ಚಿತ್ರದುರ್ಗ:
ನಗರದ ಕೊಳಗೇರಿ ಪ್ರದೇಶಗಳಲ್ಲಿ ವಾಸಿಸುತ್ತಿರುವವರಿಗೆ ಖಾಯಂ ಹಕ್ಕುಪತ್ರ ಹಾಗೂ ಮೂಲಸೌಕರ್ಯಗಳನ್ನು ಒದಗಿಸುವಂತೆ ಕರ್ನಾಟಕ ಕೊಳಗೇರಿ ನಿವಾಸಿಗಳ ಸಂಯುಕ್ತ ಸಂಘಟನೆ ಜಿಲ್ಲಾ ಸಮಿತಿಯಿಂದ ನಗರಸಭೆ ಎದುರು ಮಂಗಳವಾರ ಪ್ರತಿಭಟನೆ ನಡೆಸಿ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಲಾಯಿತು.
ಪ್ರವಾಸಿ ಮಂದಿರದಿಂದ ಮೆರವಣಿಗೆ ಮೂಲಕ ಆಗಮಿಸಿ ನಗರಸಭೆಗೆ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿದ ಕೊಳಗೇರಿಗಳು ನಂತರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟಿಸಿ ಮೂಲಸೌಕರ್ಯ ಒದಗಿಸುವಂತೆ ಒತ್ತಾಯಿಸಿದರು.ಹೊಸ ಸಂತೆಮೈದಾನದಲ್ಲಿ ವಾಸಿಸುವ ಕೊಳಗೇರಿಗಳಿಗೆ ಖಾಯಂ ಹಕ್ಕುಪತ್ರ ನೀಡಿ ದೊಡ್ಡ ಬಾಕ್ಸ್ ಚರಂಡಿ ನಿರ್ಮಿಸಬೇಕು.ವೆಂಕಟೇಶ್ವರ ಬಡಾವಣೆಯಲ್ಲಿ ಸ್ವಚ್ಚತೆ ಹಾಗೂ ಕುಡಿಯುವ ನೀರು, ಸಿಟಿ ಬಸ್ ಸಂಚಾರ ಆರಂಭಿಸಬೇಕು.
ಸಿ.ಕೆ.ಪುರ, ಅಜ್ಜಪ್ಪನಹಟ್ಟಿ, ಕರಿಯಮ್ಮನಹಟ್ಟಿ, ಬೇಡರಕಣ್ಣಪ್ಪ ದೇವಸ್ಥಾನ ಮುಂಭಾಗದ ಕೊಳಚೆ ಪ್ರದೇಶ, ಹಿಮ್ಮತ್‍ನಗರ, ವಿಜಯನಗರ, ಕೋಣನಹಟ್ಟಿ, ಬಾರಾ ಇಮಾಮ್ ಮಕಾನ್ ಹಿಂಭಾಗ, ಕರೆಹೆಂಚಿನಕಟ್ಟೆ, ಬರಗೇರಿ ಭೋವಿ ಕಾಲೋನಿಗಳಲ್ಲಿನ ಬಡವರಿಗೆ ಕೂಡಲೆ ಹಕ್ಕುಪತ್ರಗಳನ್ನು ನೀಡಿ ಅಲ್ಲಿಯೂ ಶುದ್ದ ನೀರು ಒದಗಿಸಿ ನಗರ ಸಾರಿಗೆ ಬಸ್ ಬಿಡಬೇಕು.ಗಾಂಧಿನಗರದಲ್ಲಿ ಉತ್ತಮ ಗುಣಮಟ್ಟದ ರಸ್ತೆ ಕಾಮಗಾರಿಗಳನ್ನು ಕೈಗೊಳ್ಳಬೇಕು.ಬುದ್ದ ನಗರದಲ್ಲಿ ಬೀದಿ ನಲ್ಲಿಗಳನ್ನು ಹಾಕಿ ಕುಡಿಯುವ ನೀರು ಪೂರೈಸಬೇಕು.ಹಳ್ಳದೇರಿಯಾ, ಚೋಳಗುಡ್ಡ, ಕಬೀರಾನಂದನಗರ, ನೆಹರು ನಗರದ ಬಡವರಿಗೆ ಹಕ್ಕುಪತ್ರಗಳನ್ನು ನೀಡಬೇಕು.
ನೆಹರು ನಗರದಲ್ಲಿ ಸಮುದಾಯ ಭವನ ನಿರ್ಮಾಣವಾಗಬೇಕು. ನಗರದಲ್ಲಿರುವ ಬಡವರು ಬಾಡಿಗೆ ಮನೆಗಳಲ್ಲಿ ವಾಸಿಸುತ್ತಿರುವವರಿಗೆ ನಿವೇಶನ/ವಸತಿ ಒದಗಿಸಬೇಕೆಂದು ಪ್ರತಿಭಟನೆಯ ನೇತೃತ್ವ ವಹಿಸಿದ್ದ ಕೆ.ಕೆ.ಎನ್.ಎಸ್.ಎಸ್.ಜಿಲ್ಲಾ ಸಮಿತಿ ಅಧ್ಯಕ್ಷ ಗಣೇಶ್ ಜಿಲ್ಲಾಡಳಿತ ಮತ್ತು ನಗರಸಭೆಯನ್ನು ಆಗ್ರಹಿಸಿದರು.ಎನ್.ರಂಗಸ್ವಾಮಿ, ಇಮಾಂಸಾಬ್, ಮಾರುತೇಶ್‍ರೆಡ್ಡಿ, ಜೀನತಮ್ಮ, ಲೀಲಾವತಿ, ದೀಪ ಸೇರಿದಂತೆ ಕೊಳಗೇರಿಯ ನೂರಾರು ನಿವಾಸಿಗಳು ಪ್ರತಿಭಟನೆಯಲ್ಲಿದ್ದರು.