ಆಸ್ಪತ್ರೆ ಅವ್ಯವಹಾರ ತಡೆಗಟ್ಟಲು ಆಗ್ರಹ..!

ಹೊನ್ನಾಳಿ:

     ಬೆನಕನಹಳ್ಳಿ ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲಾ ರೋಗಗಳಿಗೆ ಔಷಧಿ ಮತ್ತು ಮಾತ್ರೆಗಳಿಗೆ ಹೊರಗಡೆ ತೆಗೆದುಕೊಳ್ಳಲು ವೈದ್ಯರು ಚೀಟಿ ಬರೆದು ಕೊಡುತ್ತಾರೆ. ಸರ್ಕಾರದಿಂದ ಆಸ್ಪತ್ರಗೆ ಔಷಧಿ ಮಾತ್ರೆಗಳು ಬರುವುದಿಲ್ಲವೇ ಗರ್ಭಿಣಿ ಮಹಿಳೆಯರಿಗೆ ಹೆರಿಗೆಯಾದ ಸಂದರ್ಭದಲ್ಲಿ ವೈದ್ಯರು ರೂ.1ರಿಂದ 2ಸಾವಿರ ಹಣ ಕೇಳುತ್ತಾರೆ ಎಂದು ದಲಿತ ಮುಖಂಡ ಹನುಮಂತಪ್ಪ ಆರೋಪಿಸಿದರು.ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ನಡೆದ ತಾಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಹಿತರಕ್ಷಣಾ ಜಾಗೃತಿ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು.

     ಇದಕ್ಕೆ ಧ್ವನಿಗೂಡಿಸಿದ ದಲಿತ ಮುಖಂಡರಾದ ತಮ್ಮಣ್ಣ, ದಿಡಗೂರು ರುದ್ರಶ್, ಮಂಜಪ್ಪ, ಕೆ.ಓ.ಹನುಮಂತಪ್ಪ, ರಾಜು ಹಾಗೂ ಇತರ ಮುಖಂಡರುಗಳಳು ಈ ಸಮಸ್ಯೆ ಕೇವಲ ಬೆನಕನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಸೀಮಿತವಾಗಿಲ್ಲ ಹೊನ್ನಾಳಿ ಪಟ್ಟಣದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ಔಷಧಿ ಮಾತ್ರೆಗಳಿಗೆ ವೈದ್ಯರುಗಳು ಹೊರಗೆ ತೆಗೆದುಕೊಳ್ಳಲು ಚೀಟಿ ಬರೆದು ಕೊಡುತ್ತಾರೆ ಎಂದು ದೂರಿದರು.

     ಸಭೆಯಲ್ಲಿ ಹಾಜರಿದ್ದ ಜಿ.ಪಂ ಪ್ರಭಾರಿ ಅಧ್ಯಕ್ಷ ಸುರೇಂದ್ರನಾಯ್ಕ ತಾಲೂಕು ವೈದ್ಯಾಧಿಕಾರಿ ಡಾ.ಕೆಂಚಪ್ಪ ಅವರನ್ನು ತರಾಟೆ ತೆಗೆದುಕೊಂಡು ನಿಮ್ಮ ಆಸ್ಪತ್ರೆ ಸಿಬ್ಬಂದಿ ಮಾಡುವಂತಹ ಅವಘಡಗಳಿಗೆ ನೀವೇ ಜವಾಬ್ದಾರರಾಗುತ್ತೀರಿ ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಿ ಎಂದು ಎಚ್ಚರಿಕೆ ನೀಡಿದರು.

     ಸರ್ಕಾರಿ ಆಸ್ಪತ್ರೆಗಳು ಇರುವುದು ಬಡ ಬಗ್ಗರಿಗಾಗಿ ಆದರೆ ಸರ್ಕಾರಿ ಆಸ್ಪತ್ರೆಯಲ್ಲಿ ವೈದ್ಯರುಗಳು ಹಣ ಕೇಳಿದರೆ ಸರ್ಕಾರಿ ಆಸ್ಪತ್ರೆಗಳು ಏಕೆ ಇರಬೇಕು ಸರ್ಕಾರ ವೈದ್ಯರುಗಳಿಗೆ ಎಲ್ಲಾ ಸೌಲಭ್ಯ ಕೊಟ್ಟರೂ ಬೇಕಾಬಿಟ್ಟಿ ಕೆಲಸ ಮಾಡುವುದು ಸಲ್ಲದು ಎಂದು ಅವರು ಹೇಳಿದರು.
ದಲಿತ ದಿಡಗೂರು ರುದ್ರೇಶ್ ಮಾತನಾಡಿ, ತಾಲೂಕಿನಲ್ಲಿರುವ ಸರ್ಕಾರಿ ವಸತಿ ಶಾಲೆಗಳಲ್ಲಿ ಅವ್ಯವಸ್ಥೆ ಇದ್ದು ಇದನ್ನೆ ಬಂಡವಾಳ ವನ್ನಾಗಿಸಿಕೊಂಡ ತಾಲೂಕಿನ ಕೆಲವು ಕನ್ನಡ ಪರ ಸಂಘಟನೆಗಳು ವಸತಿ ಶಾಲೆಗಳ ಮುಖ್ಯಸ್ಥರಿಂದ ಹಣ ವಸೂಲಿ ಮಾಡುವ ದಂಧೆ ಮಾಡುತ್ತಿದ್ದಾರೆ ಇದಕ್ಕೆ ಕಡಿವಾಣ ಹಾಕಲು ತಾಲೂಕು ಸಮಿತಿ ರಚಿಸಿ ಸರಿಪಡಿಸಬೇಕು ಎಂದು ಹೇಳಿದರು.

     ದಲಿತ ಮುಖಂಡ ತಮ್ಮಣ್ಣ ಮಾತನಾಡಿ, ಚಪ್ಪಲಿ ದುರಸ್ತಿ ಮಾಡುವ 2ರಿಂದ 4 ಕುಟುಂಬಗಳು ಧೂಳು ಕುಡಿಯುತ್ತ ರಸ್ತೆ ಬದಿ ಚಪ್ಪಲಿ ದುರಸ್ತಿ ಮಾಡುತ್ತಿದ್ದಾರೆ ಈಗಾಗಲೇ ಪ.ಪಂ ವತಿಯಿಂದ ಶೆಡ್ಡುಗಳನ್ನು ಅವರಿಗೆ ನೀಡಲಾಗಿದೆ ಆದರೆ ಸೂಕ್ತ ಸ್ಥಳವನ್ನು ನೀಡಿಲ್ಲ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ.ಪಂ ಮುಖ್ಯಾಧಿಕಾರಿ ಎಸ್.ಆರ್.ವೀರಭದ್ರಯ್ಯ, ಫಲಾನುಭವಿಗಳು ಬಂದು ಕೇಳಿಕೊಳ್ಳಬೇಕು ಆಗ ಸೂಕ್ತ ವ್ಯವಸ್ಥೆ ಮಾಡುತ್ತೇವೆ ಎಂದು ಹೇಳಿದರು.

ವಾಗ್ವಾದ:

     ಇದು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದ ಹಿತರಕ್ಷಣಾ ಜಾಗೃತಿ ಸಮಿತಿ ಸಭೆ ಈ ಸಭೆಯಲ್ಲಿ ಯಾವಗಲೂ ಕಲವೇ ಮುಖಂಡರುಗಳು ಮಾತನಾಡುತ್ತಾರೆ ನಮಗೆ ಅವಕಾಶವೇ ಸಿಗುವುದಿಲ್ಲ ಎಂದು ಪರಿಶಿಷ್ಟ ಪಂಗಡದ ಮುಖಂಡ ಶೇಖರಪ್ಪ ಮಾತಿಗಿಳಿದಾಗ ಅವರವರಲ್ಲಿ ಸ್ವಲ್ಪ ಹೊತ್ತು ವಾಗ್ವಾದ ನಡೆಯಿತು.

     ತಾಲೂಕಿನ ವಿವಿಧ ಗ್ರಾಮಗಳಿಗೆ ಕೆಎಸ್‍ಆರ್‍ಟಿಸಿ ಬಸ್ ವ್ಯವಸ್ಥೆ ಮಾಡಬೇಕು ಹಾಗೂ ಪಟ್ಟಣದಲ್ಲಿ ಸಿಟಿ ಬಸ್ ಸಂಚಾರದ ವ್ಯವಸ್ಥೆ ಮಾಡಬೇಕು ಎಂದು ಸಭೆಯಲ್ಲಿ ಒತ್ತಾಯಿಸಲಾಯಿತು. ಇದಕ್ಕೆ ಉತ್ತರಿಸಿದ ಜಿ.ಪಂ ಪ್ರಭಾರಿ ಅಧ್ಯಕ್ಷ ಸುರೇಂದ್ರನಾಯ್ಕ, ಈಗಾಗಲೇ ಶಾಸಕರು ಗ್ರಾಮಾಂತರ ಸಾರಿಗೆ ವ್ಯವಸ್ಥೆ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಪಟ್ಟಣದಲ್ಲಿ ಸಿಟಿ ಸಂಚಾರದ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

     ತಹಸೀಲ್ದಾರ್ ತುಷಾರ್ ಬಿ ಹೊಸೂರು, ತಾ.ಪಂ ಇಒ ಗಂಗಾಧರಮೂರ್ತಿ, ಪಿಎಸ್‍ಐ ತಿಪ್ಪೇಸ್ವಾಮಿ, ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಕೆ.ಎಚ್.ಸದಾಶಿವಪ್ಪ ಸೇರಿದಂತೆ ಇತರ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು . ಎಚ್‍ಎನ್‍ಎಲ್ ಎಸ್‍ಸಿ&ಎಸ್ಟಿ ತ್ರೈಮಾಸಿಕ ಸಭೆ ಅಕ್ಟೋಬರ್ 31: ಹೊನ್ನಾಳಿ:ಗುರುವಾರ ತಾಲೂಕು ಕಚೇರಿ ಸಭಾಂಗಣದಲ್ಲಿ ತಾಲೂಕು ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದ ಹಿತರಕ್ಷಣಾ ಜಾಗೃತಿ ಸಮಿತಿ ಸಭೆ ನಡೆಯಿತು.ತಹಸೀಲ್ದಾರ್ ತುಷಾರ್ ಬಿ ಹೊಸೂರು, ತಾ.ಪಂ ಇಒ ಗಂಗಾಧರಮೂರ್ತಿ, ಪಿಎಸ್‍ಐ ತಿಪ್ಪೇಸ್ವಾಮಿ, ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ಕೆ.ಎಚ್.ಸದಾಶಿವಪ್ಪ ಸೇರಿದಂತೆ ಇತರ ತಾಲೂಕು ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

 

Recent Articles

spot_img

Related Stories

Share via
Copy link
Powered by Social Snap