ಬಸ್ತಿಹಳ್ಳಿ : ಕೆಸರು ಗದ್ದೆಯಾದ ಗ್ರಾಮದ ರಸ್ತೆ

ತಿಪಟೂರು :

     ತಾಲ್ಲೂಕಿನ ನೊಣವಿನಕೆರೆ ಹೋಬಳಿ ನೆಲ್ಲಿಗೆರೆ ಗ್ರಾಮ ಪಂಚಾಯಿತಿಗೆ ಸೇರಿದ ಬಸ್ತಿಹಳ್ಳಿ ಗ್ರಾಮದ ಮೂಲಕ ಹಾದು ಹೋಗಿರುವ ನೊಣವಿನಕೆರೆ-ಬುರುಡೆಘಟ್ಟದ ರಸ್ತೆ ಸಂಪೂರ್ಣವಾಗಿ ಹಾಳಾಗಿದ್ದು ಬರಗಾಲದಲ್ಲು ನಾಟಿಮಾಡವ ಈ ರಸ್ತೆಯು ಯಾವ ದುಃಸ್ಥಿತಿಯಲ್ಲಿ ಇದೆ ಎಂದರೆ ಸಂಪೂರ್ಣ ಕೆಸರುಮಯ ನಿಂದ ಕೂಡಿದ್ದು ಇನ್ನೇನು ನಾಟಿ ಮಾಡಿದರೆ ಬೆಳೆಗಳನ್ನು ಬೆಳೆಯುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

      ಇನ್ನೂ ಇಲ್ಲಿ ನಿಲ್ಲುವ ಕೊಳಚೆ ನೀರು ಸಾಂಕ್ರಾಮಿಕ ರೋಗವನ್ನು ಹರಡುವ ಕೇಂದ್ರಗಳಾಗುತ್ತಿದ್ದು, ನೀರಿನಲ್ಲಿ ಸೊಳ್ಳೆಗಳು ಹಾಗೂ ಕ್ರಿಮಿಕೀಟಗಳ ಹಾವಳಿ ಹೆಚ್ಚಾಗಿದ್ದು ಮಾರಕ ರೋಗಗಳಾದ ಡೆಂಗ್ಯೂ ಮಲೇರಿಯಾ, ಚಿಕನ್‍ಗುನ್ಯ, ಮಾರಕ ಕಾಯಿಲೆಗಳು ಹೆಚ್ಚಾಗುತ್ತಿದ್ದು ಈಗಾಗಲೇ ಹಲವಾರು ಸಾರ್ವಜನಿಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಂದಂತಹ ನಿದರ್ಶನಗಳಿವೆ.

     ಈ ರಸ್ತೆಯಿಂದ ಈ ಭಾಗದ ವಿ

ದ್ಯಾರ್ಥಿಗಳು, ವಯಸ್ಸಾದವರು ಸಾರ್ವಜನಿಕರು ಪ್ರತಿನಿತ್ಯ ನೊಣವಿನಕೆರೆ ಬುರುಡೇಘಟ್ಟ, ತುರುವೇಕೆರೆ ಹಾಗೂ ತಿಪಟೂರು ಮಾರ್ಗಗಳಿಗೆ ಪ್ರತಿನಿತ್ಯ ಸಂಚರಿಸುವುದರಿಂದ ಸಾರ್ವಜನಿಕರಲ್ಲಿ ಆತಂಕ ಹೆಚ್ಚಾಗಿದ್ದು ಈಗಾಗಲೇ ಹಲವಾರು ಜನ ಈ ರಸ್ತೆಯಲ್ಲಿ ಬಿದ್ದು ಕೈಕಾಲುಗಳನ್ನು ಮುರಿದುಕೊಂಡಿರುವ ಘಟನೆಗಳು ಜರುಗಿವೆ.

      ಸುಮಾರು ತಿಂಗಳುಗಳಿಂದ ಈ ಅವ್ಯವಸ್ಥೆ ಇದ್ದು ಇಲ್ಲಿಯವರೆಗೂ ಸಂಬಂಧಪಟ್ಟ ಗ್ರಾಮ, ತಾಲ್ಲೂಕು, ಜಿಲ್ಲಾ ಪಂಚಾಯಿತಿಯಾಗಲಿ ಹಾಗೂ ಸ್ಥಳೀಯ ಆಡಳಿತ ಸ್ಥಳಕ್ಕೆ ಭೇಟಿ ನೀಡಿದ್ದರು ಯಾವುದೇ ದುರಸ್ತಿ ಕಾಣದೆ ಅಬಿವೃದ್ಧಿಯನ್ನು ಕಾಣದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಗ್ರಾಮ ಪಂಚಾಯಿತಿ ಆಡಳಿತ ಕಣ್ಮುಚ್ಚಿ ಕುಳಿತಿದೆ ಎಂದರೆ ತಪ್ಪಾಗಲಾರದು ಎಂದು ರಾಜಣ್ಣ ನೇರವಾಗಿ ಆರೋಪಿಸಿದರು.

     ಯಾವುದೇ ಪ್ರಾಣಾಪಾಯವಾಗುವ ಮುಂಚೆ ಗ್ರಾಮ ಪಂಚಾಯಿತಿಯವರು ಎಚ್ಚೆತ್ತುಕೊಂಡು ರಸ್ತೆಯನ್ನು ಆದಷ್ಟು ಬೇಗ ದುರಸ್ತಿ ಮಾಡಿ ಕೊಡಬೇಕೆಂದು ಇದೇ ವೇಳೆ ಅವರು ಆಗ್ರಹಿಸಿದರು

ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook page ಲೈಕ್ ಮಾಡಿ

Recent Articles

spot_img

Related Stories

Share via
Copy link