ಹೊಸದುರ್ಗ:
ಭೂಸ್ವಾಧೀನ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ವಾಪಸ್ಸು ಪಡೆಯಬೇಕ್ಕೆಂದು ರಾಜ್ಯ ಸರಕಾರವನ್ನು ಓತ್ತಾಯಿಸಿ ರಾಜ್ಯ ರೈತ ಸಂಘ ತಾಲೂಕು ಘಟಕದ ವತಿಯಿಂದ ತಾಲೂಕಿನ ಹಾಗಲಕೆರೆ ಹ್ಯಾಂಡ್ ಪೋಸ್ಟ್ ಬಳಿ ರಸ್ತೆ ತಡೆದು ಪ್ರತಿಭಟನೆ ನಡೆಸಿದರು.
ಸೋಮವಾರ ಜಮಾಯಿಸಿದ್ದ ನೂರಾರು ರೈತರು, ರಾಜ್ಯ ಸರಕಾರ ಭೂಸ್ವಾಧೀನ ಕಾಯ್ದೆಗೆ ತಿದ್ದುಪಡಿಯನ್ನು ತರುವ ಮೂಲಕ ರೈತ ಸಮುದಾಯಕ್ಕೆ ದ್ರೋಹ ಬಗೆದಿದೆ.ದೇಶದಲ್ಲಿ 2014ಕ್ಕೂ ಮೊದಲು ಇದ್ದ ಭೂಸ್ವಾನಕಾಯ್ದೆ ರಿಯಲ್ ಎಸ್ಟೆಟ್ ಹಾಗೂ ಕೈಗಾರಿಕೆಗಳ ಪರವಾಗಿತ್ತು .
ಇದರಿಂದ ಆಗುತ್ತಿದ್ದ ಅನ್ಯಾಯವನ್ನು ತೀರ್ವವಾಗಿ ಪ್ರತಿಭಟಿಸಿದ್ದ ಹಿನ್ನೆಲೆಯಲ್ಲಿ ಸಂಘಟನೆಗಳ ಓತ್ತಾಯದ ಮೇರೆಗೆ ಅಂದಿನ ಯುಪಿಎ ಸರಕಾರ ಭೂಸ್ವಾಧೀನ ಪ್ರಕ್ರಿಯೆಯಲ್ಲಿ ಬದಲಾವಣೆ ಮಾಡಿತ್ತು.ರೈತರಒಪ್ಪಿಗೆಯಿಲ್ಲದೇ ಭೂಸ್ವಾನ ಮಾಡುವಂತ್ತಿಲ್ಲ. ರೈತರಿಗೆ ನೀಡುವ ಪರಿಹಾರವು ಮಾರುಕಟ್ಟೆ ಧರದ ನಾಲ್ಕು ಪಟ್ಟುಕೊಡಬೇಕು. ನಗರ ಪ್ರದೇಶಕೆ ಒಳಗಾಗಿದ್ದರೇ ಮಾರುಕಟ್ಟೆದರಕ್ಕೆಎರಡು ಪಟ್ಟುಕೊಡಬೇಕು ಎಂಬಿತ್ಯಾದಿ ನಿಯಮಗಳನ್ನು ಒಳಗೊಂಡಿತ್ತು. ಇವೆಲ್ಲವುಗಳನ್ನು ಒಳಗೊಂಡಿದ್ದ ಭೂಸ್ವಾಧೀನ ಕಾಯ್ದೆಯನ್ನು ಈಗೀನ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿ ಸರಕಾರ ತಿದ್ದುಪಡಿ ತಂದು ಈ ಹಿಂದೆಯಿದ್ದ ಜಾರಿಯಲ್ಲಿದ್ದ ಅವಕಾಶಗಳನ್ನು ಕೈಬಿಟ್ಟು ಜಿಲ್ಲಾಕಾರಿಗಳಿಗೆ ಹೆಚ್ಚಿನ ಅಧಿಕಾರ ನೀಡಿ ರೈತ ವಿರೋಧಿ ನೀತಿಯನ್ನು ಅನುಸರಿಸಿದೆ.ಈ ಕೂಡಲೇ ಸರಕಾರ ರೈತ ವಿರೋಧಿ ನಿಯಮಗಳನ್ನು ವಾಪಸ್ಸು ಪಡೆಯಬೇಕು ಎಂದು ಆಗ್ರಹಿಸಿದರು.
ಈ ವೇಳೆ ತಾಲೂಕು ರೈತ ಸಂಘದ ಅಧ್ಯಕ್ಷ ರಮೇಶ್, ಜಿಲ್ಲಾ ಕಾರ್ಯಧ್ಯಕ್ಷ ಬೈಲಪ್ಪ, ತಾಲೂಕು ಕಾರ್ಯದರ್ಶಿ ಶಿವಕುಮಾರ್, ಗೌರವಾಧ್ಯಕ್ಷರಾದ ಸೋಮೇನಹಳ್ಳಿ ಸ್ವಾಮಿ, ಲಿಂಗರಾಜು, ಅರಳಿಹಳ್ಳಿ ಬೋರೇಶ್, ರೈತ ಮುಖಂಡರಾದ ದೇವೇಂದ್ರಪ್ಪ, ಕರಿಸಿದ್ದಯ್ಯ, ಕಿಟ್ಟಪ್ಪ ಮತ್ತಿತರಿದ್ದರು.
ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ