ಬಸ್ ಮಾರ್ಗ ಬದಲಾವಣೆ ಮಾಡದಂತೆ ಮನವಿ

ಹುಳಿಯಾರು:

    ಹುಳಿಯಾರು ಹೋಬಳಿಯ ಗಡಿ ಗ್ರಾಮ ದಸೂಡಿಯಿಂದ ಬೆಂಗಳೂರಿಗೆ ಹೋಗುವ ಕೆಎಸ್‍ಆರ್‍ಟಿಸಿ ಬಸ್ ಮಾರ್ಗ ಬದಲಾವಣೆ ಮಾಡದೆ ಮೂಲ ಮಾರ್ಗದಲ್ಲೇ ಪ್ರಯಾಣಿಸುವಂತೆ ಗ್ರಾಪಂ ಉಪಾಧ್ಯಕ್ಷ ಹನುಮಮತರಾಯಪ್ಪ ಮನವಿ ಮಾಡಿದ್ದಾರೆ.ಗಡಿ ಗ್ರಾಮದ ಜನರಿಗೆ ಅನುಕೂಲ ಆಗಲೆಂದು ಬೆಳಗ್ಗೆ 5 ಗಂಟೆಗೆ ಬೆಂಗಳೂರಿಗೆ ಬಸ್ ಸೌಲಭ್ಯ ಕಲ್ಪಿಸಲಾಗಿತ್ತು. ಈ ಬಸ್ ದಸೂಡಿಯಿಂದ ಗಿಲ್ಯಾನಾಯ್ಕನತಾಂಡ್ಯ, ಉಮ್ಲಾನಾಯ್ಕನತಾಂಡ್ಯ, ಮರೆನಡುಪಾಳ್ಯ, ದಬ್ಬಗುಂಟೆ ಮಾರ್ಗವಾಗಿ ಹೊಯ್ಸಲಕಟ್ಟೆ ತಲುಪಿ ಅಲ್ಲಿಂದ ಬುಕ್ಕಾಪಟ್ಟಣ, ಹಾಗಲವಾಡಿ ಮಾರ್ಗವಾಗಿ ಬೆಂಗಳೂರಿಗೆ ಹೋಗುತ್ತದೆ.

    ಈ ಮಾರ್ಗದಲ್ಲಿ ಸಂಚರಿಸುವುದರಿಂದ ಬಡವರು, ರೈತರು ವಾಸ ಮಾಡುವ ಹತ್ತಾರು ಹಳ್ಳಿಗಳಿಗೆ ಬಸ್ ಸೌಲಭ್ಯ ಕಲ್ಪಿಸಿದಂತ್ತಾಗಿದೆ. ಆದರೆ ಈಗ ಈ ಮಾರ್ಗ ಬದಲಾಯಿಸಿ ದಸೂಡಿಯಿಂದ ನೇರವಾಗಿ ದಬ್ಬಗುಂಟೆ ತುಲುಪಿ ಅಲ್ಲಿಂದ ಹೊಯ್ಸಲಕಟ್ಟೆ, ಬುಕ್ಕಾಪಟ್ಟಣ ಮಾರ್ಗವಾಗಿ ಬೆಂಗಳೂರಿಗೆ ಹೋಗುವ ಪ್ರಯತ್ನ ನಡೆಯುತ್ತಿದೆ.

     ಇದರಿಂದ ಅತೀ ಹಿಂದುಳಿದ ಜನರೇ ವಾಸಮಾಡುವ ತಾಂಡ್ಯ ಮತ್ತು ಗೊಲ್ಲರಹಟ್ಟಿಯ ಜನರಿಗೆ ಸಾರಿಗೆ ಸೌಲಭ್ಯದಿಂದ ವಂಚಿಸಿದಂತ್ತಾಗುತ್ತದೆ. ಹಾಗಾಗಿ ಹಾಲಿ ಈಗ ಸಂಚರಿಸುವ ಮಾರ್ಗ ಬದಲಾಯಿಸದೆ ತಾಂಡ್ಯ ಮತ್ತು ಗೊಲ್ಲರಹಟ್ಟಿ ಮಾರ್ಗವಾಗಿಯೇ ಸಂಚರಿಸಲಿ ಎಂದು ಮನವಿ ಮಾಡಿದ್ದಾರೆ.

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link