ಮೀಸಲಾತಿ ಹೋರಾಟದ ಪಾದಯಾತ್ರೆ ಬೆಂಬಲಿಸಲು ಕರೆ

ಹುಳಿಯಾರು

     ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಸೇರಿದಂತೆ ನಾಯಕ ಸಮುದಾಯದ ವಿವಿಧ ಬೇಡಿಕೆಗಳ ಒತ್ತಾಯಿಸಿ ವಾಲ್ಮೀಕಿ ಪ್ರಸನ್ನಾನಂದಪುರಿ ಸ್ವಾಮೀಜಿ ನೇತತ್ವದಲ್ಲಿ ಆರಂಭವಾಗಿರುವ ಪಾದಯಾತ್ರೆಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕ್ ನಾಯಕ ಸಮಾಜದವರು ಭಾಗವಹಿಸಿ ಬೆಂಬಲ ವ್ಯಕ್ತಪಡಿಸಬೇಕೆಂದು ತಾಲೂಕು ಪಂಚಾಯಿತಿ ಸದಸ್ಯ ಹಾಗೂ ಡಿಸಿಸಿ ಬ್ಯಾಂಕ್ ನಿರ್ದೇಶಕ ಸಿಂಗದಹಳ್ಳಿ ರಾಜಕುಮಾರ್ ಮನವಿ ಮಾಡಿದರು.

      ಹುಳಿಯಾರಿನ ಪ್ರವಾಸಿ ಮಂದಿರದಲ್ಲಿ ಮಹರ್ಷಿ ಗುರು ಪೀಠದಿಂದ ನಡೆಯಲಿರುವ ರಾಜನಹಳ್ಳಿಯಿಂದ ರಾಜಧಾನಿಯವರಿಗೆ ಬಹತ್ ಪಾದಯಾತ್ರೆ ಬೆಂಬಲಿಸುವ ನಿಟ್ಟಿನಲ್ಲಿ ವಾಲ್ಮೀಕಿ ಸಮಾಜ ಬಾಂಧವರ ಸಭೆಯ ನೇತತ್ವ ವಹಿಸಿ ಅವರು ಮಾತನಾಡಿದರು.
ನಾಯಕ ಸಮಾಜದ ವಿವಿಧ ಬೇಡಿಕೆಗಳನ್ನು ಒಳಗೊಂಡಂತೆ ಪರಿಶಿಷ್ಟಪಂಗಡಕ್ಕೆ ಶೇಕಡ 7 ರಷ್ಟು ಮೀಸಲಾತಿಗೆ ಸರ್ಕಾರಕ್ಕೆ ಹಕ್ಕೊತ್ತಾಯ ಮಾಡುವ ಹಾಗೂ ಸಮಾಜದ ಸಂಘಟನೆಯ ದಷ್ಟಿಯಿಂದ ಸ್ವಾಮೀಜಿಗಳ ಈ ಪಾದಯಾತ್ರೆಯು ಅತ್ಯಂತ ಮಹತ್ವದ್ದಾಗಿದೆ ಎಂದರು.

       ಈಗಾಗಲೇ ಕೇಂದ್ರ ಸರ್ಕಾರ ಪರಿಶಿಷ್ಟ ವರ್ಗದವರಿಗೆ ಶೇಕಡ 7 ರಷ್ಟು ಮೀಸಲಾತಿಯನ್ನು ಔದ್ಯೋಗಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ನೀಡಿದ್ದರೂ ಸಹ ರಾಜ್ಯ ಸರಕಾರ ಮಾತ್ರ ಹಾಲಿ ಇರುವ ಶೇಕಡ 3 ರಷ್ಟು ಮೀಸಲಾತಿ ಪ್ರಮಾಣವನ್ನು ಹೆಚ್ಚಳ ಮಾಡದೆ ನಿರ್ಲಕ್ಷವಹಿಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

     ಮೀಸಲು ಎಂಬುದು ಭಿಕ್ಷೆಯಲ್ಲ ಅದು ಸಂವಿಧಾನದತ್ತ ಹಕ್ಕು ಎಂದ ಅವರು ಮೀಸಲು ಹೆಚ್ಚಳಕ್ಕಾಗಿ ನಮ್ಮ ಸಂವಿಧಾನಬದ್ಧ ಹಕ್ಕುಗಳನ್ನು ಪಡೆದುಕೊಳ್ಳಲಿಕ್ಕೆ ಶ್ರೀಗಳ ನೇತತ್ವದಲ್ಲಿ ನಡೆಯುತ್ತಿರುವ ಬಹತ್ ಪಾದಯಾತ್ರೆಗೆ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ವಾಲ್ಮೀಕಿ ನಾಯಕ ಸಮಾಜ ಬಾಂಧವರು ಹೋರಾಟಕ್ಕೆ ಕೈಜೋಡಿಸಿ ಯಶಸ್ವಿಗೊಳಿಸಬೇಕೆಂದು ಕರೆ ನೀಡಿದರು.

     ಪಾದಯಾತ್ರೆಯ ಈಗಾಗಲೇ ಆರಂಭವಾಗಿದ್ದು ಭಾನುವಾರ ಶಿರಾ ತಲುಪಿ ಅಲ್ಲಿ ವಾಸ್ತವ್ಯ ಹೂಡಲಿದ್ದಾರೆ. ಚಿಕ್ಕನಾಯ್ಕನಹಳ್ಳಿ ತಾಲ್ಲೂಕಿನ ಸಮಾಜ ಬಾಂಧವರು ತುಮಕೂರು ಜಿಲ್ಲೆಯ ಶಿರಾದಲ್ಲಿ ಸ್ವಾಮೀಜಿಯವರನ್ನು ಸ್ವಾಗತಿಸಿ ಬೆಂಗಳೂರಿನವರೆಗೂ ಅವರೊಟ್ಟಿಗೆ ತೆರಳಿ ನಮ್ಮ ನಾಯಕ ಸಮಾಜದ ಒಗ್ಗಟ್ಟು ಪ್ರದರ್ಶಿಸಬೇಕು ಎಂದು ಮನವಿ ಮಾಡಿದರು.

    ಈ ಸಂದರ್ಭದಲ್ಲಿ ಮಹರ್ಷಿ ವಾಲ್ಮೀಕಿ ನಾಯಕ ಜಾಗತಿ ಹೋರಾಟ ವೇದಿಕೆ ತಾಲೂಕು ಅಧ್ಯಕ್ಷ ದಸೂಡಿ ಮಂಜುನಾಥ್, ಪ್ರಧಾನ ಕಾರ್ಯದರ್ಶಿ ಸೋರಲಮಾವು ರಮೇಶ್, ಖಜಾಂಚಿ ರಂಗನಾಥ್, ಹುಳಿಯಾರು ಹೋಬಳಿ ಅಧ್ಯಕ್ಷ ಹೆಚ್.ಡಿ.ದುರ್ಗರಾಜು, ಡಾ.ಭೈರೇಶ್, ತಾಲೂಕು ಸಂಚಾಲಕ ಮಂಜುನಾಥ ಮಾದಾಪುರ, ಹುಳಿಯಾರು ತ್ರಿವೇಣಿ, ಮಾರುಹೊಳೆ ಓಂಕಾರಮೂರ್ತಿ, ಸೀಗೆಬಾಗಿ ವರದರಾಜು, ಅಣೆಕಟ್ಟೆ ಚಂದ್ರಯ್ಯ, ಕುಶಾಲಪುರ ಬಸವರಾಜು, ಹೊಯ್ಸಳಕಟ್ಟೆ ಗಿರೀಶ್, ಸೋರಲಮಾವು ರಂಗನಾಥ್, ಕುರಿಹಟ್ಟಿ ಗೋವಿಂದರಾಜು ಮತ್ತಿತರರು ಪಾಲ್ಗೊಂಡಿದ್ದರು.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ

Recent Articles

spot_img

Related Stories

Share via
Copy link