ರಸ್ತೆಗೆ ಚರಂಡಿ ನೀರು: ಬೈಕ್ ಸವಾರರ ಪ್ರತಿಭಟನೆ

ಹುಳಿಯಾರು

      ಹುಳಿಯಾರು ಪಟ್ಟಣ ಪಂಚಾಯ್ತಿ ವ್ಯಾಪ್ತಿಯ ಪೊಲೀಸ್ ಸ್ಟೇಷನ್ ಹಿಂಭಾಗದ ತೊರೆಸೂರಗೊಂಡನಹಳ್ಳಿ ರಸ್ತೆಯ ಮೇಲೆ ಚರಂಡಿ ಹರಿಯುತ್ತಿದ್ದರಿಂದ ಈ ಮಾರ್ಗದಲ್ಲಿ ಸುಗಮ ಸಂಚಾರಕ್ಕೆ ಅಡ್ಡಿಯುಂಟಾಗಿದೆ ಎಂದು ಬೈಕ್ ಸವಾರರು ಆಕ್ರೋಶ ವ್ಯಕ್ತಪಡಿಸಿ ಕೆಲ ಕಾಲ ರಸ್ತೆಗೆ ಅಡ್ಡಲಾಗಿ ಬೈಕ್ ನಿಲ್ಲಿಸಿ ಪ್ರತಿಭಟಿಸಿದ ಘಟನೆ ಶನಿವಾರ ಬೆಳಿಗ್ಗೆ ಜರುಗಿದೆ.

       ಗ್ರಾಮದ ಏಳೆಂಟು ಮನೆಯ ಬಚ್ಚಲು ನೀರನ್ನು ರಸ್ತೆಗೆ ಹರಿಯಲು ಬಿಟ್ಟಿರುವುದರಿಂದ ಸಮಸ್ಯೆ ಉದ್ಭವಿಸಿದೆ. ಕೊಳಚೆ ನೀರಿನಿಂದ ಈ ಮಾರ್ಗದಲ್ಲಿ ತಿರುಗಾಡುವ ಜನ ನಿತ್ಯ ನರಕಯಾತನೆ ಅನುಭವಿಸುವಂತಾಗಿದೆ. ರಸ್ತೆಯಲ್ಲಿ ನಿತ್ಯ ಚರಂಡಿ ನೀರು ಹರಿಯುತ್ತಿರುವುದರಿಂದ ಗುಂಡಿಗಳು ಬಿದ್ದಿದೆ. ಈ ಗುಂಡಿಗಳಲ್ಲಿ ಕೊಳಚೆ ನೀರು ನಿಂತು ದಾರಿಹೋಕರಿಗೆ ಕಿರಿಕಿರಿ ತಂದೊಡ್ಡಿದ್ದೆ ಎಂಬುದು ಪ್ರತಿಭಟನಾ ನಿರತರ ಆರೋಪವಾಗಿದೆ.

       ರಸ್ತೆ ತುಂಬಾ ಚರಂಡಿ ನೀರು ಹರಿಯುತ್ತಿರುವುದರಿಂದ ಸ್ನಾನ ಮಾಡಿ ಶುಭ್ರವಾಗಿ ಬರುವವರು ಕೊಳಚೆ ನೀರು ಸಿಡಿಯುವ ಭಯದಿಂದ ಸಂದಿಗೊಂದಿಯಲ್ಲಿ ಓಡಾದುವಂತ್ತಾಗಿದೆ. ಪಾದಚಾರಿಗಳು ಬರುವ ವೇಳೆಯಲ್ಲೇ ಬೈಕ್‍ನವರು ಬಂದು ಚರಂಡಿ ನೀರು ಸಿಡಿದ ನಿದರ್ಶನ ಅನೇಕವಿದೆ. ಅಲ್ಲದೆ ಇಲ್ಲಿನ ವಾಸಿಸುವವರಿಗೆ ದುರ್ನಾತ ಬೀರುವ ಜೊತೆಗೆ ಸೊಳ್ಳೆಗಳು ಹೆಚ್ಚಾಗಿ ಸಾಂಕ್ರಾಮಿಕ ರೋಗ ಹರಡುವ ಬೀತಿ ಕಾಡುತ್ತಿದೆ ಎಂದು ದೂರಿದರು.

        ಈ ಬಗ್ಗೆ ನೂರಾರು ಬಾರಿ ಪಪಂ ಅಧಿಕಾರಿಗಳ ಗಮನಕ್ಕೆ ತರಲಾಗಿದೆ. ಹುಳಿಯಾರಿನಲ್ಲಿ ಎಸಿಬಿ ಅಧಿಕರಿಗಳು ಸಭೆ ನಡೆಸಿದಾಗೂ ದೂರು ನೀಡಲಾಗಿದೆ. ಆದರೆ ರಸ್ತೆಗೆÉ ನೀರು ಹರಿಯ ಬಿಟ್ಟಿರುವವರ ವಿರುದ್ಧ ಕ್ರಮ ಕೈಗೊಂಡಿಲ್ಲ. ಇನ್ನಾದರೂ ಪಪಂ ಎಚ್ಚೆತ್ತುಕೊಂಡು ಚರಂಡಿ ನೀರು ರಸ್ತೆಗೆ ಹರಿಯದಂತೆ ಕ್ರಮ ಕೈಗೊಂಡು ಸಾರ್ವಜನಿಕರಿಗೆ ಸುಗಮ ಸಂಚಾರಕ್ಕೆ ಅನುಕೂಲ ಮಾಡಿಕೊಡಬೇಕು. ಇಲ್ಲವಾದರೆ ಉಗ್ರ ಪ್ರತಿಭಟನೆಗೆ ಇಳಿಯಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link
Powered by Social Snap