ಹುಳಿಯಾರು
ತ್ರಿಚಕ್ರ ವಾಹನ ಸೌಲಭ್ಯ ಕಲ್ಪಿಸಿಕೊಡುವಂತೆ ಹುಳಿಯಾರು ಸಮೀಪದ ಸೀಗೆಬಾಗಿ ಗ್ರಾಮದ ವಿಕಲಚೇತನ ಮುನಿಯಪ್ಪ ಸಂಸದ ಮುದ್ದಹನುಮೇಗೌಡರಲ್ಲಿ ಮನವಿ ಮಾಡಿದನು.
ಹುಳಿಯಾರಿಗೆ ಆಗಮಿಸಿದ್ದ ಸಂಸದರನ್ನು ಭೇಟಿ ಮಾಡಿದ ಮುನಿಯಪ್ಪ ಕಾಲಿಲ್ಲದ ನಾನು ನಿತ್ಯ ಸೀಗೆಬಾಗಿ ಗ್ರಾಮದಿಂದ ಹತ್ತಾರು ಕಿಲೋಮೀಟರ್ ಹುಳಿಯಾರಿಗೆ ಹೋಗಿ ಬರಲಿದ್ದು ಈ ಹಿಂದೆ ಇಲಾಖೆಯಿಂದ ನೀಡಲಾಗಿರುವ ಸೈಕಲ್ ತುಕ್ಕು ಹಿಡಿದಿದ್ದು ತುಳಿಯಲು ಸಹ ಕಷ್ಟ ಸಾಧ್ಯವಾಗಿದೆ.
ಅಂಗವಿಕಲರ ಕಲ್ಯಾಣಾಧಿಕಾರಿಗಳ ಇಲಾಖೆಯವರಿಗೆ ವಾಹನ ಸೌಲಭ್ಯ ಕಲ್ಪಿಸಿಕೊಡುವಂತೆ ಹಾಗೂ ಸಂಸದರು, ಶಾಸಕರಿಗೂ ಸಹ ತ್ರಿಚಕ್ರ ವಾಹನ ನೀಡುವಂತೆ ಎರಡು ವರ್ಷಗಳ ಹಿಂದೆಯೇ ಅರ್ಜಿ ನೀಡಿರುವೆ. ಆದರೆ ಇದುವರೆಗೂ ಯಾರೊಬ್ಬರು ನನಗೆ ಸೌಲಭ್ಯ ಕಲ್ಪಿಸಿಲ್ಲ. ಮಾನವೀಯತೆ ನೆಲೆಯಲ್ಲಿ ತಾವು ತ್ರಿಚಕ್ರ ವಾಹನ ಕಲ್ಪಿಸಿ ಕೊಡಬೇಕಾಗಿ ಮನವಿ ಮಾಡಿದರು.
ತ್ರಿಚಕ್ರ ವಾಹನಕ್ಕಾಗಿ ನಾನು ಈಗಾಗಲೇ ಕಲಿಕಾ ಲೈಸೆನ್ಸ್ ಸಹ ಪಡೆದಿದ್ದು ಅಗತ್ಯ ದಾಖಲಾತಿಗಳನ್ನು ಸಲ್ಲಿಸಲಾಗಿದೆ. ಈ ಬಗ್ಗೆ ಪರಿಶೀಲಿಸಿ ಅವಕಾಶ ಕಲ್ಪಿಸುವಂತೆ ಕೋರಿದರು
ಮುನಿಯಪ್ಪನ ಸಮಸ್ಯೆಯನ್ನು ಖುದ್ದಾಗಿ ಕಂಡ ಸಂಸದರು ಶೀಘ್ರವೇ ಸಂಬಂಧಪಟ್ಟ ಇಲಾಖೆಯಿಂದ ತ್ರಿಚಕ್ರ ವಾಹನದ ಸೌಲಭ್ಯ ಕಲ್ಪಿಸಿಕೊಡುವ ಭರವಸೆ ನೀಡಿದರು.
ಈ ವೇಳೆ ಕಾಂಗ್ರೆಸ್ ಮುಖಂಡ ಹೆಚ್.ಅಶೋಕ್, ಇಮ್ರಾಜ್, ಸಂತೋಷ್, ಆಂಜನೇಯ ದೇವಸ್ಥಾನದ ಕಾರ್ಯದರ್ಶಿ ಧನಂಜಯ, ಬಡಗಿ ರಾಮಣ್ಣ ಮತ್ತಿತರರಿದ್ದರು
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ