ಬೆಂಗಳೂರು
ರೈಸ್ ಪುಲ್ಲಿಂಗ್ ಮಾಡುವ ವಿಗ್ರಹಗಳನ್ನು ಮಾರಾಟ ಮಾಡುತ್ತಿದ್ದ ಆರೋಪಿಗಳನ್ನು ಬಂಧಿಸುವಲ್ಲಿ ವೈಟ್‍ಫೀಲ್ಡ್ ಪೊಲೀಸರು ಯಶಸ್ವಿಯಾಗಿದ್ದಾರೆ.
ವರ್ತೂರಿನ ನಾಗೇಶ್ (45), ಶಿವು ಅಲಿಯಾಸ್ ಶಿವು (34) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಲಕ್ಷ್ಮಿ ನರಸಿಂಹಸ್ವಾಮಿ ವಿಗ್ರಹ ಹಾಗೂ ಫೋರ್ಡ್ ಪಿಯಸ್ಟ ಕಾರನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ವರ್ತೂರಿನ ನಾರಾಯಣಸ್ವಾಮಿ ಎಂಬುವರಿಗೆ ಲಕ್ಷ್ಮಿ ನರಸಿಂಹಸ್ವಾಮಿ ವಿಗ್ರಹ ತೋರಿಸಿ ಈ ವಿಗ್ರಹವು ತುಂಬ ಆಕರ್ಷಣೀಯ ಹಾಗೂ ಪುರಾತನವಾಗಿದೆ. ವಿಗ್ರಹದ ಸುತ್ತ ಅಕ್ಕಿ ಹಾಕಿದರೆ ತನ್ನೆಡೆಗೆ ಸೆಳೆದುಕೊಳ್ಳುತ್ತದೆ.ಈ ವಿಗ್ರಹಕ್ಕೆ ಭಾರಿ ಬೇಡಿಕೆಯಿದ್ದು, ಸಾವಿರಾರು ಕೋಟಿ ರೂ.ಗಳಿಗೆ ಖರೀದಿಸುತ್ತಾರೆ. ಹಣವನ್ನು ಹೂಡಿಕೆ ಮಾಡಿದರೆ, ಹೂಡಿಕೆಯ ನೂರು ಪಟ್ಟು ಹೆಚ್ಚಿನ ಹಣ ಸಿಗುತ್ತದೆ ಎಂದು ನಂಬಿಸಿ ವಂಚನೆ ನಡೆಸಿದ್ದರು.
ಇದೇ ರೀತಿ ಹಲವು ಶ್ರೀಮಂತರಿಗೆ ನಂಬಿಕೆ ಹುಟ್ಟಿಸಿ ರೈಸ್‍ಪುಲ್ಲಿಂಗ್ ದಂಧೆ ನಡೆಸುತ್ತಿದ್ದ ಆರೋಪಿಗಳನ್ನು ಖಚಿತ ಮಾಹಿತಿಯಾದರಿಸಿ ಬಂಧಿಸಿ ಹೆಚ್ಚಿನ ತನಿಖೆ ಕೈಗೊಳ್ಳಲಾಗಿದೆ ಎಂದು ಅಬ್ದುಲ್ ಅಹದ್ ತಿಳಿಸಿದ್ದಾರೆ.








