ಪಾಲಿಮರ್ ತ್ಯಾಜ್ಯ ಸಂಸ್ಕರಣಾ ಸಂಶೋಧನೆಗೆ ಅಗತ್ಯ ನೆರವು : ಸಿಎಂ

ಬೆಂಗಳೂರು

    ಪರಿಸರಕ್ಕೆ ಮಾರಕವಾಗಿರುವ ಪ್ಲಾಸ್ಟಿಕ್, ಪಾಲಿಮರ್ ತ್ಯಾಜ್ಯ ಮರುಬಳಕೆ ನಿರ್ವಹಣೆ ಮಾಡುವಲ್ಲಿ ನಡೆಸುವ ಸಂಶೋಧನೆಗೆ ರಾಜ್ಯ ಸರ್ಕಾರ ಅಗತ್ಯ ನೆರವು ನೀಡಲಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಇಂದಿಲ್ಲಿ ಭರವಸೆ ನೀಡಿದ್ದಾರೆ.

     ಕೆಂಪೇಗೌಡ ವಿಮಾನ ನಿಲ್ದಾಣದ ಬಳಿ ನೂತನವಾಗಿ ನಿರ್ಮಿಸಿರುವ ಕೇಂದ್ರ ಪ್ಲಾಸ್ಟಿಕ್ ಮತ್ತು ಇಂಜಿನಿಯರಿಂಗ್ ತಾಂತ್ರಿಕ ಸಂಸ್ಥೆ ಸಿಐಪಿಇಟಿ ಎಸ್‍ಆರ್‍ಪಿ ಎಪಿಡಿಡಿಆರ್‍ಎಲ್ ಬೆಂಗಳೂರು ಸಂಸ್ಥೆಯನ್ನು ಉದ್ಘಾಟಿಸಿ ಮುಖ್ಯಮಂತ್ರಿಗಳು ಮಾತನಾಡಿದರು 

   ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ಸಹಯೋಗದಲ್ಲಿ ಸಿಪೆಟ್ ನಂತಹ ಉಪಯುಕ್ತ ಸಂಸ್ಥೆಯನ್ನು ಸ್ಥಾಪಿಸಿರುವುದು ಹೆಮ್ಮೆಯ ಸಂಗತಿ. ಇದರಿಂದಾಗಿ ಪರಿಸರಕ್ಕೆ ಉಂಟಾಗುವ ಹಾನಿಯನ್ನು ಗಣನೀಯವಾಗಿ ತಗ್ಗಿಸಬಹುದಾಗಿದ್ದು ಈ ಸಂಸ್ಥೆಯ ಬೆಳವಣಿಗೆ ಹಾಗೂ ವಿಸ್ತರಣೆಗೆ ರಾಜ್ಯಸರ್ಕಾರ ಅಗತ್ಯ ಸಹಕಾರ ನೀಡಲು ಬದ್ದವಾಗಿದೆ ಎಂದರು.

     ಪ್ಲಾಸ್ಟಿಕ್ ಪಾಲಿಮರ್ ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸುತ್ತವೆ. ಬೆಂಗಳೂರು ಸಂಶೋಧನೆ ಹಾಗೂ ಅನುಷ್ಠಾನದಲ್ಲಿ ಜಾಗತಿಕ ಮಟ್ಟದಲ್ಲಿ ಗಮನ ಸೆಳೆಯುತ್ತಿರುವುದು ಹೆಮ್ಮೆ ವಿಷಯವಾಗಿದೆ ಎಂದು ತಿಳಿಸಿದರು.ಪ್ಲಾಸ್ಟಿಕ್ ಪಾಲಿಮರ್ ಗೃಹ ಬಳಕೆಯಿಂದ ಹಿಡಿದು ಕೈಗಾರಿಕಾ ಕ್ಷೇತ್ರಗಳವರೆಗೆ ಅತಿಹೆಚ್ಚು ಬಳಕೆಯಾಗುತ್ತಿದೆ. ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹಿಸಿ ಸಂಶೋಧನೆ ಮೂಲಕ ಮರುಬಳಕೆ ಮಾಡುವ ಮೂಲಕ ಪರಿಸರ ಹಾನಿ ತಗ್ಗಿಸಲು ಮುಂದಾಗಿರುವುದು ಶ್ಲಾಘನೀಯ ಎಂದು ಹೇಳಿದರು.

    ಕೇಂದ್ರ ಸಚಿವ ಸದಾನಂದಗೌಡ ಮಾತನಾಡಿ, ಸಿಪೆಟ್ ಸಂಸ್ಥೆ ದೇಶದಲ್ಲಿ 37 ಕೇಂದ್ರಗಳಿವೆ. ನಗರದಲ್ಲಿ ಉದ್ಘಾಟನೆಗೊಂಡ ಕೇಂದ್ರವು ಇಂದು ತ್ಯಾಜ್ಯ ವಿಲೇವಾರಿ ಇವೇಸ್ಟ್ ಮ್ಯಾನೆಜ್‍ಮೆಂಟ್ ಹೊಸ ವ್ಯವಸ್ಥೆ ಮಾಡುವ ಮೂಲಕ ತ್ಯಾಜ್ಯ ವಿಲೇವಾರಿ ಹಾಗೂ ಮರುಬಳಕೆಯಲ್ಲಿ ಹೊಸ ಭಾಷ್ಯ ಬರೆಯಲಿದೆ. ಪ್ಲಾಸ್ಟಿಕ್ ಪಾಲಿಮರ್ ಮರುಬಳಕೆ ಅನುಷ್ಟಾನಕ್ಕೆ 500 ಎಕರೆ ಭೂಮಿ ಅಗತ್ಯವಿದ್ದು, ರಾಜ್ಯಸರ್ಕಾರ ಜಾಗ ನೀಡಿದರೆ ಸಂಶೋಧನೆ ವಿಸ್ತರಣೆಯನ್ನು ಶೀಘ್ರದಲ್ಲಿ ಕೈಗೊಳ್ಳುವುದಾಗಿ ತಿಳಿಸಿದರು.

    ಉಪಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ ನಾರಾಯಣ್ ಮಾತನಾಡಿ ಬೆಂಗಳೂರು ಎಲ್ಲ ಕ್ಷೇತ್ರದಲ್ಲೂ ಸಾಕಷ್ಟು ಅಭಿವೃದ್ಧಿ ಆಗುವ ಮೂಲಕ ವಿಜ್ಞಾನ ಕ್ಷೇತ್ರದಲ್ಲಿ ಮುಂಚೂಣಿಯಲ್ಲಿದೆ.ಸಂಶೋಧನೆ ಲ್ಯಾಬ್ ಗೆ ಸೀಮಿತವಾಗಿರದೆ ಎಲ್ಲರಿಗೂ ತಲುಪುವಂತಾಗಬೇಕು .ಸಿಪೆಟ್ ಸಂಸ್ಥೆ ಎಲ್ಲ ಕೈಗಾರಿಕಾ ಕ್ಷೇತ್ರಗಳಿಗೂ ಅಗತ್ಯವಿದೆ. ಇದರ ಆಶ್ರಯದಲ್ಲಿ ವಿಜ್ಞಾನಿಗಳಿಗೆ, ಶಿಕ್ಷಣ ಕ್ಷೇತ್ರಕ್ಕೆ ಸಹಕಾರಿಯಾಗಲಿದೆ. ಮುಂದಿನ ಒಂದು ವರ್ಷದಲ್ಲಿ ಪ್ಲಾಸ್ಟಿಕ್ ಪುನರ್ ಬಳಕೆ ಮಾಡಲು ಸಿದ್ದರಾಗಿದ್ದಾರೆ. ಇವೇಸ್ಟ್ ಪುನರ್ ಬಳಕೆಗೆ ಮುಂದಾಗುತ್ತಿದೆ ಎಂದರು.

    ಮಾಜಿ ಸಚಿವ ಹಾಗೂ ಶಾಸಕ ಕೃಷ್ಣಭೈರೇಗೌಡ ಮಾತನಾಡಿ, ದೇಶದ ಮೂರನೇ ಕೇಂದ್ರ ಉದ್ಘಾಟನೆ ಮಾಡಿರುವುದು ಹೆಮ್ಮೆಯ ವಿಷಯ. ಮನುಷ್ಯನ ದುರಾಸೆಯಿಂದ ಹವಾಮಾನ ಬದಲಾವಣೆಯಾಗುತ್ತಿದ್ದು ಪರಿಸರ ಸಮತೋಲನ ಕಳೆದುಕೊಳ್ಳುತ್ತಿದೆ. ಪರಿಸರದಲ್ಲಿ ಸಮತೋಲನ ಕಾಪಾಡಿಕೊಳ್ಳಲು ಈ ರೀತಿಯ ಸಂಶೋಧನೆ ಅಗತ್ಯವಾಗಿದೆ.ಈ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿಸುವ ಮೂಲಕ ಭವಿಷ್ಯದ ಪರಿಸರ ಕಾಪಾಡುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಲಿ ಎಂದು ಶುಭ ಹಾರೈಸಿದರು.

   ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

 

Recent Articles

spot_img

Related Stories

Share via
Copy link
Powered by Social Snap