ಪ್ರೀತ್ಸೆ ಅಂತ ಕಾಟ ಕೊಟ್ಟ ಕಾಮುಕ ಅಂದರ್

ಬೆಂಗಳೂರು

          ಪ್ರೀತ್ಸೆ ಪ್ರೀತ್ಸೆ ಎಂದು ಕಾಟ ಕೊಡುತ್ತಿದ್ದ ಕಾಮುಕನಿಂದ ಬೇಸತ್ತು ವಿವಾಹಿತ ಮಹಿಳೆಯೊಬ್ಬರು ಆತ್ಮಹತ್ಯೆಗೆ ಯತ್ನಿಸಿದ ಪ್ರಕರಣ ದಾಖಲಿಸಿದ್ದ ಚನ್ನಮ್ಮನಕೆರೆ ಅಚ್ಚುಕಟ್ಟು ಪೊಲೀಸರು ಕಾಮುಕನನ್ನು ಬಂಧಿಸಿ ಜೈಲಿಗಟ್ಟಿದ್ದಾರೆ.

         ಚನ್ನಮ್ಮನ ಕೆರೆ ಅಚ್ಚುಕಟ್ಟಿನ ಮಂಜುನಾಥ ಕಾಲನಿಯ ಪ್ರಕಾಶ್ ಅಲಿಯಾಸ್ ಲಕ್ಕಿ (20), ಬಂಧಿತ ಕಾಮುಕನಾಗಿದ್ದಾನೆ. ಆರೋಪಿ ಲಕ್ಕಿ ವಿವಾಹಿತ ಮಹಿಳೆಯ ಹಿಂದೆ ಬಿದ್ದು ಪ್ರೀತಿಸುವಂತೆ ಕಾಟ ಕೊಡುತ್ತಿದ್ದನು. ಮಹಿಳೆಯು ಮನೆಯಿಂದ ಹೊರಬರುವುದನ್ನೆಕಾದು ಕುಳಿತು ಬಲವಂತವಾಗಿ ಮಾತನಾಡಿಸಿ, ಹೇ, ಹಾಯ್, ಹಲೋ ಹೇಳಿ ಕೈ ಸನ್ನೆ ಮಾಡುತ್ತಿದ್ದನು. ಮಹಿಳೆಗೆ ಮದುವೆಯಾಗಿ ನಾಲ್ಕು ವರ್ಷದ ಮಗುವಿದೆ ಎನ್ನುವುದು ಗೊತ್ತಿದ್ದರೂ ಕಾಮುಕ ಹಿಂದೆ ಬಿದ್ದು ಪೀಡಿಸುತ್ತಿದ್ದನು. ಸತತ ಐದು ತಿಂಗಳಿನಿಂದ ಮಹಿಳೆಗೆ ನಿರಂತರವಾಗಿ ಹೀಗೆ ಕಾಟ ಕೊಡುತ್ತಿದ್ದನು.

          ಮಹಿಳೆಯ ಪತಿ ಜನಾಧರ್ನ್ ಓಲಾ ಚಾಲಕರಾಗಿದ್ದು ಬೆಳಗ್ಗೆ 10 ಕ್ಕೆ ಕೆಲಸಕ್ಕೆ ಹೋದರೆ ರಾತ್ರಿ 10 ಕ್ಕೆ ಮನೆಗೆ ವಾಪಸ್ ಬರುತ್ತಿದ್ದರು. ಇದನ್ನೇ ದುರುಪಯೋಗ ಪಡಿಸಿಕೊಂಡ ಸೈಕೋ, ಮನೆ ಮುಂದೆ ಬಂದು ನಿಲ್ಲುತ್ತಿದ್ದನು. ಅಷ್ಟೆ ಅಲ್ಲದೆ ನಿನ್ನ ಗಂಡ ಮನೆಯಲ್ಲಿ ಇರುವುದಿಲ್ಲ. ನನ್ನ ನಂಬರ್ ತಗೋ, ಅವನಿಲ್ಲದ ವೇಳೆ ನನಗೆ ಕಾಲ್ ಮಾಡು. ನಾನು ನಿನ್ನ ಮನೆಗೆ ಬರುತ್ತೇನೆ ಎಂದು ಕಾಟ ಕೊಡುತ್ತಿದ್ದನು.

         ಕಾಮುಕನ ಕಾಟದಿಂದ ನೊಂದು ಮಹಿಳೆ ಪತಿಗೆ ವಿಷಯ ತಿಳಿಸಿದ್ದಾರೆ. ಜನಾಧರ್ನ್ ಕಳೆದ ಎರಡು ತಿಂಗಳ ಹಿಂದೆಯೆ ಲಕ್ಕಿಯನ್ನು ಕರೆಸಿ ಎಚ್ಚರಿಕೆ ನೀಡಿದ್ದರು. ಆದರೆ ಆರೋಪಿ ಬುದ್ದಿ ಕಲಿತಿರಲಿಲ್ಲ. ಕಳೆದ ಡಿಸೆಂಬರ್ 11 ರಂದು ಮಹಿಳೆ ಮನೆ ಮುಂದಿನ ರಸ್ತೆಯಲ್ಲಿ ತೆರಳುವಾಗ ಕೈ ಹಿಡಿದು ಎಳೆದಾಡಿದ್ದಾನೆ.

          ಕೊನೆಗೆ ಯುವಕನ ಕಾಟಕ್ಕೆ ಬೇಸತ್ತ ಮಹಿಳೆ ಡಿ.12 ರಂದು ಜಿರಳೆ ಪೌಡರ್ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಸದ್ಯಕ್ಕೆ ಮಹಿಳೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ನೊಂದ ಮಹಿಳೆ ಹಾಗೂ ಆತನ ಪತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿದ್ದರು. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.

 ಪ್ರಜಾಪ್ರಗತಿಯಿಂದ ತಾಜಾ ಸುದ್ದಿಗಾಗಿ ಪ್ರಜಾಪ್ರಗತಿ facebook pageಲೈಕ್ ಮಾಡಿ 

Recent Articles

spot_img

Related Stories

Share via
Copy link