ಹುಳಿಯಾರು:
ಹುಳಿಯಾರು ಪಟ್ಟಣದ ಜಾಮಿಯಾ ಮಸೀದಿಗೆ ನೂತನ ಕಮಿಟಿ ರಚಿಸಲು ತಕ್ಷಣ ಚುನಾವಣೆ ನಡೆಸುವಂತೆ ಮುಸ್ಲಿಂ ಮುಖಂಡರು ಆಗ್ರಹಿಸಿದ್ದಾರೆ.ಈ ಸಂಬಂಧ ಪತ್ರಿಕಾಗೋಷ್ಠಿ ನಡೆಸಿದ ಅವರು ಕರ್ನಾಟಕ ರಾಜ್ಯ ವಕ್ಫ್ ಮಂಡಳಿಯಿಂದ ಜಾಮೀಯ ಮಸೀದಿ ಕಮಿಟಿ ರಚಿಸಲು ಚುನಾವಣೆ ನಡಸುವಂತೆ 2019 ರ ಜ.3 ರಂದು ಆದೇಶವಾಗಿದೆ. ಈ ಚುನಾವಣೆ ಪ್ರಕ್ರಿಯೆ ನಡೆಸಲು ಚಿಕ್ಕನಾಯಕನಹಳ್ಳಿ ತಾಲ್ಲೂಕು, ಶೆಟ್ಟಿಕೆರೆ ಗ್ರಾಮ ಲೆಕ್ಕಿಗ ಆರೀಫ್‍ವುಲ್ಲಾ ಖಾನ್ ನೇಮಕ ಮಾಡಿರುತ್ತಾರೆ. ಆದರೆ ಇದೂವರೆವಿಗೂ ಚುನಾವಣೆಯ ಯಾವುದೇ ಪ್ರಕ್ರಿಯೆ ಆರಂಭವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.
ವಕ್ಫ್ ಬೋರ್ಡ್ ನಿಯಮದ ಪ್ರಕಾರ ಜಾಮಿಯಾ ಮಸೀದಿಯಲ್ಲಿ ನಮಾಜ್ ಆದ ಮೇಲೆ ಚುನಾವಣೆಯ ಬಗ್ಗೆ ತಿಳಿಸಿ ಸೂಚನ ಫಲಕದಲ್ಲಿ ಪ್ರಕಟಿಸಬೇಕಾಗಿತ್ತು. ಈಗ ಹಾಲಿ ಇರುವ ಕಾರ್ಯಕಾರಿಣಿ ಸಮಿತಿಯವರೂ ಸಹ ನಮಾಜ್ ಮುಗಿದ ನಂತರ ಊರಿನ ಮುಸ್ಲಿಂ ಬಾಂಧವರಿಗೆ ತಿಳಿಸಬೇಕಿತ್ತು. ಆದರೆ ಚುನಾವಣೆಯ ಬಗ್ಗೆ ಇದೂವರೆವಿಗೂ ಯಾರಿಗೂ ಯಾವ ಸಾರ್ವಜನಿಕ ಮಾಹಿತಿ ನೀಡದೆ ಗೌಪ್ಯವಾಗಿಡಲಾಗಿದೆ ಎಂದು ದೂರಿದ್ದಾರೆ.
ಹಾಗಾಗಿ ಈ ಬಗ್ಗೆ ತಕ್ಷಣ ಕ್ರಮ ಕೈಗೊಂಡು ಚುನಾವಣೆ ನಡೆಸುವಂತೆ ಚುನಾವಣಾಧಿಕಾರಿಗೆ ಸೂಚನೆ ನೀಡುವಂತೆ ಜಿಲ್ಲಾ ವಕ್ಫ್ ಬೋರ್ಡ್ ಹಾಗೂ ರಾಜ್ಯ ವಕ್ಫ್ ಬೋರ್ಡ್ ಮುಖ್ಯ¸ಮನವಿ ಮಾಡಿದ್ದಾರೆ.ಪತ್ರಿಕಾಗೋಷ್ಠಿಯಲ್ಲಿ ಮುಸ್ಲಿಂ ಮುಖಂಡ ದುಬೈ ಸೈಯದ್ ನಜೀರ್, ಮೈದೀನ್ ಷಾ, ದಾದಾಪೀರ್, ಅಲ್ಲಾಹುಮಾ, ಮಹಬೂಬ್, ಜಬಿ ಮುಬಾರಕ್, ಜಾಫರ್ (ಮೌಳಿ), ನಜೀರ್, ನಾಸೀರ್ ಬೇಗ್, ಇಮ್ರಾನ್, ಸಾದತ್ ಷರೀಫ್, ಮೊಹಮ್ಮದ್ ಮತ್ತಿತರರು ಉಪಸ್ಥಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ