ಶಿರಾ
ತಾಲ್ಲೂಕು ಬ್ಲಾಕ್ ಕಾಂಗ್ರೆಸ್ ಪಕ್ಷದ ವತಿಯಿಂದ ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅವರಿಗೆ ತಾಲ್ಲೂಕಿನ ಹತ್ತು ಹಲವು ಸಮಸ್ಯೆಗಳನ್ನು ನೀಗಿಸುವಂತೆ ಒತ್ತಾಯಿಸಿ ಮನವಿ ಪತ್ರ ಸಲ್ಲಿಸಲಾಯಿತು.
ಬರ ಪರಿಹಾರದ ಬಗ್ಗೆ ಪ್ರಗತಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ಶಿರಾ ನಗರಕ್ಕೆ ಆಗಮಿಸಿದ್ದ ಡಾ.ಪರಮೇಶ್ವರ್ ಅವರನ್ನು ನಗರ ಘಟಕದ ಅಧ್ಯಕ್ಷ ಪಿ.ಆರ್.ಮಂಜುನಾಥ್, ಗ್ರಾ.ಅಧ್ಯಕ್ಷ ರಾಮಚಂದ್ರಪ್ಪ ಸೇರಿದಂತೆ ಅನೇಕ ಪ್ರಮುಖರು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದರು
ಕಳ್ಳಂಬೆಳ್ಳ ಕೆರೆಯಿಂದ 11 ಕೆರೆಗಳಿಗೆ ಹೇಮಾವತಿ ನೀರನ್ನು ತುಂಬಿಸುವುದರ ಜೊತೆಗೆ ಮದಲೂರು ಕೆರೆಗೂ ನೀರನ್ನು ಹರಿಸುವಂತೆ ಹಾಗೂ ಶಿರಾ ಕೆರೆಯನ್ನು ಜನತೆಯ ಕುಡಿಯುವ ನೀರಿನ ಸಲುವಾಗಿ ಅಗತ್ಯ ನೀರನ್ನು ಪೂರೈಸುವಂತೆ ಮನವಿ ಮಾಡಲಾಯಿತು.
ಕಳೆದ 6 ತಿಂಗಳಿಂದಲೂ ಬಹುತೇಕ ಅಭಿವೃದ್ಧಿ ಕಾಮಗಾರಿಗಳು ಕುಂಠಿತಗೊಂಡಿದ್ದು ಕೂಡಲೇ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಸೂಚನೆ ನೀಡುವಂತೆಯೂ ಬ್ಲಾಕ್ ಕಾಂಗ್ರೆಸ್ ಮುಖಂಡರು ಮನವಿ ಮಾಡಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ