ನವದೆಹಲಿ:
ಮೋದಿ ಬಯೋಪಿಕ್ ಬಿಡುಗಡೆಗೆ ತಡೆ ಕೋರಿ ಸುಪ್ರೀಂಕೋರ್ಟ್ನಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಯನ್ನು ಸಿಜೆಐ ಪೀಠ ವಜಾ ಗೊಳಿಸಿದೆ.ಸೋಮವಾರದಂದು ಅರ್ಜಿ ವಿಚಾರಣೆ ಕೈಗೆತ್ತಿಕೊಂಡಿದ್ದ ಮುಖ್ಯ ನ್ಯಾಯಮೂರ್ತಿ ರಂಜನ್ ಗೊಗೊಯ್,ತಡೆಗೆ ಸೂಕ್ತ ಕಾರಣಗಳನ್ನು ಮಂಗಳವಾರದಂದು ಸಲ್ಲಿಕೆ ಮಾಡುವಂತೆ ಅರ್ಜಿದಾರರಿಗೆ ಸೂಚಿಸಿತ್ತು.
ಇಂದುವಿಚಾರಣೆ ಮುಂದುವರೆಸಿದ ಕೋರ್ಟ್,ಮೋದಿ ಬಯೋಪಿಕ್ ಇನ್ನೂ ಸೆನ್ಸಾರ್ ಆಗಿರದ ಕಾರಣ ತಡೆ ನೀಡಲು ಸಾಧ್ಯವಿಲ್ಲಎಂದಿದೆ. ಮೋದಿ ಬಯೋಪಿಕ್ ರಿಲೀಸ್ ಮಾಡುವುದರಿಂದ ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ ಹೌದೋ ಇಲ್ಲವೋ ಎನ್ನುವುದನ್ನು ಚುನಾವಣಾ ಆಯೋಗ ನಿರ್ಧರಿಸಬೇಕು ಎಂದೂ ಇದೇ ವೇಳೆ ಹೇಳಿದೆ.
ವಿವೇಕ್ಒಬೇರಾಯ್ ಮೋದಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಒಮಂಗ್ ಕುಮಾರ್ ಚಿತ್ರವನ್ನು ನಿರ್ದೇಶಿಸಿದ್ದಾರೆ.ಈ ಮೊದಲು ಚಿತ್ರ ಏಪ್ರಿಲ್ 5ರಂದು ಬಿಡುಗಡೆ ಮಾಡುವುದಾಗಿ ಘೋಷಿಸಿತ್ತು.ಸುಪ್ರೀಂನಲ್ಲಿ ಅರ್ಜಿ ಸಲ್ಲಿಕೆಯಾದ ಹಿನ್ನೆಲೆಯಲ್ಲಿ ರಿಲೀಸ್ ಮುಂದೂಡಲ್ಪಟ್ಟಿದೆ. ಏಪ್ರಿಲ್ 11ರಂದು ವಿಶ್ವಾದ್ಯಂತ ಮೋದಿ ಬಯೋಪಿಕ್ ತೆರೆಗೆ ಬರಲಿದೆ ಎಂದು ಚಿತ್ರತಂಡ ಘೋಷಿಸಿದೆ.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ








