅದಿರು ತುಂಬಿದ ಲಾರಿಗಳು ಸಂಚರಿಸುವುದು ಬೇಡ. ಒಂದು ವೇಳೆ ಅದಿರು ಲಾರಿಗಳು ಸಂಚರಿಸಲೇಬೇಕಾದರೆ ಪ್ರತ್ಯೇಕ ಮಾರ್ಗ ಕಂಡುಕೊಳ್ಳಲಿ.

      ಈಗಾಗಲೇ ಹಲವಾರು ಪ್ರತಿಭಟನೆಗಳು ನಡೆದಿದ್ದು, ಮೈನ್ಸ್ ಲಾರಿಗಳ ಸಂಚಾರ ನಿಷೇಧಕ್ಕೆ ಮನವಿ ನೀಡಲಾಗಿದೆ. ಯಾವ ಪ್ರಯೋಜನವಾಗಿಲ್ಲ. ಮುಂದಿನ ದಿನಗಳಲ್ಲಿ ನಮ್ಮ ಬೇಡಿಕೆಗಳು ಈಡೇರದಿದ್ದಲ್ಲಿ ಉಗ್ರ ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.ತಾ.ಪಂ.ಸದಸ್ಯರುಗಳಾದ ಪಿ.ಸುರೇಶ್‍ನಾಯ್ಕ. ಸುರೇಶ್, ಕರಿಯಪ್ಪ, ಚಂದ್ರಕಲ ಸೇರಿದಂತೆ ಸರ್ವ ಸದಸ್ಯರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ