ಮಧುಗಿರಿ
ಕೇರಳದ ಶಬರಿ ಮಲೆಯ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಎಲ್ಲಾ ವಯೋಮಾನದ ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ನೀಡಬೇಕು ಎಂದು ನ್ಯಾಯ ಮೂರ್ತಿ ದೀಪಕ್ ಮಿಶ್ರಾರವರ ನ್ಯಾಯ ಪೀಠ ನೀಡಿದ್ದ ತೀರ್ಪನ್ನು ಪ್ರಶ್ನಿಸಿ ಪಟ್ಟಣದ ಶ್ರೀ ಅಯ್ಯಪ್ಪ ಸ್ವಾಮಿ ಸೇವಾ ಟ್ರಸ್ಟ್ ವತಿಯಿಂದ ಉಪವಿಭಾಗಾಧಿಕಾರಿಗಳ ಕಾರ್ಯಾಲಯದ ಸಿಬ್ಬಂದಿ ಮೂಲಕ ಮನವಿ ಸಲ್ಲಿಸಲಾಯಿತು.
ದೇವಸ್ಥಾನದ ಪ್ರಧಾನ ಅರ್ಚಕ ಶಾಮಣ್ಣ ಮಾತನಾಡಿ, ಬಹಳ ಹಿಂದಿನ ಕಾಲದಿಂದಲೂ ನಡೆದುಕೊಂಡ ಬಂದಂತಹ ಪದ್ದತಿಯಂತೆ ಹೆಣ್ಣು ಮಕ್ಕಳಿಗೆ ದೇವಾಲಯ ಅವಕಾಶ ನೀಡಲಾಗಿತ್ತು. ಆದರೆ ನ್ಯಾಯ ಮೂರ್ತಿಗಳು ಇತ್ತೀಚೆಗೆ ಎಲ್ಲಾ ವಯೋಮಾನದ ಮಹಿಳೆಯರ ಪ್ರವೇಶಕ್ಕೆ ಅವಕಾಶ ಕಲ್ಪಿಸಿ ಕೊಟ್ಟಿದ್ದಾರೆ. ಈ ಹಿಂದಿನ ಪದ್ದತಿಯಂತೆ ಬಾಲ್ಯ ವ್ಯವಸ್ಥೆಯ ಹೆಣ್ಣು ಮಕ್ಕಳಿಗೆ ಹಾಗೂ ವೃದ್ದಾಪ್ಯ ವ್ಯವಸ್ಥೆಯನ್ನು ತಲುಪಿರುವಂತಹ ಮಹಿಳೆಯರಿಗೆ ಅವಕಾಶ ನೀಡಿ ದೇವಾಲಯದ ಪಾವಿತ್ರತೆಯನ್ನು ಉಳಿಸಿ ಎಂದು ಒತ್ತಾಯಿಸಿದರು.
ಶಾರದ ರಾಮಚಂದ್ರಪ್ಪ ಮಾತನಾಡಿ, ಹಿಂದಿನ ಪದ್ದತಿಯನ್ನೇ ಪಾಲಿಸಿದರೆ ಉತ್ತಮ. ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಹೆಣ್ಣು ಮಕ್ಕಳು ಮತ್ತು ವಯಸ್ಕರ ಪ್ರವೇಶಪದ್ದತಿ ಮೊದಲಿನಿಂದಲೂ ಜಾರಿಯಿದೆ. ಜತೆಯಲ್ಲಿ ದೇವಾಲಯದ ಪ್ರವೇಶಕ್ಕಿರುವ ನಿಯಮ ನಿಬಂಧನೆಗಳನ್ನು ಎಲ್ಲರೂ ಪಾಲನೆ ಮಾಡುತ್ತಾರೆ ಆದರೆ ಕೋರ್ಟ್ ತೀರ್ಪು ನೀಡಿರುವುದು ಸರಿಯಿಲ್ಲ. ಆದ್ದರಿಂದ ನಾನೊಬ್ಬ ಮಹಿಳೆಯಾಗಿ ಈ ತೀರ್ಪನ್ನು ಖಂಡಿಸುತ್ತೇನೆ ಎಂದರು.
ಚಂದ್ರಶೇಖರ್ ಬಾಬು, ಪುರಸಭಾ ಸದಸ್ಯ ಎಂ.ವಿ.ಮಂಜುನಾಥ್, ನರಸಿಂಹಮೂರ್ತಿ, ಶಿವಣ್ಣ, ಸುರೇಶ್, ನಾರಾಯಣ್, ಪೆರುಮಾಳ್, ಸುನೀಲ್, ಮಂಜುನಾಥ್(ಕಂಠಿ) ವೀರೇಶ್, ಎಂ.ಎನ್.ರಮೇಶ್, ಆನಂದ್, ಮಂಜುನಾಥ್, ನಟರಾಜು, ರಾಮಮೂರ್ತಿ, ಕಾವಲಪ್ಪ ಮತ್ತಿತರರು ಇದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ