ತುಮಕೂರು
ನಿಂತಿದ್ದ ಲಾರಿ ಗೆ ಬಸ್ ಡಿಕ್ಕಿ ಹೊಡೆದು ಸುಮಾರು ಮೂವರು ವಿದ್ಯಾರ್ಥಿಗಳಿಗೆ ಗಂಭೀರ ಗಾಯಗಳಾಗಿದ್ದು ಆಸ್ಪತ್ರೆಗೆ ಸಾಗಿಸಲಾಗಿದೆ ಎಂದು ವರದಿಯಾಗಿದೆ ಅಪಘಾತಕ್ಕೆ ಬಸ್ ಚಾಲಕನ ನಿರ್ಲಕ್ಷವೇ ಕಾರಣ ಎಂದು ತಿಳಿದು ಬಂದಿದೆ
ಕೆಎಸ್‍ಆರ್‍ಟಿಸಿ ಬಸ್‍ವೊಂದು ಊರುಕೆರೆ ಬಳಿ ನಿಂತಿದ್ದ ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಪ್ರಯಾಣಿಕರಿಗೆ ಹಾಗೂ ಕಂಡಕ್ಟರ್‍ಗೆ ಗಾಯಗಳಾಗಿವೆ. ಇನ್ನೂ ಈ ಅಪಘಾತದಿಂದ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಒಬ್ಬ ಬಾಲಕಿಗೆ ಮಾತ್ರ ಕಾಲು ಹೆಚ್ಚು ಪೆಟ್ಟಾಗಿ ಅದನ್ನು ಬಿಟ್ಟರೆ ಉಳಿದ 8 ಜನರಿಗೆ ಗಾಯಗಳಾಗದ್ದು ಅವರಿಗೆ ಯಾವುದೇ ಭಯವಿಲ್ಲದೇ ಚಿಕಿತ್ಸೆಯನ್ನು ನೀಡಲಾಗುತ್ತಿದೆ ಈ ಬಗ್ಗೆ ನಾವಾಗಲೇ ವರದಿಯನ್ನು ಪಡೆದುಕೊಂಡಿದ್ದು ಸೂಕ್ತ ಕ್ರಮವನ್ನು ಕೈಗೊಳ್ಳಲಾಗುತ್ತದೆ ಎಂದು ಜಿಲ್ಲಾಧಿಕಾರಿ ರಾಕೇಶ್‍ಕುಮಾರ್ ತಿಳಿಸಿದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ
