ದಾವಣಗೆರೆ:
ಲಾರಿ ಹಾಗೂ ಬೈಕ್ ಮಧ್ಯೆ ಡಿಕ್ಕಿ ಸಂಭವಿಸಿ, ಬೈಕ್ ಸವಾರ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ತಾಲೂಕಿನ ಮಳ್ಳೆಕಟ್ಟೆ ಹಾಗೂ ಆಲೂರು ಹಟ್ಟಿ ಗ್ರಾಮಗಳ ನಡುವಿನ ಜಗಳೂರು ರಸ್ತೆಯಲ್ಲಿ ಶನಿವಾರ ಸಂಜೆ ನಡೆದಿದೆ.
ಮೃತ ಬೈಕ್ ಸವಾರನನ್ನು ದಾವಣಗೆರೆಯ ನಿವಾಸಿ ನೀರೇಶ(30 ವರ್ಷ) ಎಂದು ಗುರುತಿಸಲಾಗಿದ್ದು, ನೀರೇಶ್ ಚಲಾಯಿಸುತ್ತಿದ್ದ ಬೈಕ್ ಹಾಗೂ ಲಾರಿ ಮಧ್ಯೆ ಡಿಕ್ಕಿ ಸಂಭವಿಸಿದ್ದು. ಡಿಕ್ಕಿಯ ರಭಸಕ್ಕೆ ನೀರೇಶ ನೆಲಕ್ಕೆ ಬಿದ್ದಿದ್ದು, ಲಾರಿಯ ಹಿಂದಿನ ಚಕ್ರ ಈತನ ತಲೆಯ ಮೇಲೆ ಹರಿದು ಹೋಗಿದ್ದು, ತಲೆ ಬುರಡೆ ಓಪನ್ ಆಗಿ, ಮಿದಿಳು ಚೆಲ್ಲಾಪಿಲ್ಲಿಯಾಗಿದ್ದು, ನೀರೇಶ ಸ್ಥಳದಲ್ಲೇ ಸಾವನಪ್ಪಿದ್ದಾನೆ.
ಈ ಕುರಿತು ದಾವಣಗೆರೆ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








